ಮೈಸೂರು ದಸರಾ ಸ್ತಬ್ಧ ಚಿತ್ರಗಳಲ್ಲಿ ವಿಶೇಷವಾಗಿ ಕಾಣಿಸಿಕೊಂಡ ಗುಬ್ಬಿಯ ಎಚ್ಎಎಲ್ ಘಟಕ.


 ಮೈಸೂರಿನ ವಿಶ್ವ ವಿಖ್ಯಾತ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳಿ ಕಾವಲ್ ನಲ್ಲಿ ನಿರ್ಮಾಣವಾಗುತ್ತಿರುವ ಎಚ್ಎಎಲ್ ಘಟಕದ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಸಾಗುವ ಮೂಲಕ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು ಇದನ್ನು ತಿಪಟೂರಿನ ಕಲಾಕೃತಿ ತಂಡ ಸುಮಾರು ಒಂದು ತಿಂಗಳಿನಿಂದಲೂ ಸ್ತಬ್ಧಚಿತ್ರವನ್ನು ತಯಾರಿಸಿತ್ತು 



ನಿಟ್ಟೂರಿನಲ್ಲಿ ಆರಂಭವಾಗುತ್ತಿರುವ ಹೆಚ್ ಎ ಎಲ್ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಮತ್ತು ಪಾವಗಡದ ಸೋಲಾರ್ ಪಾರ್ಕ್ ಸೇರಿ ಎರಡು ವಿಷಯಗಳ ಸಂಯೋಜನೆಯಲ್ಲಿ ಸ್ತಭ್ಧಚಿತ್ರ ನಿರ್ಮಾಣ ಮಾಡಲಾಗಿತ್ತು 

ಈ ಸ್ತಬ್ಧಚಿತ್ರ ನಿರ್ಮಾಣದ ಉಸ್ತುವಾರಿ ಮಲ್ಲಿಕಾರ್ಜನ್ ಮತ್ತಿಘಟ್ಟ ನಿರ್ವಹಿಸಿದರೆ ಮುಖ್ಯ ಕಲಾವಿದರಾಗಿ ಶ್ರೀಗಂಧ ಶ್ರೀನಿವಾಸ್, ಮೈಸೂರಿನ ಸಂದೀಪ್, ಜೀತೇಂದ್ರ ಶಿಲ್ಪಾ ಆರ್ಟ್ಸ್, ಯೋಗೀಶ್ ಬೀಟು, ಹನುಮಂತ, ಮೈಸೂರಿನ ಮಹೇಶ್ ಗಂಜಾಂ ಸೇರಿದಂತೆ ಸುಮಾರು 18 ಜನ ಕಲಾವಿದರು ಶ್ರಮವಹಿಸಿದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು