''ಪ್ರಗತಿ ಪಥ ರಥಯಾತ್ರೆ'' ವಾಹನಕ್ಕೆ ಹಸಿರು ನಿಶಾನೆ ತೋರಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ.

 ಚಿಕ್ಕನಾಯಕನಹಳ್ಳಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರ ಆಡಳಿತದಲ್ಲಿನ ಜನ ಕಲ್ಯಾಣ ಯೋಜನೆ ಹಾಗೂ ಹಿಂದೆ ಇದ್ದ ಸರ್ಕಾರಗಳಲ್ಲಿನ ವೈಫಲ್ಯದ ಬಗ್ಗೆ ಜನರಲ್ಲಿಗೆ ಹೋಗಿ ಬಿತ್ತರಿಸುವ ಕೆಲಸ ಮಾಡುತ್ತೇವೆ. ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. 



ಪಟ್ಟಣದ ಪ್ರವಾಸಿ ಮಂದಿರದ ಎದುರು ಬಿಜೆಪಿ ಕಚೇರಿಯಲ್ಲಿ ''ಪ್ರಗತಿ ಪಥ ರಥಯಾತ್ರೆ'' ವಾಹನಕ್ಕೆ ಹಸಿರು ನಿಶಾನೆ ತೋರಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ.


 ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿ ಸಾಧನೆ ಹಾಗೂ ಯೋಜನೆ ಜನಸಾಮಾನ್ಯರಿಗೆ ಕೊಟ್ಟಂತ ಪ್ರಯೋಜನ ಸಾರಿ ಹೇಳುವ *''ಪ್ರಗತಿ ಪಥ ರಥಯಾತ್ರೆ ವಾಹನಕ್ಕೆ ಕಾರ್ಯಕರ್ತರ ಸಮ್ಮುಖದಲ್ಲಿ ಚಾಲನೆ ನೀಡಿ 

 ಮಾತನಾಡಿದ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ನಮ್ಮ 

ಸರ್ಕಾರ ರಾಜ್ಯದಲ್ಲಿ ನಾಲ್ಕು ವರ್ಷ ಸಾಧನೆ. ಸನ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕೇಂದ್ರದಲ್ಲಿ 9 ವರ್ಷಗಳ ಜನ ಕಲ್ಯಾಣ, ರಾಷ್ಟ್ರ ಕಲ್ಯಾಣ ಯೋಜನೆಗಳು ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸುವಂತೆ ಮಾಡಿವೆ , ನಾವು ಮಾಡಿರೋ ಯೋಜನೆ, ಸಾಧನೆ ಜನರಿಗೆ ಬೂತ್ ಮಟ್ಟದಲ್ಲಿ ರಥ ವಾಹನ ಸಂಚರಿಸಿ ಮಾಹಿತಿ ತಲುಪಿಸೋ ಕೆಲಸ ಪ್ರಗತಿ ರಥ ಮಾಡಲಿದೆ.

ಜೊತೆಗೆ ನಮ್ಮ ಹಿಂದೆ ಕಾಂಗ್ರೆಸ್ ಹಾಗೂ ಇನ್ನಿತರ ವಿರೋಧ ಪಕ್ಷದವ ನಾಯಕರುಗಳು ರಾಷ್ಟ್ರವನ್ನು ಅಳಬೇಕಾದರೆ ಮಾಡಿದಂತ ವೈಫಲ್ಯದ ಬಗ್ಗೆ ಜನಸಾಮಾನ್ಯ ಹತ್ತಿರ ಹೋಗಿ ಬಿತ್ತರಿಸುವ ಕೆಲಸ ಮಾಡುತ್ತದೆ.


 ನಮ್ಮ ಕಾರ್ಯಕರ್ತರು ಎಲ್ಲಾ ಗ್ರಾಮೀಣ ಪ್ರದೇಶಕ್ಕೆ ಪ್ರಮುಖ ಜನಸಂದಣೆ ಕೂಡಿರುವ ಪ್ರದೇಶದ ರೈತರು ಜನತೆಯ ಮಧ್ಯೆ ರಥಯಾತ್ರೆಯನ್ನು ನಿಲ್ಲಿಸಿ ಸರ್ಕಾರದ ಸಾಧನೆ ತಿಳಿಸುತ್ತಾ ವಿರೋಧ ಪಕ್ಷದ ರಾಷ್ಟ್ರ ಆಡಳಿತದಲ್ಲಿನ ವೈಫಲ್ಯದ ಬಗ್ಗೆ ಬಿತ್ತರಿಸಿ ಜನರನ್ನ ಜಾಗೃತಗೊಳಿಸುತ್ತೇವೆ ಎಂದರು.


ಈ ಸಂದರ್ಭದಲ್ಲಿ

 ಯುವ ಮೋರ್ಚಾ ಅಧ್ಯಕ್ಷರು ಅರಳಿಕೆರೆ ಉಮೇಶ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ನಮ್ಮೆಲ್ಲ ಯುವ ಘಟಕದ ಕಾರ್ಯಕರ್ತರುಗಳು ಸದಸ್ಯರುಗಳು, ಗ್ರಾಮ ಪಂಚಾಯತಿ ಸದಸ್ಯರುಗಳು ತಂಡ ಯಶಸ್ವಿಯಾಗಿ ರಥ ಯತ್ರೆಯನ್ನ ನಡೆಸಿಕೊಡಲಿದೆ ಎಂದರು.


ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ಆರ್. ಕೇಶವಮೂರ್ತಿ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ರಥಯಾತ್ರೆಯನ್ನ ಕಲ್ಪಿಸಿಕೊಟ್ಟಿದ್ದು ತಾಲೂಕಿನ 262 ಬೂತ್ ಗಳಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಧನೆ, ನಮ್ಮ ರಾಜ್ಯ ಸರ್ಕಾರದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಹಾಗೂ ಕಾನೂನು ಸಚಿವ ಜೆಸಿ ಮಾಧುಸ್ವಾಮಿ ಅವರ ಜನಾಕರ್ಷಿತ ಆಡಳಿತದಯೋಜನೆ ವೈಖರಿಯನ್ನ ತಾಲೂಕಿನ ಹಳ್ಳಿಹಳ್ಳಿಗೂ ಮಾಹಿತಿ ರಥಯಾತ್ರೆ ಸಾಗಲಿರುವಾಗ ಪಕ್ಷದ ಜವಾಬ್ದಾರಿತ ಸಂಘಟನೆಗಳ ಮುಖಂಡರುಗಳು ,ಮಂಡಲ ಅಧ್ಯಕ್ಷರು, ಯುವ ಮುಖಂಡರು, ಯುವ ಮೋರ್ಚಾದ ಕಾರ್ಯಕರ್ತರುಗಳಿಂದ ತಂಡ ರಚಿಸಿಕೊಂಡು ಯಶಸ್ವಿಯಾಗಿ ಯಾತ್ರೆಯನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು..

 ಈ ವೇಳೆ ಪುರಸಭಾ ಸದಸ್ಯರಾದ ರೇಣುಕಾ ಪ್ರಸಾದ್, ನಾಗರಾಜ್, ಮುಖಂಡರಾದ ಅಗಸರಹಳ್ಳಿ ಶಿವರಾಜ್, ನಾಮಿನಿ ಸದಸ್ಯರಾದ ಸಿ.ಮಲ್ಲಿಕಾರ್ಜುನ ಸ್ವಾಮಿ, ಮಿಲಿಟರಿ ಶಿವಣ್ಣ, ಸಮಾಜಿಕ ಜಾಲತಾಣ ಅಧ್ಯಕ್ಷ ಶೆಟ್ಟಿ ಕೆರೆ ವಿನಯ್, ಮಣಿಕಂಠ, ಪಕ್ಷದ ಕಾರ್ಯಕರ್ತರುಗಳು ಭಾಗಿಯಾಗಿದ್ದರು.ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು