ದಂಡಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ದಕ್ಷ ಅಧಿಕಾರಿ ಶ್ರೀಮತಿ ಮಮತಾ ಅವರಿಗೆ ಬೀಳ್ಕೊಡುಗೆ.

 ಶಿರಾ:- ದಂಡಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ದಕ್ಷ ತಹಸಿಲ್ದಾರ್ ಶ್ರೀಮತಿ ಮಮತಾ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ನೆರವೇರಿಸಿದ ಮಾಜಿ ಸಚಿವ ಟಿ ಬಿ ಜಯಚಂದ್ರ.


ಕಳೆದ ಸುಮಾರು ಎರಡು ವರ್ಷಗಳಿಂದ ತಾಲ್ಲೂಕಿನ ಜನರ ಅಭಿಮಾನದಿಂದ ಸೇವೆ ಸಲ್ಲಿಸಿ ಸರಳ ವ್ಯಕ್ತಿತ್ವದ ಸಜ್ಜನ ಜನನುರಾಗಿ ಸ್ನೇಹಮಯಿ ತಹಸಿಲ್ದಾರ್ ಶ್ರೀಮತಿ ಮಮತಾ ಅವರಿಗೆ ಮಡಿಲು ತುಂಬಿ,ಆರತಿ ಬೆಳಗಿ, ಅಪೂರ್ವ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಮಾಜಿ ಸಚಿವರಾದ  ಟಿ.ಬಿ.ಜಯಚಂದ್ರ ದಂಪತಿಗಳು  ನಗರದ ಗ್ರಾಮ ದೇವತೆ ಶ್ರೀ ದುರ್ಗಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.


ಇದೆ ವೇಳೆ ಶಿರಾ ದಂಡಧಿಕಾರಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ದಕ್ಷ ತಹಸಿಲ್ದಾರ್ ಶ್ರೀಮತಿ ಮಮತಾ ರವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.


ಮಾಜಿ ಪುರಸಭಾ ಅಧ್ಯಕ್ಷ ಪಿ.ಎಸ್. ತ್ಯಾಗರಾಜ್,ಮಾಜಿ ನಗರಸಭಾ ಸದಸ್ಯ ಎಂ.ಎನ್.ರಾಜು, ಯುವ ಕಾಂಗ್ರೆಸ್ ಅಧ್ಯಕ್ಷ ಸುನಿಲ್,ನಾಗೇಶ್,ದುರ್ಗಾದಾಸ್ ಸೇರಿದಂತೆ ದೇವಾಲಯದ ಆಡಳಿತ ಮಂಡಳಿ ಸದಸ್ಯರು,ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


ವರದಿ : ಶಿರಾ ಶ್ರೀಮಂತ್.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು