ಶಿರಾ:-ಇತಿಹಾಸ ಪ್ರಸಿದ್ದ ಮಾಗೋಡು ಶ್ರೀ ರಂಗನಾಥ ಸ್ವಾಮಿ ಯ ಜಲದಿ ಉತ್ಸವ.
ತಾಲೂಕಿನ ತಾಲ್ಲೂಕು ಐತಿಹಾಸಿಕ ಶ್ರೀ ಕಂಬದ ರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸ್ವಾಮಿಯ ಜಲದಿ ಉತ್ಸವ ಅದ್ಧೂರಿಯಾಗಿ ಜರುಗಿತು. ಸ್ವಾಮಿಗೆ ಹರಕೆ ತೀರಿಸುವ ಭಕ್ತಾದಿಗಳು ಪೂಜೆ ನೇರವೇರಿಸಿದರು. ಭಕ್ತರ ಬೇಡಿಕೆ ಈಡೇರಿಸುವ ನಂಬಿಕೆಯಿಂದ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಉತ್ಸವಮೂರ್ತಿ ಜತೆ ಭಕ್ತರು ಸಾಲುಗಟ್ಟಿ ಬೆಳಗಿನ ಸೂರ್ಯೋದಯ ಸಮಯದಲ್ಲಿ ನಿಂತಿದ್ದರು. ಮದುವೆ, ಸಂತಾನ ಭಾಗ್ಯ ಮತ್ತು ವಿವಿಧ ರೋಗ-ರುಜಿನಗಳ ಪರಿಹಾರಕ್ಕೆ ಹರಕೆ ಹೊತ್ತ ಭಕ್ತರು ಸ್ಥಳದಲ್ಲೇ ಸ್ನಾನ ಮಾಡಿ ವಿಷೇಷ ಪೂಜೆ ನಡೆಸಿಕೊಡುತ್ತಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ಟಿ ಬಿ ಜಯಚಂದ್ರ ಸೇರಿದಂತೆ ಅನೇಕ ಗಣ್ಯರು ಮುಖಂಡರು ಮತ್ತು ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.
ವರದಿ : ಶಿರಾ ಶ್ರೀಮಂತ್.

