ಎಡಗೈ ಸಮುದಾಯದವರಿಗೆ ಪಾವಗಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಆಂಕಾಂಕ್ಷಿ ಕೆಂಚಮಾರಯ್ಯ ಒತ್ತಾಯ

 ಪಾವಗಡ: ಎಡಗೈ ಸಮುದಾಯದವರಿಗೆ ಪಾವಗಡ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಆಂಕಾಂಕ್ಷಿ ಕೆಂಚಮಾರಯ್ಯ ಒತ್ತಾಯಿಸಿದ್ದಾರೆ.  


ಪಟ್ಟಣದ ನೀರಿಕ್ಷಣಾ ಮಂದಿರದಲ್ಲಿ ಶುಕ್ರವಾರ ಎಡಗೈ ಸಮುದಾಯದ ಮುಖಂಡರೊಡಗೂಡಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಕ್ಕೆ ಎಡಗೈ ಸಮುದಾಯ ಕೊಡುಗೆ ಆಪಾರವಾದದು , ಆದರೆ ಇತ್ತಿಚಿನ ದಿನಗಳಲ್ಲಿ ಕೇವಲ ಓಟಿಗಾಗಿ ನಮ್ಮನ್ನು ಬಳಸಿಕೊಳ್ಳುತ್ತಿದೆ, ನಮ್ಮ ಸಮುದಾಯಕ್ಕೆ ಸೇರಿದವರಿಗೆ ಪ್ರಮುಖ ವಿಷಯಗಳಲ್ಲಿ ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದೆ ಇದರಿಂದ ತುಂಬಾ ಮುಜುಗರ ಆಗುತ್ತಿದೆ, ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಪಾವಗಡ ಕ್ಷೇತ್ರದಲ್ಲಿ ಎಡಗೈ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಆ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು , ನಮ್ಮ ಸಮುದಾಯದ ನನಗಾಗಲಿ, ನರಸಪ್ಪನವರಿಗಾಗಲಿ, ಅಥವಾ ಡಾ. ಅರುಂಧತಿಯವರಿಗಾಗಲಿ ಯಾರಿಗಾದರೂ ಟಿಕೆಟ್ ನೀಡಲಿ ನಾವು ಅವರನ್ನು ಬೆಂಬಲಿಸುತ್ತೇವೆ ಎಂದು ತಿಳಿಸಿದರು 


ಕೋಟ್೯ ನರಸಪ್ಪ ಮಾತನಾಡಿ ನಮ್ಮ ಸಮುದಾಯ ಕಳೆದ ಹಲವಾರು ವರ್ಷಗಳಿಂದ ಪಾವಗಡ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದೆ, ನಮ್ಮ ಸಮುದಾಯ ಪಕ್ಷಕ್ಕಾಗಿ ಶ್ರಮಿಸುತ್ತದೆ ಆದರೆ ನಮ್ಮ ಸಮುದಾಯದ ವ್ಯಕ್ತಿ ಗಳನ್ನು ಟಿಕೆಟ್ ವಿಚಾರದಲ್ಲಿ ಕಡೆಗಣಿಸುತ್ತಿರುವುದು ಬೇಸರದ ವಿಚಾರವಾಗಿದೆ , ಆದ್ದರಿಂದ ಈ ಭಾರಿ ನಮ್ಮ ಸಮುದಾಯದವರಿಗೆ ಟಿಕೆಟ್ ನೀಡಿ ಎಡಗೈ ಸಮುದಾಯದ ಏಳ್ಗೆಗೆ ಅಡಿಗಲ್ಲು ಹಾಕಬೇಕು ಎಂದು ಮುಖಂಡರಲ್ಲಿ ಮನವಿ ಮಾಡಿಕೊಂಡರು 


ಗೋಷ್ಠಿಯಲ್ಲಿ ಡಾ. ಅರುಂಧತಿ, ನಾರಯಣಪ್ಪ, ಹನುಮಂತರಾಯಪ್ಪ, ಕೃಷ್ಣ ಮೂರ್ತಿ, ಇನ್ನಿತರ ಹಲವು ದಲಿತ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು 


ವರದಿ: ಶ್ರೀನಾಥ್, ಪಿ.ಜಿ. ಪಾವಗಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು