ಚಂಗಾವಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಮೀನಾಕ್ಷಿ ನರಸಿಂಹಮೂರ್ತಿ ಅವಿರೋಧ ಆಯ್ಕೆ.

 ಗುಬ್ಬಿ : ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ಧಿಗೆ ನಮ್ಮೆಲ್ಲ ಸದಸ್ಯರ ಸಹಕಾರದೊಂದಿಗೆ ಕೆಲಸ ಮಾಡುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೀನಾಕ್ಷಿ ನರಸಿಂಹಮೂರ್ತಿ ತಿಳಿಸಿದರು.

    ತಾಲೂಕಿನ ಸಿಎಸ್ ಪುರ ಹೋಬಳಿಯ ಚಂಗಾವಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಅವಿರೋಧವಾಗಿ ಆಯ್ಕೆಯಾಗಿ ಮಾತನಾಡಿದ ಅವರು ಪಂಚಾಯಿತಿಯಿಂದ ಸ್ವಚ್ಛತೆ, ಕುಡಿಯುವ ನೀರು, ಹಾಗೂ ನರೇಗಾ ಯೋಜನೆಯ ಅಡಿಯಲ್ಲಿ ರೈತರಿಗೆ ಮತ್ತು ಸಾರ್ವಜನಿಕರಿಗೆ ಎಲ್ಲಾ ರೀತಿಯ ಸಹಕಾರ ಮಾಡಿ ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.

  ಜೆಡಿಎಸ್ ಪಕ್ಷದ ಹೋಬಳಿ ಘಟಕದ ಕುಮಾರ್ ಮಾತನಾಡಿ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಹಾಗೂ ಅಧ್ಯಕ್ಷರು ಉಪಾಧ್ಯಕ್ಷರು ಕೈಜೋಡಿಸಿ ಕೆಲಸ ಮಾಡುತ್ತಾರೆ ಈ ಪಂಚಾಯಿತಿ ಈ ಬಾರಿ ಜೆಡಿಎಸ್ ಪಕ್ಷದ ಹಿಡಿತಕ್ಕೆ ಬಂದಿದೆ ಎಂದು ತಿಳಿಸಿದರು.

 ಚುನಾವಣಾ ಅಧಿಕಾರಿಯಾಗಿ ತಹಸಿಲ್ದಾರ್ ಬಿ ಆರತಿ ಉಪ ತಹಶೀಲ್ದಾರ್ ಶ್ರೀನಿವಾಸ್ ಅಭಿವೃದ್ಧಿ ಅಧಿಕಾರಿ  

 ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ಪದ್ಮಾವತಿ ಶೇಖರ್, ಸದಸ್ಯರಾದ ಲತಾ ಜಯರಾಮ್, ಅಲ್ತಾಫ್, ಮೀನಾಕ್ಷಿ ಗೋವಿಂದರಾಜು, ಬಂಡೆ ಗಂಗಣ್ಣ, ಜಯಲಕ್ಷ್ಮಿ, ನರಸಿಂಹಮೂರ್ತಿ, ಜಹೀರ್, ಕೃಷ್ಣ ಮೂರ್ತಿ ಸಿದ್ದೇಗೌಡ ರಘು ಸೇರಿದಂತೆ ಇನ್ನಿತರರು ಹಾಜರಿದ್ದರು.





ವರದಿ:ಪ್ರಸನ್ನ ದೊಡ್ಡಗುಣಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು