ಶಾಸಕ ಶ್ರೀನಿವಾಸ್ ಅವರ ಅಭಿವೃದ್ಧಿಯ ಹಿಂದೆ ನಾವೆಲ್ಲರೂ ಇದ್ದೇವೆ ಮುಖಂಡ ಕೋಳಿ ಶಿವಣ್ಣ.

 ಗುಬ್ಬಿ : 20 ವರ್ಷಗಳ ಕಾಲ ಆಡಳಿತ ಮಾಡಿರುವ ಶಾಸಕ ಶ್ರೀನಿವಾಸ್ ಅವರ ಅಭಿವೃದ್ಧಿಯ ಹಿಂದೆ ನಾವೆಲ್ಲರೂ ಸಹ ಇದ್ದೇವೆ ಎಂದು ಮುಖಂಡ ಕೋಳಿ ಶಿವಣ್ಣ ತಿಳಿಸಿದರು.


 ತಾಲೂಕಿನ ನಿಟ್ಟೂರಿನ ಗುಹೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ವಾಸಣ್ಣ ಅಭಿಮಾನಿಗಳಿಂದ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ಕಾರ್ಯಕ್ರಮದಲ್ಲಿ ರಾಜೀನಾಮೆ ಸಲ್ಲಿಸಿ ಮಾತನಾಡಿದವರು ಶ್ರೀನಿವಾಸ್ ಅವರು ಯಾವುದೇ ಜಾತಿ ಧರ್ಮ ದ್ವೇಷವಿಲ್ಲದೆ ಆಡಳಿತ ಮಾಡುತ್ತಿದ್ದು ಅವರು ಎಲ್ಲಿ ತರುಳುತ್ತಾರೋ ನಾವೆಲ್ಲರೂ ಸಹ ಅಲ್ಲಿಗೆ ತೆರಳುತ್ತೇವೆ ಎಂದು ತಿಳಿಸಿದರು.

 ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ ನಿಟ್ಟೂರು ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಶಾಸಕರು ಎಲ್ಲರನ್ನೂ ಸಮಾನರಾಗಿ ಕಾಣುತ್ತಾರೆ ಈ ಬಾರಿಯೂ ಸಹ ಅವರು ಗೆಲ್ಲುವುದು ಶತಸಿದ್ಧ ಹಾಗಾಗಿ ಅವರು ಎಲ್ಲಿ ತೆರಳುತ್ತಾರೋ ನಾವೆಲ್ಲರೂ ಸಹ ಅಲ್ಲಿಯೇ ಇದ್ದುಕೊಂಡು ಅವರನ್ನು ಗೆಲ್ಲಿಸಿಕೊಂಡು ಬರುತ್ತವೆ ಎಂದು ತಿಳಿಸಿದರು.

 ಮುಖಂಡ ಹೋರಿ ಗಂಗಣ್ಣ ಮಾತನಾಡಿ ಶ್ರೀನಿವಾಸ್ ಅವರು ಮುಂದಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಬಹುತೇಕ ಖಚಿತವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಶ್ರೀನಿವಾಸ್ ಮೂಲಕ ಗೆಲುವು ಸಾಧಿಸುತ್ತಾರೆ ಎಂದು ತಿಳಿಸಿದರು.

  ವಾಸಣ್ಣ ಅಭಿಮಾನಿ ಅಸಿನ ಭಾನು ಮಾತನಾಡಿ ವಾಸಣ್ಣ ಯಾವ ಸಮಯದಲ್ಲಿ ಕಷ್ಟ ಎಂದು ಅವರ ಮನೆ ಬಾಗಿಲಿಗೆ ಹೋದರು ನಮಗೆ ಸಹಾಯ ಮಾಡಿದ್ದಾರೆ ಬೇರೆ ಯಾರೇ ಆಗಿದ್ದರೂ ಸಹಾಯ ಮಾಡಲು ಮುಂದೆ ಬರುತ್ತಿರಲಿಲ್ಲ ಹಾಗಾಗಿ ವಾಸಣ್ಣ ಎಲ್ಲಿರುತ್ತಾರೋ ನಾವೆಲ್ಲರೂ ಅಲ್ಲಿಯೇ ಇರುತ್ತೇವೆ ಎಂದು ತಿಳಿಸಿದರು.


 ಮುಖಂಡ ವೆಂಕಟೇಶ ಮಾತನಾಡಿ ಪ್ರತಿ ವಾರವು ಸಹ ವಾಸಣ್ಣ ಅಭಿಮಾನಿಗಳು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ರಾಜೀನಾಮೆಯನ್ನು ಸಲ್ಲಿಸುತ್ತಲೇ ಇದ್ದಾರೆ ಮುಂದಿನ ದಿನದಲ್ಲಿ ಅವರು ಕಾಂಗ್ರೆಸ್ ಗೆ ಹೋಗುವುದು ನಿಚ್ಚಳವಾಗಿದ್ದು ತಾವೆಲ್ಲರೂ ಸಹ ಅವರ ಜೊತೆ ಇರಬೇಕು ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಕನಿಗಪ್ಪ, ಗೋಪಾಲ್, ರಾಮಲಿಂಗಯ್ಯ, ಶಿವಣ್ಣ, ಪವನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು