ಶತಮಾನ ಕಂಡ ಎಂಪಿಜಿಎಸ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ನಡೆಯಿತು.

 ಚಿಕ್ಕನಾಯಕನಹಳ್ಳಿ :ಶತಮಾನ ಕಂಡ ಎಂಪಿಜಿಎಸ್ ಸರ್ಕಾರಿ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಸ್ಥಾನಮಾನ, ಸರ್ಕಾರಿ ಕೆಲಸ, ಉದ್ಯಮಿಗಳಾಗಿ ಸಮಾಜಕ್ಕೆ ಬೆಳಕಾಗಿದ್ದಾರೆ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಪರಶಿವಮೂರ್ತಿ ಹೇಳಿದರು.


ಪಟ್ಟಣದ ಎಂಪಿಜಿಎಸ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಶಾಲೆಯಲ್ಲಿ ಶಿಕ್ಷಣದ ಜೊತೆ ಸಾಂಸ್ಕೃತಿಕ ಚಟುವಟಿಕೆ, ಕ್ರೀಡಾ ಚಟುವಟಿಕೆಗಳನ್ನು ನೀಡುತ್ತಿರುವುದು ಸಂತಸ ಅಂದಿನ ಗಿಂತ ಇಂದು ಸರ್ಕಾರಿ ಶಾಲೆಯು ಮತ್ತಷ್ಟು ಪ್ರಗತಿ ಕಾಣುತ್ತಾ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಎಂದರು.

  ಪುರಸಭಾ ಸದಸ್ಯ ರೇಣುಕಾ ಪ್ರಸಾದ್ (ಶಾಮ್) ಮಾತನಾಡಿ, ಶತಮಾನೋತ್ಸವ ಕಂಡಿರುವ ಎಂಪಿಜಿಎಸ್ ಸರ್ಕಾರಿ ಶಾಲೆಯು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಿಕ್ಷಣದಲ್ಲಿ, ಸಾಂಸ್ಕೃತಿಕ ಕಲರವದಲ್ಲಿ, ಕ್ರೀಡೆಯಲ್ಲಿ ಮುಂದಿರುವುದು ಸಂತಸ ತರುತ್ತಿದೆ ಎಂದರು.


 ಶಿಕ್ಷಣ ಸಂಯೋಜಕ ಪ್ರಕಾಶ್ ಮಾತನಾಡಿ, ಪಟ್ಟಣದಲ್ಲಿ ಶತಮಾನ ಕಂಡ ಶಾಲೆಗಳು ಕೆ ಎಂ ಹೆಚ್ ಪಿ ಎಸ್, ಕುರುಬರಶ್ರೇಣಿ ಶಾಲೆ, ಹಳ್ಳಿಕಾರರ ಬೀದಿ ಶಾಲೆ ಮತ್ತು ಎಂಪಿಜಿಎಸ್ ಶಾಲೆಯಾಗಿದೆ, ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಲ್ಲಿ ತಮ್ಮ ಕೆಲಸಗಳಲ್ಲಿ ನಿರತರಾಗಿರುವುದನ್ನು ಹಾಗೂ ವಿದ್ಯಾರ್ಥಿಗಳೆಲ್ಲಾ ಹಲವು ಕ್ಷೇತ್ರಗಳಲ್ಲಿ ತಮ್ಮ ಸಾಧನೆಗಳನ್ನು ಮಾಡಿರುವುದು ಕಾಣಬಹುದಾಗಿದೆ ಎಂದರು.

ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಈ ಹಿಂದೆ ತಮಗೆ ಭೋಧನೆ ಮಾಡಿದ ಶಿಕ್ಷಕರುಗಳೋ ಡನೆ ಬೆರೆತು ಸೆಲ್ಫಿ ಕ್ಲಿಕ್ಕಿಸಿಕೊಂಡರು.


ಈ ವೇಳೆ ಪುರಸಭಾಧ್ಯಕ್ಷೆ ಪುಷ್ಪ, ಉಪಾಧ್ಯಕ್ಷೆ ಮಮತಾ ಧೃವಕುಮಾರ್, ರೇಣುಕಾ ಪ್ರಸಾದ್,ನಿವೃತ್ತ ಶಿಕ್ಷಕರಾದ ಜಿ.ತಿಮ್ಮಯ್ಯ, ಶಿಕ್ಷಕರುಗಳಾದ ಶಿವಕುಮಾರ್, ಪಲ್ಲಕ್ಕಿ ಬಸವರಾಜು, ಹೆಚ್.ಎಂ.ಸುರೇಶ್, ಎಂಪಿಜಿಎಸ್ ಶಾಲೆ ಮುಖ್ಯೋಪಾಧ್ಯಾಯ ಸುರೇಶ್ ಕೆಂಬಾಳ್, ಶಿಕ್ಷಕರುಗಳಾದ ನಿರ್ಮಲ, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು