ಹಾಲಿನ ದರ ಏರಿಕೆಗೆ ಸರ್ಕಾರ ಮೀನಮೇಷ ಎಣಿಸುತ್ತಿರುವುದಕ್ಕೆ ತುಮಕೂರು ಹಾಲು ಉತ್ಪದಕರ ಒಕ್ಕೂಟ ನಿರ್ದೇಶಕ ಚಂದ್ರಶೇಖರ್ ಬೇಸರ

 ಗುಬ್ಬಿ  : ಎಲ್ಲಾ ವಸ್ತುಗಳ ಧರ ಗಗನ ಮುಟ್ಟಿದೆ ಆದರೆ ಕಷ್ಟ ಪಟ್ಟು ಸಾಕಿ ಹಾಲು ಕರೆದು ಹಾಕುವ ರೈತರ ಹಾಲಿನ ದರ ಹೆಚ್ಚು ಮಾಡುವುದಕ್ಕೆ ಸರ್ಕಾರ ಹಿಂದೆ ಮುಂದೆ ನೋಡುತ್ತಿದೆ ಎಂದು ತುಮಕೂರು ಹಾಲು ಉತ್ಪದಕರ ಒಕ್ಕೂಟ ನಿರ್ದೇಶಕ ಚಂದ್ರ ಶೇಖರ್ ಬೇಸರ


ವ್ಯಕ್ತ ಪಡಿಸಿದರು.

 ಪಟ್ಟಣದ ಕ್ಷಿರಾ ಭವನದಲ್ಲಿ ಹಲವು ಕಾರಣದಿಂದ ಹಸುಗಳು ಮೃತ ಪಟ್ಟ ಹಿನ್ನಲೆ ಯಲ್ಲಿ 50 ಕ್ಕು ಹೆಚ್ಚು ರೈತರಿಗೆ ಪರಿಹಾರದ ಚೆಕ್ ವಿತರಣೆ ಮಾಡಿ ಮಾತನಾಡಿದ ಕೆ ಎಂ ಏಪ್ ನಲ್ಲಿ ಹಾಲಿನ ಪ್ಯಾಕೀಟ್ ದರವನ್ನು ಮೂರು ರೂಪಾಯಿ ಹೆಚ್ಚು ಮಾಡಿ ಅದನ್ನು ನೇರವಾಗಿ ರೈತರಿಗೆ ನೀಡಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಆದರೆ ಸರಕಾರ ಈ ಕೆಲಸ ಮಾಡುತ್ತಿಲ್ಲ ಪ್ರತಿ ಯೊಂದು ವಸ್ತುವಿನ ದರ ಹೆಚ್ಚಾಗಿದೆ ಹಸು ಸಾಕಣಿಕೆ ಮಾಡಲು ಹೆಚ್ಚು ಖರ್ಚು ಬರುತ್ತಿದ್ದು ರೈತರಿಗೆ ಅನುಕೂಲ ಮಾಡಿ ಕೊಟ್ಟರೆ ಅನುಕೂಲ ವಾಗುತ್ತದೆ ಹಾಗಾಗಿ ಸರ್ಕಾರ ಹೈನುಗಾರಿಕೆ ಮಾಡುವ ರೈತರ ಪರವಾಗಿ ನಿಂತು ಹಾಲಿನ ಪ್ಯಾಕೆಟ್ ದರ ಹೆಚ್ಚು ಮಾಡಬೇಕು ಎಂದು ಮನವಿ ಮಾಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೇಕಟೇಗೌಡ ಮಾತನಾಡಿ ಹಾಲಿನ ದರವನ್ನು ಕೊಡಲೇ ಸರಕಾರ ಹೆಚ್ಚು ಮಾಡಿ ರೈತ ರಿಗೆ ಅನುಕೂಲ ಮಾಡಿಕೊಡಬೇಕು ರೈತ ದೇಶದ ಅಸ್ತಿ ಎನ್ನುವ ಸರ್ಕಾರಗಳು ರೈತರ ಪರವಾಗಿ ನಿಲ್ಲುತಿಲ್ಲ ರೈತ ಸಂಘ ಹೋರಾಟ ಮಾಡಲು ಮುಂದಾದ್ರೆ ನೀವು ತಲೆ ಬಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೆ ಸಂದರ್ಭದಲ್ಲಿ ವ್ಯವಸ್ಥಾಪಕ ಮಂಜುನಾಥ್, ಮೇಲ್ವಿಚಾರಕ ಸಿದ್ದಲಿಂಗಸ್ವಾಮಿ ಸೇರಿದಂತೆ ಇನ್ನಿತರರರು ಹಾಜರಿದ್ದರು.



ವರದಿ:ಪ್ರಸನ್ನ ದೊಡ್ಡಗುಣಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು