ಚಿಕ್ಕನಾಯಕನಹಳ್ಳಿ : ವಿಕಲಚೇತನ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ತರಲು ಪೋಷಕರು ಪ್ರಮುಖ ಪಾತ್ರ ವಹಿಸಬೇಕಾಗಿ ಕರೆ ನೀಡಿದ ವ್ಯವಸ್ಥಾಪಕ ಆನಂದ್ ಎಸ್. ಎನ್.
ಪಟ್ಟಣದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಮೊಬಿಲಿಟಿ ಇಂಡಿಯಾ ಸಮುದಾಯ ಆಧಾರಿತ ಸಮನ್ವಯ ಅಭಿವೃದ್ಧಿ ಕಾರ್ಯಕ್ರಮವಾದ ಬುದ್ಧಿಮಾಂದ್ಯತೆ ಹೊಂದಿರುವ ಮಕ್ಕಳ ಪೋಷಕರಿಗೆ ಜಾಗೃತಿ ಹಾಗೂ ದೈನಂದಿನ ಕಲಿಕೆಗೆ ಅಗತ್ಯವಿರುವ ವಸ್ತುಗಳ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೊಬಿಲಿಟಿ ಇಂಡಿಯಾ ವ್ಯವಸ್ಥಾಪಕ ಆನಂದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಜರಿದ್ದು ಪೋಷಕರನ್ನು ಕುರಿತು ಬುದ್ಧಿಮಾಂದ್ಯ ಮಕ್ಕಳಿಗೆ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಇರುವ ಸರ್ಕಾರಿ ಯೋಜನೆಗಳು ಹಾಗೂ ವಿಕಲಚೇತನ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಮೊಬಿಲಿಟಿ ಇಂಡಿಯಾ ಸಂಸ್ಥೆಯು ಒದಗಿಸುತ್ತಿರುವ ಸೇವೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ತಿಳಿಸುತ್ತಾ ವಿಕಲಚೇತನ ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ತರಲು ಪೋಷಕರು ಪ್ರಮುಖ ಪಾತ್ರ ವಹಿಸಬೇಕಾಗಿ ಕರೆ ನೀಡಿದರು
ಈ ಸಂದರ್ಭದಲ್ಲಿ ಮೊಬಿಲಿಟಿ ಇಂಡಿಯಾ ಸಂಸ್ಥೆಯ ವತಿಯಿಂದ ವಿಕಲಚೇತನ ಮಕ್ಕಳ ಪೋಷಕರಿಗೆ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವ ಕಿಟ್ ಗಳನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯ ಶಿಕ್ಷಣಾಧಿಕಾರಿಗಳಾದ ನರಸಿಂಹಯ್ಯರವರು ವಿತರಣೆ ಮಾಡಿ ಈ ಕಾರ್ಯಕ್ರಮದಲ್ಲಿ ದೈನಂದಿನ ಚಟುವಟಿಕೆಗೆಗಳಿಗೆ ಪೂರಕವಾಗಿದ್ದು ಮಕ್ಕಳಿಗೆ ನೀಡಲಾಗಿರುವ ಈ ಅಗತ್ಯ ವಸ್ತುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿಸಿದರು .
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀಯುತ ರಾಜಣ್ಣ ಇವರು ಮಕ್ಕಳ ಪೋಷಕರೊಂದಿಗೆ ಸಂವಾದವನ್ನು ನಡೆಸಿ ಈ ಮಕ್ಕಳು ತಮ್ಮ ದೈನಂದಿನ ಚಟುವಟಿಕೆಗಳನ್ನು ತಾವೇ ನಿರ್ವಹಿಸಲು ಪೋಷಕರು ಯಾವ ರೀತಿಯ ಮಾರ್ಗೋಪಾಯಗಳನ್ನು ಅನುಸರಿಸಬೇಕು ಹಾಗೂ ವಿತರಣೆ ಮಾಡಲಾಗಿರುವ ವಸ್ತುಗಳನ್ನು ಬಳಸಿ ಮಕ್ಕಳಿಗೆ ಹೇಗೆ ಕಲಿಸಬೇಕು ಎಂದು ತಿಳಿಸಿ ಸಮುದಾಯದೊಂದಿಗೆ ಸಮನ್ವಯಗೊಳಿಸಲು ಪೋಷಕರು ಕೈಗೊಳ್ಳಬೇಕಿರುವ ಕಾರ್ಯಗಳ ಬಗ್ಗೆ ತಿಳಿಸಿದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.
