ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಯಿತು.

 ಗುಬ್ಬಿ : ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಪಂಚಾಯತಿ ಹಾಗೂ ಸ್ವೀಪ್ ಸಮಿತಿ ವತಿಯಿಂದ ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು.


   ತಾಲೂಕಿನ ನಿಟ್ಟೂರು ಸರ್ಕಾರಿ ಶಾಲೆಯ ಆವರಣದಲ್ಲಿ ನಡೆಸಲಾಯಿತು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ 

  ತಹಶೀಲ್ದಾರ್ ಬಿ ಆರತಿ ಮಹಿಳಾ ಸಬಲಿಕರಣ ಹಾಗೂ ಮಹಿಳಾ ಮತ್ತು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರವು 19 ವರ್ಷ ವಯೋಮಿತಿಯ ಬಾಲಕಿಯರಿಗೆ ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡುವಂತೆ ಸರ್ಕಾರದ ಅದೇಶವಿದ್ದು, ಅದರಂತೆ ಇಂದು ಸ್ವೀಪ್ ಸಮಿತಿ ಹಾಗೂ ತಾಲೂಕು ಪಂಚಾಯತ್ ಸಹಯೋಗದಲ್ಲಿ ಆ ಯೋಜನೆ ಮಾಡಲಾಗಿದೆ.

ಯುವ ಮತದಾರರನ್ನು ಮತದಾನ ಪಟ್ಟಿಗೆ ಸೇರಿಸಲು ಅರಿವು ಮೂಡಿಸುವ ಕಾರ್ಯವು ಈ ಸಂದರ್ಭದಲ್ಲಿ ಆಗುತ್ತಿದ್ದು ಪ್ರತಿನಿತ್ಯವೂ ಕೆಲಸದ ಒತ್ತಡದಲ್ಲಿ ಅಧಿಕಾರಿಗಳು ಇರುವ ಕಾರಣ ಈ ರೀತಿಯ ಚಟುವಟಿಕೆಗಳನ್ನು ನಡೆಸಲು ಸಹಕಾರ ಕೊಟ್ಟ ಸಂದರ್ಭದಲ್ಲಿ ಒಂದಿಷ್ಟು ಮನಸ್ಸಿಗೆ ವಿಶ್ರಾಂತಿ ಸಿಕ್ಕಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.



 ತಾಲೂಕು ಪಂಚಾಯಿತಿ ಕಾರ್ಯವಾಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡುತ್ತಾ ಬಂದಿದ್ದು, ರಾಷ್ಟ್ರದಲ್ಲಿ ಮಹಿಳೆಗೆ ಅತಿ ಹೆಚ್ಚಿನ ಅವಕಾಶಗಳು ಸಿಗುತ್ತಿರುವುದು ಹರ್ಷದಾಯಕ ವಿಚಾರವಾಗಿದೆ.ಅದಕ್ಕೆತಕ್ಕಂತೆ ಮಹಿಳೆಯರು ಸಹ ಸಾಧನೆ ಸಾಧಿಸುತ್ತಾ ಬಂದಿರುವ ಹಿನ್ನೆಲೆ ಸರ್ಕಾರವು ಮುನ್ನಲೆಗೆ ತರುವ ನಿಟ್ಟಿನಲ್ಲಿ ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿ ಟೂರ್ನಿಯನ್ನು ಆಯೋಜಿಸಿದ್ದು, ಇದರಲ್ಲಿ ಹತ್ತು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ಯುವ ಮತದಾರರನ್ನು ಸೆಳೆಯಲು ಸರ್ಕಾರವು ತಾಲೂಕು ಮಟ್ಟದ ಮಹಿಳಾ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಪ್ರೋತ್ಸಾಹ ನೀಡಿದಂತೆ ಆಗಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಂದಿನಿ, ಪಿಡಿಓ ಸಂಘದ ಅಧ್ಯಕ್ಷ ಬಿ ಎನ್ ಶಿವಾನಂದ್, ಸಂಘಟನಾ ಕಾರ್ಯದರ್ಶಿ ಮಂಜಮ್ಮ, ರಾಜೇಂದ್ರ ಪ್ರಸಾದ್, ನೌಕರರ ಸಂಘದ ಖಚಾಂಚಿ ನಾಗರಾಜ್, ಪ್ರಶಾಂತ್, ಮಂಜುಳ, ತನುಜಾ ಬೇನಕಟ್ಟಿ, ಮಂಜುಳಾ ದೇವಿ ಹಾಗೂ ದೈಹಿಕ ಶಿಕ್ಷಕರು ಸಂಘದ ಪದಾಧಿಕಾರಿಗಳು ಕ್ರೀಡಾಪಟುಗಳು ಉಪಸ್ಥಿತರಿದ್ದರು.


ವರದಿ ಸಂಜಯ್ ಕೊಪ್ಪ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು