ಲೋಕಾಯುಕ್ತ ದಾಳಿ ; ಬಿಸಿಎಂ ಅಧಿಕಾರಿ ಪೊಲೀಸ್‌ ಅತಿಥಿ

 ಚಿಕ್ಕನಾಯಕನಹಳ್ಳಿ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ ಪ್ರಭಾರ ಅಧಿಕಾರಿ  ಶಿವರಾಜ್ ಎನ್ ಏಲಿಗಾರ್ ಎಂಬುವವರು  ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾರೆ.



ತುಮಕೂರು ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ್, ಮತೊಬ್ಬ ಡಿವೈಎಸ್ಪಿ ಹರೀಶ್, ಇನ್ಸ್ಪೆಕ್ಟರ್ ರಾಮರೆಡ್ಡಿ, ಸಲೀಮ್, ಕಾನ್ಸ್ ಸ್ಟೇಬಲ್ ಯತೀಗೌಡ, ಬೇಬಿರಾಣಿ, ಹಲಾಂ ಪಾಶ, ರವೀಶ್, ಅವರುಗಳು ತಂಡದಲ್ಲಿದ್ದರು.


 ನರೇಂದ್ರ ರಾಜು ಅವರ ದೂರಿನ ಮೇರೆಗೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ  ಕಾರ್ಯ ವ್ಯಾಪ್ತಿಯಲ್ಲಿ ಬಳಸಲು ವಾಹನವನ್ನು ಬಾಡಿಗೆ ಬಿಡಲಾಗಿತ್ತು ಹಾಗೂ ಸರ್ಕಾರದಿಂದ ವಾಹನದ ತಿಂಗಳ ಬಾಡಿಗೆ ಮೊತ್ತ 34,800  ಪಾವತಿ ಮಾಡುವುದಿತ್ತು. ಈ ಹಣವನ್ನ ತನಗೆ ಕೊಡುವಂತೆ ಮತ್ತು ಇನ್ನು ಬರುವ  ಬಾಡಿಗೆ ಹಣವನ್ನ ನಿನ್ನ ಹೆಸರಿಗೆ ಕೊಡುತ್ತೇನೆ ಎಂದು  ಪ್ರಭಾರ ಅಧಿಕಾರಿ ಬೇಡಿಕೆ ಇಟ್ಟು ಪಡೆದಿದ್ದರು ಎನ್ನಲಾಗಿದೆ.


ವಾಹನ ಮಾಲೀಕ ಕಮ್ ಚಾಲಕ ಅಧಿಕಾರಿ ಹತ್ತಿರ ಕಾರಿನ ಬಾಡಿಗೆಯಿಂದ ತಿಂಗಳ  ಕಂತು, ಕುಟುಂಬದ  ನಿರ್ವಹಣೆ ಮಾಡುತ್ತಿದ್ದಾರೆ. ಇದನ್ನು ಅಧಿಕಾರಿ ಹತ್ತಿರ ಹೇಳಿ ಗೋಗೆರೆದರೂ ಮನಸ್ಸು ಕರಗದ ಅಧಿಕಾರಿ‌ ವಿರುದ್ಧ  ವಾಹನ ಮಾಲಕ ನರೇಂದ್ರ ರಾಜು ತುಮಕೂರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ದೂರಿನನ್ವಯ ಲೋಕಾಯುಕ್ತ ತಂಡ  ಖಚಿತ ಮಾಹಿತಿಯನ್ನು ಆಧರಿಸಿ ಚಿಕ್ಕನಾಯಕನಹಳ್ಳಿ ಬಿ ಸಿ ಎಂ ಕಛೇರಿಗೆ ಧಾಳಿ ನೆಡಿಸಿ ಮಾಲೀಕನಿಂದ ಲಂಚ ಪಡೆದ 34000 ರು ಹಣವನ್ನು ಪತ್ತೆ ಹಚ್ಚಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.


ವರದಿ ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು