ಶಿರಾ ಕ್ಷೇತ್ರದ ಜನಪ್ರತಿನಿಧಿಗಳಿಂದ ಶಂಕುಸ್ಥಾಪನೆ ಜಪ ಮಂತ್ರ ಆದರೆ ಶಾಲೆಯಲ್ಲಿ ವಿದ್ಯಾರ್ಥಿಗಳು ಜೀವ ಭಯದಿಂದ ಕುಳಿತು ಪಾಠ ಕೇಳುವ ಪರಿಸ್ಥಿತಿ....
ಸರ್ಕಾರಿ ಶಾಲೆ ಕಟ್ಟಡ ಇಲ್ಲದೆ ಶಾಲೆಯ ವಿಧ್ಯಾರ್ಥಿಗಳು ಬಯಲಲ್ಲೇ ಮಕ್ಕಳ ಕಲಿಕೆ ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿ ವರೆಗೆ ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಪ್ರಾರಂಭದ ದಿನಗಳಿಂದ ಉತ್ತಮ ದಾಖಲಾತಿ ಹೊಂದಿದ್ದ ಶಾಲೆ ಗೋಡೆ ಬಿದ್ದು ಸುಮಾರು ತಿಂಗಳು ಕಳೆದರು ದುರಸ್ತಿಯ ಬಗ್ಗೆ ಜನಪ್ರತಿನಿದಿಗಳು ಜಾಣ ಕುರುಡು ತೋರುತ್ತಿರುವುದು ಬೇಸರ ತಂದಿದೆ.
ಶಾಲೆಯ ಈ ದುಸ್ಥಿತಿ ಕಂಡು ವಿದ್ಯಾರ್ಥಿಗಳನ್ನು ಪೋಷಕರು ಬೇರೆಡೆಗೆ ಕಳುಹಿಸುತ್ತಿರುವುದರಿಂದ ಮಕ್ಕಳ ದಾಖಲಾತಿ ಪ್ರಮಾಣ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ.
ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆದರೆ, ಮೂರ್ನಾಲ್ಕು ದಶಕಗಳ ಹಳೆಯ ಶಾಲಾ ಕಟ್ಟಡಗಳ ಪರಿಸ್ಥಿತಿ ಮಾತ್ರ ಸರ್ಕಾರಕ್ಕೆ ಕಾಣುತ್ತಿಲ್ಲ.
ಒಂದು ಕಟ್ಟಡ ಬಿದ್ದು ಹಲವು ತಿಂಗಳ ಕಳೆದಿದೆ ಮತ್ತೊಂದು ಈಗಲೋ ಆಗಲೋ ಬೀಳುವಂತಹ ಸ್ಥಿತಿ ಇದೆ ತುಮಕೂರು ಜಿಲ್ಲೆಯ ಈ ಶಾಲಾ ಕಟ್ಟಡದಲ್ಲಿ ಪ್ರಾಣ ಭಯದಿಂದಲೇ ಮಕ್ಕಳು ಪಾಠ ಕೇಳುತ್ತಿದ್ದಾರೆ. ಅಲ್ಲದೆ ಕಟ್ಟಡ ಬಿದ್ದು ಮಕ್ಕಳ ಪ್ರಾಣವೇ ಹೋದೀತು ಅಂತ ಶಿಕ್ಷಕರು ಶಾಲೆಯ ಹೊರಗಡೆಯೇ ಪಾಠ ಕಲಿಸುತ್ತಿದ್ದಾರೆ.
ಇದು ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ, ಕಳ್ಳಂಬೆಳ್ಳ ಹೋಬಳಿ ತಾಳಗುಂದ ಗ್ರಾಮ ಪಂಚಾಯಿತಿಯ ಮುಚ್ಚವಿರನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಬಿದ್ದು ಹೋಗಿದೆ ಸುಮಾರು ತಿಂಗಳ ಕಾಲವಾಯಿತು ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದರು ಯಾವುದೇ ಕೆಲಸವಾಗಿಲ್ಲ ಮತ್ತು ಸಂಬಂಧ ಪಟ್ಟ ಇಲಾಖೆ ರವರಿಗೆ ಅರ್ಜಿ ಸಲ್ಲಿಸಿದರು ಶಾಲಾ ಕೊಠಡಿ ವ್ಯವಸ್ಥೆ ಗಳು ರೂಪಗೊಂಡಿಲ್ಲ ಜನಪ್ರತಿನಿಧಿಗಳ ಸುಳ್ಳು ಭರವಸೆಗಳನ್ನು ನೀಡಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ ಜನಪ್ರತಿನಿಧಿ ಹಾಗೂ ಸಂಬಂಧ ಪಟ್ಟ ಇಲ್ಕಿ ಇಲಾಖೆಯವರ ಗಮನಕ್ಕೆ ತಂದರು ಕ್ರಮ ವಹಿಸಿಲ್ಲ ಎಂದುು ಗ್ರಾಮಸ್ಥರು ಆರೋಪಿಸಿದರು
ಈ ಗ್ರಾಮದಲ್ಲಿನ ಸರ್ಕಾರಿ ಶಾಲೆ ಮತ್ತು ವಿಧ್ಯಾರ್ಥಿಗಳ ಪರಿಸ್ಥಿತಿ. ಇಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 5 ನೇ ತರಗತಿಯವರೆಗೆ ಸುಮಾರು ಮಕ್ಕಳು ವಿಧ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಪ್ರಾರಂಭದ ದಿನಗಳಿಂದ ಉತ್ತಮ ದಾಖಲಾತಿ ಹೊಂದಿದ್ದ ಶಾಲೆ ಇದೀಗ ಶಿಥಿಲಾವಸ್ಥೆಯ ಕಾರಣಕ್ಕೆ ಮಕ್ಕಳ ದಾಖಲಾತಿ ಪ್ರಮಾಣ ಪ್ರತಿ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಇದೆ. ಕಳೆದ ಹಲವು ವರ್ಷಗಳಿಂದ ಶಾಲೆಯ ಕಟ್ಟಡ ವರ್ಷದಿಂದ ವರ್ಷಕ್ಕೆ ಮಳೆಗೆ ನೆನೆದಿದ್ದು, ಬಿರು ಬಿಸುಲಿಗೆ ಒಣಗಿ ಶಿಥಿಲಗೊಳ್ಳುತ್ತಿದೆ.
ಇದರಿಂದ ಶಾಲೆಯಲ್ಲಿ ಕುಳಿತು ಪಾಠ ಕೇಳುತ್ತಿರುವಾಗ ಮಕ್ಕಳಿಗೆ ಯಾವಾಗ ಬೇಕಾದರೂ ಅನಾಹುತ ಆಗಬಹುದು ಎಂಬ ಆತಂಕ ಪೋಷಕರಲ್ಲಿ ಶುರುವಾಗಿದೆ. ಅಲ್ಲದೆ ಅಷ್ಟೆ ಭಯದಿಂದಲೇ ಇಲ್ಲಿನ ಶಾಲಾ ಶಿಕ್ಷಕರು ಶಾಲೆಯ ಹೊರಗಡೆಯೇ ಪಾಠ ಹೇಳಿ ಕೊಡುತ್ತಿದ್ದಾರೆ. ಶಾಲೆಯನ್ನ ಪರಿಶೀಲಿಸಲು ಬರುವ ಶಿಕ್ಷಣ ಇಲಾಖೆ ಅಧಿಕಾರಿಗಳು ನೆಪಕ್ಕೆ ಮಾತ್ರ ಶಾಲೆಯ ಅಭಿವೃದ್ದಿ ಪಡಿಸುವುದಾಗಿ ಹೇಳುತ್ತಾರೆ. ಹೀಗೆ ಭರವಸೆ ಕೊಟ್ಟು ಹೋಗುವ ಅಧಿಕಾರಿಗಳು ಮತ್ತೆ ಇತ್ತ ತಿರುಗಿಯೂ ಕೂಡಾ ನೋಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಪ್ರತಿ ದಿನ ಗ್ರಾಮದಲ್ಲಿನ ಶಾಲೆಯ ಶಿಥಿಲಾವಸ್ಥೆ, ಹಾಗೂ ಮಕ್ಕಳು ಮತ್ತು ಶಿಕ್ಷಕರ ಅವಸ್ಥೆ ಕಂಡ ಗ್ರಾಮಸ್ಥರು ಎಸ್ಡಿಎಂಸಿ ಸದಸ್ಯರು ಕೂಡಲೇ ಶಾಲೆಗೆ ಉತ್ತಮ ಗುಣಮಟ್ಟದ ಕಟ್ಟಡ ನಿರ್ಮಿಸಿ ಕೊಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಹಾಗೂ
ಕ್ಷೇತ್ರದ
ಜನಪ್ರತಿನಿಧಿಗಳ ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಈ ಶಿರಾ ವಿಧಾನಾಸಭಾ ಕ್ಷೇತ್ರದ ಶಾಲೆಯ ಪರಿಸ್ಥಿತಿ ಬಗ್ಗೆ ಈ ಭಾಗದ ಶಾಸಕರ ಬಳಿಯೂ ಕಟ್ಟಡ ಕಟ್ಟಿಸಿಕೊಡುವಂತೆ ಹಲವು ಭಾರಿ ಕೇಳಿಕೊಂಡಿದ್ದಾರೆ. ಆದರೆ ಇಂದು ನಾಳೆ ಕಟ್ಟಡ ಕಟ್ಟಿಸಿಕೊಡುತ್ತೇವೆ ಎಂದು ಭರವಸೆ ನೀಡಿ ಅನುದಾನ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದರೆ ಕಟ್ಟಡ ನಿರ್ಮಾಣದ ಕೆಲಸ ಮಾತ್ರ ಪ್ರಾರಂಭವಾಗದೆ ಹಾಗೇ ಉಳಿದಿದೆ.
ಕಟ್ಟಡ ನಿರ್ಮಾಣದ ಬಗ್ಗೆ ಸಬೂಬು ಹೇಳಿರುವ ಅಧಿಕಾರಿಗಳು ಮಾತ್ರ ಮತ್ತೆ ಇತ್ತ ಗಮನ ಹರಿಸಿಲ್ಲ. ಇವರ ಈ ನಿರ್ಲಕ್ಷಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಒಟ್ಟಾರೆ ಸರ್ಕಾರಿ ಶಾಲೆಗಳ ಪರಿಸ್ಥಿತಿ ಕಂಡ ಯಾರೂ ಮಕ್ಕಳನ್ನು ಈ ಶಾಲೆಗಗಳಿಗೆ ಸೇರಿಸದಂತಾಗಿದ್ದಾರೆ. ಬೆಳಗಾದರೆ ರಸ್ತೆಯ ಶಂಕುಸ್ಥಾಪನೆ ಮಂತ್ರ ಜಪಿಸುವವರು ಸರ್ಕಾರ ಶಾಲೆಗಳ ಅಭಿವೃದ್ದಿ ಮಾಡುವಲ್ಲಿ ವಿಫಲವಾಗಿದೆ. ಇನ್ನಾದರೂ ಉತ್ತಮ ಗುಣಮಟ್ಟದ ಕಟ್ಟಡ ನೀಡಿ ಜೀವಭಯದಿಂದ ಶಿಕ್ಷಣ ಕಲಿಯುತ್ತಿರುವ ಮಕ್ಕಳನ್ನು ಭಯದಿಂದ ಮುಕ್ತರಾಗಿಸಬೇಕವಹಿಸಿ
ಎಂದು ಗ್ರಾಮಸ್ಥರ ಆಗ್ರಹವಾಗಿದೆ..
ವರದಿ ಶಿರಾ ಶ್ರೀಮಂತ್


