ಚಿಕ್ಕನಾಯಕನಹಳ್ಳಿ :ವಿಶ್ವವಿದ್ಯಾಲಯದ, ಧೋರಣೆಯನ್ನ ಖಂಡಿಸಿ ಎಬಿವಿಪಿ ವತಿಯಿಂದ ದಿಡೀರ್ ಪ್ರತಿಭಟನೆ.
ಪಟ್ಟಣದ ತಾಲೂಕ್ ಕಚೇರಿ ಎದುರು ಸರ್ಕಾರ ಹಾಗೂ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆಗಳನ್ನು ಕೂಗಿ ನ್ಯಾಯಕ್ಕಾಗಿ ಪ್ರತಿಭಟಿಸಿ ತಹಶೀಲ್ದಾರ್ ಅರ್ಚನಾ ಭಟ್ ರವರ ಮೂಲಕ ಮನವಿ ಸಲ್ಲಿಸಿದರು.
ವಿದ್ಯಾರ್ಥಿ ಮುಖಂಡ ಗುರುಪ್ರಸಾದ್ ಮಾತನಾಡಿ ದ್ವಿತೀಯ ಬಿಕಾಂ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದು ಮೂರು ತಿಂಗಳಾಗಿದ್ದು, ಮೌಲ್ಯಮಾಪನ ನಡೆದು 2 ತಿಂಗಳು ಕಳೆದರೂ ಸಹ ಫಲಿತಾಂಶ ಬಿಡುಗಡೆ ಮಾಡದೆ ಇರುವುದು ಬಡ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿಕೊಂಡಿದ್ದಾರೆ.
ಗ್ರಾಮೀಣ ಭಾಗದ ಬಡ ಪೋಷಕರುಗಳು ವಿದ್ಯಾರ್ಥಿಗಳನ್ನು ಕಾಲೇಜು ಶಿಕ್ಷಣ ಕೊಡಿಸಲು ಹಣ ಇಲ್ಲದೆ ಪರದಾಡುತ್ತಿದ್ದಾರೆ.
ಹಾಗಾಗಿ ವಿವಿ ಕುಲಪತಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ನಿತ್ಯ.ಕೆ.ವಿ ಮಾತನಾಡಿ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದು 3 ತಿಂಗಳು ಕಳೆದಿದೆ, ತೃತೀಯ ಸೆಮಿಸ್ಟರ್ ಪರೀಕ್ಷೆಗೆ 2 ತಿಂಗಳಿದೆ ಆದ್ರೂ 2ನೇ ಸೇಮ್ ಫಲಿತಾಂಶ ಬರದಿರುವುದರಿಂದ ಬಡ ವಿದ್ಯಾರ್ಥಿಗಳಿಗೆ ಸ್ಕಲಾರ್ ಶಿಪ್ ಕೈತಪ್ಪಿ ಹೋಗಿದೆ.
ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಹಣವೆ ಮುಂದಿನ ವಿದ್ಯಾಭ್ಯಾಸಕ್ಕೆ ದಾರಿದೀಪವಾಗಿದ್ದು ಈ ಅನ್ಯಾಯ ವನ್ನ ಸರಿಪಡಿಸಿ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಚಿಕ್ಕನಾಯಕನಹಳ್ಳಿ ಮಾಧ್ಯಮ ಪ್ರಮುಖರಾದ ದೀಪಕ್ ವಿದ್ಯಾರ್ಥಿ ಪ್ರಮುಖ ಭರತ್ .ಎನ್. ಎಲ್. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕನಾಯಕನಹಳ್ಳಿ ಸ್ನಾತಕೋತ್ತರ ಪದವಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಚಿಕ್ಕನಾಯಕನಹಳ್ಳಿ ಚಂದ್ರು.
