ಯುವ ಜನತಾದಳ ಅಧ್ಯಕ್ಷರಾಗಿದ್ದ ಕೇಬಲ್ ಸುಬ್ಬು ಇಂದು ಜೆಡಿಎಸ್ ತೊರೆದು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ.

 ಮಧುಗಿರಿ  : ತಾಲೂಕು ಯುವ ಜನತಾದಳ ಅಧ್ಯಕ್ಷರಾಗಿದ್ದ ಕೇಬಲ್ ಸುಬ್ಬು ಇಂದು ಜೆಡಿಎಸ್ ತೊರೆದು ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.


ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್.ರಾಜಣ್ಣನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

ನಂತರ ಮಧುಗಿರಿಯಲ್ಲಿ ಮಾತನಾಡಿದ ಅವರು ಕಳೆದ 10 ವರ್ಷದಿಂದ ಜೆಡಿಎಸ್ ನಲ್ಲಿ ಕೆಲಸ ಮಾಡಿದ್ದೆ. ಶಾಸಕ ವೀರಭದ್ರಯ್ಯನವರ ಸೋಲು ಹಾಗೂ ಗೆಲುವಿನ ಸಮಯದಲ್ಲಿ ಜೊತೆಗಿದ್ದೆ. ಆದರೆ ನಮ್ಮ ನ್ನು ಪಕ್ಷದಲ್ಲಿ ಕಡೆಗಣಿಸಲಾಯಿತು. ಆದರೆ ಮಾಜಿ ಶಾಸಕರಾದ ಕೆ.ಎನ್.ರಾಜಣ್ಣನವರು ನನ್ನ ಮೇಲೆ ಭರವಸೆ ಇಟ್ಟು ಪಕ್ಷಕ್ಕೆ ಆಹ್ವಾನ ನೀಡಿದ್ದರು.ಅದಕ್ಕಾಗಿ ಇಂದು ಕಾಂಗ್ರೆಸ್ ಸೇರಿದ್ದು ರಾಜಣ್ಣನವರ ಗೆಲುವಿಗೆ ದುಡಿಯುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಕೇಬಲ್ ಸುಬ್ಬುರವರ ಅಪಾರ ಸ್ನೇಹಿತರು ಜೊತೆಗಿದ್ದರು. 


ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು