ಮಧುಗಿರಿ : ಬದುಕಿನಲ್ಲಿ ಸ್ವಾರ್ಥವನ್ನು ಬದಿಗಿಟ್ಟವರು ಸಾಧನೆಯ ಜೊತೆಗೆ ಇತರರಿಗೂ ಮಾದರಿಯಾಗುತ್ತಾರೆಂದು ಎಲೆರಾಂಪುರದ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾ„ಪತಿ ಶ್ರೀ ಡಾ.ಹನುಮಂತನಾಥಸ್ವಾಮೀಜಿ ತಿಳಿಸಿದರು.
ತಾಲೂಕಿನ ಮಿಡಿಗೇಶಿ ಹೋಬಳಿಯ ಚಿನ್ನೇನಹಳ್ಳಿಯ ಶ್ರೀ ಶನಿದೇವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಇತರೆ ಸಮಿತಿಯ ಸಹಯೋಗದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜಾ ಹಾಗೂ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು ಜಗತ್ತಿನಲ್ಲಿ ಪ್ರೀತಿಗಿಂತ ಮುಖ್ಯವಾದುದು ಯಾವುದೂ ಇಲ್ಲ. ಎಲ್ಲರನ್ನೂ ಪ್ರೀತಿಯಿಂದ ಕಾಣುವುದೇ ನಿಜವಾದ ಧರ್ಮ. ಹಗೆ ಸಾ„ಸದೆ ಅರಿಷ್ಡವರ್ಗದ ಹತೋಟಿಯಲ್ಲಿರುವ ಮನುಷ್ಯ ಎಲ್ಲವನ್ನು ಸಾ„ಸುತ್ತಾನೆ. ಇಂದು ಉಪವಿಭಾಗದ ಯಾವುದೇ ತಾಲೂಕಿನಲ್ಲಿ ಧರ್ಮಸ್ಥಳ ಸಂಘವು ಈ ಸಾಮೂಹಿಕ ಸತ್ಯನಾರಾಯಣ ಪೂಜೆಗೆ ಆಮಂತ್ರಣವಿಲ್ಲದೆ ನಾನು ಬರುತ್ತಿದ್ದೇನೆ. ಕಾರಣ ಪೂಜ್ಯ ಹೆಗ್ಗಡೆಯವರ ಧರ್ಮಕಾರ್ಯ ನಿಮ್ಮಂತೆ ನನಗೂ ಅಚ್ಚುಮೆಚ್ಚಾಗಿದೆ. ಇಂತಹ ಧರ್ಮದ ಕಾರ್ಯಗಳಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದರು.
ಬಾಕ್ಸ್ :
ಧರ್ಮಸ್ಥಳ ಸಂಘದ ಎಲ್ಲ ಕಾರ್ಯಗಳು ಸಮಾಜಮುಖಿಯಾಗಿದ್ದು ಪೂಜ್ಯರ ಆಶಯದಂತೆ ಸ್ವಾವಲಂಭಿ ಬದುಕನ್ನು ಸಧೃಡವಾಗಿ ಕಟ್ಟಿಕೊಳ್ಳಲು ಈ ಯೋಜನೆಗಳು ಸಹಕಾರಿಯಾಗಿದೆ.- ಕುಂಚಶ್ರೀ.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ತಾಲೂಕು ಯೋಜನಾ„ಕಾರಿ ದಿನೇಶ್, ಪುರಸಭೆ ಸದಸ್ಯ ಲಾಲಪೇಟೆ ಮಂಜುನಾಥ್, ದೇಗುಲದ ಪ್ರಧಾನ ಅರ್ಚಕ ಬಾಲರಾಜ್ ಸ್ವಾಮಿ, ಗ್ರಾ,ಪಂ.ಅಧ್ಯಕ್ಷ ಹನುಮಂತರಾಜು, ಉಪಾಧ್ಯಕ್ಷ ರಾಮಣ್ಣ, ಹಾಗೂ ಇತರರು ಇದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
