ಚಿಕ್ಕನಾಯಕನಹಳ್ಳಿ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ "ನ್ಯಾಯಾಂಗ" ಎಂಬ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು "ಸಾಮಾಜಿಕ ನ್ಯಾಯ ದಿನದ" ಅಂಗವಾಗಿ ದಿನಾಂಕ 27-02-2023 ರಂದು ವಿದ್ಯಾರ್ಥಿಗಳಿಗೆ ಕೋರ್ಟ್ ಕಲಾಪಗಳನ್ನು ವೀಕ್ಷಿಸಲು ತಾಲ್ಲೂಕು ಕಾನೂನು ಸೇವಾ ಸಮಿತಿಯ ವತಿಯಿಂದ ಅವಕಾಶ ಮಾಡಿಕೊಡಲಾಯಿತು.
ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ವೆಂಕಟೇಶಪ್ಪ, ಹಾಗೂ ಪ್ರಧಾನ ಸವಿನ್ ನ್ಯಾಯಾಧೀಶರಾದ ಎ ಶ್ರೀನಾಥ್ ವಕೀಲರ ಅಧ್ಯಕ್ಷ ಶೇಖರ್, ಹಾಗೂ ಉಪನ್ಯಾಸಕರು, ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು .
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು
