ಶಿರಾ:-ನ್ಯಾಯಮೂರ್ತಿ ಸದಾಶಿವ ಆಯೋಗವು ಒಳಮೀಸಲಾತಿಗೆ ಸಲ್ಲಿಸಿದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅವಕಾಶ ನೀಡಬಾರದು.
ಪರಿಶಿಷ್ಟ ಜಾತಿ ಪಟ್ಟಿಯಿಂದ ಕೆಲ ಎಸ್ಸಿ ಜಾತಿಗಳನ್ನು ಹೊರಗಿಟ್ಟು , ಮೀಸಲಾತಿ ಸೌಲಭ್ಯ ತಪ್ಪಿಸುವ ಹುನ್ನಾರ ಆಯೋಗದ ವರದಿಯಲ್ಲಿ ಅಡಗಿದೆ ಎಂದು ಸರ್ದಾರ್ ಸೇವಾಲಾಲಸ್ವಾಮಿಜಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ನಗರದ ಸೇವಾ ಲಾಲ್ ಭವನದಲ್ಲಿ
ನಡೆದ ಜನ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡುತ್ತಾ
ಸದಾಶಿವ ಆಯೋಗದ ವರದಿ ಜಾರಿಯಾದರೆ ಲಂಬಾಣಿ ಸೇರಿದಂತೆ ಹಲವು ಜಾತಿಗಳಿಗೆ ಸಂಕಷ್ಟ. ಸಮುದಾಯದ ಜನಪ್ರತಿನಿಧಿಗಳು ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿ 13 ವರ್ಷ ಕಳೆದಿದೆ. ವರದಿಯ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಅಧಿವೇಶನದ ಬಳಿಕ ವರದಿ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿರುವುದು ಖಂಡನೀಯ. ಎಡಗೈ ಸಮುದಾಯದ ರಾಜಕೀಯ ಪ್ರಭಾವಕ್ಕೆ ಸರ್ಕಾರ ಮಣಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ
ಅಧ್ಯಕ್ಷರಾದ ಮಾಕಳಿ ರವಿ ಪ್ರಧಾನ ಕಾರ್ಯದರ್ಶಿ ಅನಂತ್ ನಾಯಕ್ ಗೌರವಾಧ್ಯಕ್ಷರಾದ ರಾಘವೇಂದ್ರ ನಾಯಕ್ ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಓಂಕಾರ ಮೂರ್ತಿ ಲಂಬಾಣಿ ಸಮಾಜದ ಜಿಲ್ಲಾ ಮುಖಂಡರಾದ ಕುಮಾರನಾಯಕ್ ಬಾಂಬೆ ತಾಲ್ಲೂಕ್ ಲಂಬಾಣಿ ಶ್ರೇಯ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಕೆ ಎನ್ ಶೇಷ ನಾಯಕ್ ಮತ್ತಿತರ ಹಾಜರಿದ್ದರು.
ವರದಿ : ಶಿರಾ ಶ್ರೀಮಂತ್.
