ಚಿಕ್ಕನಾಯಕನಹಳ್ಳಿ : ಚಿ.ನಾ.ಹಳ್ಳಿ ತಾಲ್ಲೂಕಿಗೆ ಶೈಕ್ಷಣಿಕ ಸಂಸ್ಥೆಗಳ ಅವಶ್ಯಕತೆ ಇದೆ, ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸುವ ಬಗ್ಗೆ ಚಿಂತಿಸುವತ್ತ, ಸರ್ಕಾರವನ್ನು ಈ ಬಗ್ಗೆ ಗಮನ ಸೆಳೆಯುವತ್ತ ಹೋರಾಟಗಳು, ವೇದಿಕೆಗಳು ನಿರ್ಮಾಣವಾಗಬೇಕು, ಈ ನಿಟ್ಟಿನಲ್ಲಿ ಪೂರಕವಾದ ವಾತಾವರಣ ಸೃಷ್ಠಿಸಲು ನಾವೆಲ್ಲರೂ ಮುಂದಾಗಬೇಕು ಎಂದು ರಾಜಕೀಯ ಚಿಂತಕ ರಮೇಶ್ ಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ 10 ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ತಾಲ್ಲೂಕಿನ ಶೈಕ್ಷಣಿಕ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು.
ತಾಂತ್ರಿಕ ಮತ್ತು ಉನ್ನತ ಶಿಕ್ಷಣಕ್ಕಾಗಿ ತಾಲ್ಲೂಕಿನ ವಿದ್ಯಾರ್ಥಿಗಳು ಬೇರೆ ತಾಲ್ಲೂಕು ಮತ್ತು ಜಿಲ್ಲೆಗಳಿಗೆ ಹೋಗುತ್ತಿದ್ದಾರೆ, ಶೈಕ್ಷಣಿಕ ಅಗತ್ಯತೆ ತಾಲ್ಲೂಕಿಗೆ ಬಹಳ ಇದ್ದು ಯಾರೂ ಸಹ ಈ ಬಗ್ಗೆ ಚಿಂತಿಸುತ್ತಿಲ್ಲ, ಶೈಕ್ಷಣಿಕ ಅಭಿವೃದ್ದಿ ತಾಲ್ಲೂಕಿನಲ್ಲಿಯೇ ಆದರೆ ವಿದ್ಯಾಥರ್ಿಗಳಲ್ಲಿ ಸ್ಮತಕ ಮನೋಭಾವನೆ ಬೆಳೆಯಲು ಸಹಕಾರಿಯಾಗುತ್ತದೆ ಎಂದ ಅವರು, ಇಂದು ಸಾಕ್ಷರತೆ ಮನೋಭಾವ ಪ್ರತಿಯೊಬ್ಬರಿಗೂ ಅಗತ್ಯತೆ ಇದೆ, ಓದಲು, ಬರೆಯಲು ಸಾಕ್ಷರತೆ ಎನ್ನುವುದು ಕೆಲ ವರ್ಷಗಳ ಹಿಂದಿನ ಮಾತಾಗಿತ್ತು ಆದರೆ ಈಗ ಕಂಪ್ಯೂಟರ್, ಮೊಬೈಲ್ ಬಳಸುವುದು ಕಲಿತುಕೊಳ್ಳುವುದೇ ಸಾಕ್ಷರತೆಯಾಗಿದೆ ಎಂದರು.
ಪತ್ರಕರ್ತ ಮಹೇಶ್ ರಂಗನಕೆರೆ ಮಾತನಾಡಿ, ತಾಲ್ಲೂಕು ಬೇರೆ ಎಲ್ಲಾ ವಿಷಯಗಳಲ್ಲೂ ಮುಂದಿದೆ ಆದರೆ ಶೈಕ್ಷಣಿಕ ವಿಷಯದಲ್ಲಿ ಕಾಲೇಜುಗಳು ಇಲ್ಲವೆಂಬ ಕೊರತೆಯಿದೆ, ನಾವೆಲ್ಲರೂ ಶೈಕ್ಷಣಿಕ ಪ್ರತಿಕೂಲ ಆರಂಭವಾಗಲು ವೇದಿಕೆ ನಿರ್ಮಾಣ ಸೃಷ್ಠಿಸಬೇಕು ಎಂದರು.
ಕಸಬಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದಮನೆ ಮಾತನಾಡಿ, ತಾಲ್ಲೂಕಿನಲ್ಲಿ ಸಾಂಸ್ಕೃತಿಕ ಸಂಘಟನೆಯ ಬಲವು ಬಹಳ ಗಟ್ಟಿಯಿದೆ, ಆದರೆ ಶೈಕ್ಷಣಿಕ ನೆಲೆಯನ್ನು ಸೃಷ್ಠಿಸಲು ವೇದಿಕೆ ಕೊರತೆಯಿದೆ, ನಾವೆಲ್ಲರೂ ಕಲೆ ಮತ್ತು ಹೋರಾಟದ ಮೂಲಕ ಬೆಳೆದು ಬಂದವರು ಉನ್ನತ ಶೈಕ್ಷಣಿಕ ಆರಂಭವಾಗಲು ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಸ್ನಾತಕೋತ್ತರ ಪದವೀಧರ ಸಂತೋಷ್,ಕಸಬಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸಿ.ಹೆಚ್.ಗಂಗಾಧರ್ ಮಗ್ಗದಮನೆ , ಪತ್ರಕರ್ತ ಮಹೇಶ್ ರಂಗನಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್,ಮತ್ತಿತರರು ಉಪಸ್ಥಿತರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.
