ಮಧುಗಿರಿ : ಜಗತ್ತಿನಲ್ಲಿ ಮಾನವೀಯ ಮೌಲ್ಯವುಳ್ಳ ಜನರಲ್ಲೇ ಧರ್ಮಾಚರಣೆಯಿದ್ದು ಅಂತಹವರಲ್ಲಿ ದೇವರನ್ನು ಕಾಣಬೇಕೆಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಎಮ್ಮೆ ತಿಮ್ಮನಹಳ್ಳಿಯಲ್ಲಿ ನಡೆದ ಶ್ರೀ ಆಂಜನೇಯಸ್ವಾಮಿ ದೇವರ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ಸಕುಟುಂಬ ಸಮೇತರಾಗಿ ಭಾಗವಹಿಸಿ ಮಾತನಾಡಿದ ಅವರು ಕಲಿಯುಗದಲ್ಲಿ ಧರ್ಮಾಚರಣೆ ತುಂಬಾ ಕಷ್ಟ. ಇಂತಹ ಧರ್ಮಾಚರಣೆಯನ್ನು ಪಾಲಿಸುವ ಮಾನವರಲ್ಲಿ ಸ್ವತಃ ದೈವತ್ವ ನೆಲಸಿರುತ್ತದೆ. ಇಂತಹ ಜನರೇ ಗುರುವಾಗಿ ನಮಗೆಲ್ಲ ಮಾರ್ಗದರ್ಶನ ನೀಡುತ್ತಿರುತ್ತಾರೆ. ಧರ್ಮವನ್ನು ನಾವು ಪಾಲಿಸಿದರೆ ಧರ್ಮ ನಮ್ಮನ್ನು ಕಾಯುತ್ತದೆ ಎಂಬ ಹಿರಿಯರ ಮಾತು ಸುಳ್ಳಲ್ಲ. ಇಂದು ಎಮ್ಮೆ ತಿಮ್ಮನಹಳ್ಳಿಯಲ್ಲಿ ಶ್ರೀ ಲಕ್ಷ್ಮೀನರಸಿಂಹ ಸಮೇತ ಶ್ರೀ ಆಂಜನೇಯ ಹಾಗೂ ಮಹಾಗಣಪತಿಯ
ನೂತನ ವಿಗ್ರಹ ಪ್ರತಿಷ್ಟಾಪನೆಯಲ್ಲಿ ಭಾಗವಹಿಸಿದ್ದು ಬದುಕಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಹಾಗೂ ತಾಲೂಕಿನ ಜನರ ಸೇವೆಗೆ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿದ್ದೇನೆ. ಮುಂದಿನ ದಿನಗಳಲ್ಲಿ ಅನ್ನದಾತನ ಸರ್ಕಾರ ಬರಲಿ. ಎಲ್ಲ ಬಡವರ ಬದುಕು ಹಸನಾಗಲಿ ಎಂದು ಬೇಡಿದ್ದಾಗಿ ತಿಳಿಸಿದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾ„ಪತಿ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಧರ್ಮದ ಆಚರಣೆಯು ಇಂದು ಪ್ರತಿಗ್ರಾಮದಲ್ಲಿ ಹೆಚ್ಚಾಗಿದೆ. ಶಾಲೆಗಳಂತೆ ದೇಗುಲಗಳು ಮೌಲ್ಯಯುತ ಬದುಕನ್ನು ರೂಪಿಸಲು ಸಹಕಾರಿಯಾಗಿದ್ದು, ಶಾಲೆ ಶಿಕ್ಷಣವನ್ನು ನೀಡಿದರೆ ದೇಗುಲ ಹಾಗೂ ಧರ್ಮಪಾಲನೆ ಸಂಸ್ಕಾರವನ್ನು ಕಲಿಸುತ್ತದೆ. ಸನಾತನ ಧರ್ಮದಲ್ಲಿ ಮಾನವರ ಕರ್ತವ್ಯಗಳನ್ನು ತಿಳಿಸಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದೆ. ಇಂತಹ ಧರ್ಮದ ಆಚರಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಬಾಕ್ಸ್ :
ಧರ್ಮಾಚರಣೆ ನಮ್ಮೆಲ್ಲರ ಕರ್ತವ್ಯ. ಶಾಲೆ ವಿದ್ಯೆ ನೀಡಿದರೆ ಧರ್ಮ ದೇಗುಲ ಸಂಸ್ಕಾರವನ್ನು ಕಲಿಸುತ್ತದೆ. ಸಂಸ್ಕಾರಯುತ ವಿದ್ಯೆಗೆ ಮಾತ್ರ ಅದಮ್ಯ ಶಕ್ತಿ ಹಾಗೂ ಬೆಲೆ ಇರುತ್ತದೆ.- ಡಾ.ಹನುಮಂತನಾಥ ಸ್ವಾಮೀಜಿ.
ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜು, ಶಾಸಕರ ಮಡದಿ ಗಂಗಮ್ಮ, ಪುತ್ರ ಕಾರ್ತಿಕ್, ಜೆಡಿಎಸ್ ಮುಖಂಡರು, ಗ್ರಾಮಸ್ಥರು, ದೇಗುಲ ಅಭಿವೃದ್ಧಿ ಸಮಿತಿ ಪದಾ„ಕಾರಿಗಳು, ಹಾಗೂ ಇತರರು ಇದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
