ಗುಬ್ಬಿ : ಪ್ರಜೆಗಳಿಗೆ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಬಹಳ ಮುಖ್ಯವಾಗಿ ಅರಿವು ಇರಬೇಕು ಎಂದು ನ್ಯಾಯಾಧೀಶರಾದ ಮಂಜುಳಾ ಹುಂಡಿ ಶಿವಪ್ಪ ತಿಳಿಸಿದರು.
ಪಟ್ಟಣದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಸಭಾಂಗಣದಲ್ಲಿ ನಡೆದ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧ ಒಕ್ಕೂಟ ಹಾಗೂ ಕಾನೂನು ಸೇವಾ ಪ್ರಾಧಿಕಾರದಿಂದ ನಡೆದ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜನರಿಗೆ ತಮ್ಮ ಹಕ್ಕುಗಳನ್ನು ಕೇಳುವಂತಹ ಧೈರ್ಯ ಬಂದಿರುವುದಕ್ಕೆ ಹೆಮ್ಮೆಯಾಗುತ್ತದೆ
ನಮಗಿರುವ ಜ್ಞಾನ ವನ್ನು ಸದುಪಯೋಗ ಮಾಡಿಕೊಳ್ಳ ಬೇಕೋ ಹೊರತು ದುರುಪಯೋಗ ಮಾಡಿಕೊಳ್ಳಬಾರದು. ಹಿಂದೆ ನ್ಯಾಯಾಧೀಶರು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಜನಸಾಮಾನ್ಯರ ಜೊತೆಯಲ್ಲಿ ಬೆರಿಯಲು ಸಾಧ್ಯವಿರಲಿಲ್ಲ ಆದರೆ ಈಗ ಜನಸಾಮಾನ್ಯರ ಸಮಸ್ಯೆಗಳು ಅವರ ಹಕ್ಕು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆಯನ್ನು ನಾವೇ ಮಾಡುತ್ತಿದ್ದೇವೆ.
ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಬರುತ್ತಿದ್ದು ಪ್ರಾಮಾಣಿಕ ವ್ಯಕ್ತಿಗಳಿಗೆ ತಮ್ಮ ಅಮೂಲ್ಯ ಮತವನ್ನು ಹಾಕಿದಾಗ ದೇಶ ರಾಜ್ಯ ನಮ್ಮ ಹಳ್ಳಿಗಳು ಕೂಡ ಅಭಿವೃದ್ಧಿಯತ್ತ ಸಾಗುತ್ತವೆ ಪ್ರತಿಯೊಬ್ಬರೂ ಸಹ ತಮ್ಮ ಮತದಾನವನ್ನು ಮಾಡಲೇಬೇಕು ಎಂದು ತಿಳಿಸಿದರು.
ಹೈಕೋರ್ಟ್ ವಕೀಲ ಪ್ರಸನ್ನಕುಮಾರ್ ಮಾತನಾಡಿ ಕೇವಲ ಎರಡು ತಿಂಗಳ ಅವಧಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಅಪರಾಧಿಗಳನ್ನು ಈ ಸರಕಾರ ಬಿಡುಗಡೆ ಮಾಡಿದೆ ಅಪರಾಧ ಮಾಡಿದ್ದಾರೆ ಎಂದು ಅವರಿಗೆ ಕಾನೂನು ಶಿಕ್ಷೆ ವಿಧಿಸಿದರೆ ಸರಕಾರ ಅವರನ್ನು ಬಿಡುಗಡೆ ಮಾಡುತ್ತದೆ ಹೀಗಾದರೆ ಕಾನೂನುಗಳನ್ನು ಮತ್ತು ಹಕ್ಕುಗಳನ್ನು ಗೌರವಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಸಂಘಟನೆಗಳಿಗೂ ಸಹ ರಾಜಕೀಯದ ನಿಲುವು ಅಂಟಿಕೊಳ್ಳುತ್ತಿರುವುದು ದುರಂತ ಯಾವುದೇ ಕಾರಣಕ್ಕೂ ಮಾನವ ಹಕ್ಕುಗಳ ಈ ನಿಮ್ಮ ಸಂಘಟನೆಯು ರಾಜಕೀಯಕ್ಕೆ ಇಳಿಯಬಾರದು ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ರಮೇಶ್ ಆರ್ ಮಾತನಾಡಿ ನಮ್ಮ ಸಂಘಟನೆಯು ಬಡವರ ಹಿಂದುಳಿದವರ ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿರುವವರಿಗೆ ಹೋರಾಟದ ಮೂಲಕ ಅವರಿಗೆ ನ್ಯಾಯ ಒದಗಿಸುವುದೇ ಆಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ರಮೇಶ್ ಮಂಚಲ ದೊರೆ, ಉಪಾಧ್ಯಕ್ಷ ವಿರೂಪಾಕ್ಷಯ್ಯ, ಜಿಲ್ಲಾ ಉಪಾಧ್ಯಕ್ಷ ಮಹೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಪ್ರಸಾದ್, ಮಹಿಳಾ ತಾಲೂಕು ಘಟಕದ ಅಧ್ಯಕ್ಷ ರೂಪ ರಾಣಿ, ಸದಸ್ಯರಾದ ಕವಿತಾ ಸುನಂದ, ಬೀರೇಶ್, ಜಯರಾಮ್, ಸೌಭಾಗ್ಯಮ್ಮ ಸೇರಿದಂತೆ ಇನ್ನಿತರರು ಹಾಜರಿದ್ದರು
