ಭೂ ಹಗರಣದಲ್ಲಿ ಐವತ್ತರಿಂದ ಅರವತ್ತು ಮಂದಿ ರಾಜಕಾರಣಿಗಳು ಜೈಲು ಸೇರೋದು ಗ್ಯಾರಂಟಿ ಎಂದ ಶಾಸಕ ಎಸ್ ಆರ್ ಶ್ರೀನಿವಾಸ್.


ಗುಬ್ಬಿ:ಹೊಸದಾಗಿ ಬಂದಂತಹ ರಾಜಕಾರಣಿಗಳು ಗ್ರಾಮೀಣಾ ಪ್ರದೇಶದ ಜನರಲ್ಲಿ ಒಡಕು ಮೂಡಿಸುತ್ತಿರುವುದು ಸರಿಯಲ್ಲ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

  ತಾಲೂಕಿನ ದೊಡ್ಡಗುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೇರಲೇಕೆರೆ ಗ್ರಾಮದಲ್ಲಿ ನಾಲ್ಕು ಕೋಟಿ ರೂ ಅನುದಾನದ ದೊಡ್ಡಗುಣಿಯಿಂದ ಸಂಪಿಗೆ ರಸ್ತೆಗೆ ಹಾದುಹೋಗುವ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ನನ್ನ ಅಧಿಕಾರದ ಅವಧಿಯಲ್ಲಿ ಗ್ರಾಮೀಣಾ ಭಾಗಗಳಿಗೆ ಹೆಚ್ಚು ಹೊತ್ತನ್ನು ನೀಡಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದ ಅವರು ಭೂ ಹಗರಣದ ತನಿಖೆಯಿಂದ ತಾಲೂಕಿನ ಬಗರು ಹೂಕ್ಕುಂ ಗೆ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗಿ ತನಿಖೆಯ ಹಂತದಲ್ಲಿರುವಾಗ ಈ ಸಮಿತಿಯ ಸಭೆಯನ್ನು ಕರೆಯಲಾಗಿದೆ ಇರುವುದು ಒಂದೆಡೆಯಾದರೆ, ತಾಲೂಕು ಕಚೇರಿಯ ಸಿಬ್ಬಂದಿಯೇ ಹೆಚ್ಚಿನ ಅವ್ಯವಹಾರ ನಡೆಸಿದ್ದು, ಈ ಹಿಂದೆ ನಡೆದಂತಹ ತನಿಖೆಯಲ್ಲಿ 545 ಎಕರೆ ಭೂ ಹಗರಣವು ಹೊಸದಾಗಿ ಸೇರ್ಪಡೆಯಾಗಿದ್ದು, ಇದರಿಂದ ಸಾರ್ವಜನಿಕರ ಕೆಲಸಗಳಿಗೆ ತೊಂದರೆಯಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಎಂತಹ ದೊಡ್ಡ ರಾಜಕಾರಣಿಗಳ ಯಾವುದೇ ಒತ್ತಡಕ್ಕೆ ಮಣಿಯದೆ ಸತ್ಯ ಸತ್ಯತೆಯನ್ನು ತಿಳಿಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.


  ಕೇವಲ ಭೂ ಹಗರಣಕ್ಕೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ತನಿಖೆಗೆ ಒಳಪಟ್ಟಿರುವವರು ಸರ್ಕಾರಿ ನೌಕರರೇ ಆಗಿದ್ದು ಇದರಿಂದ ತಾಲೂಕಿನ ರೈತರಿಗೆ ಅನ್ಯಾಯ ಮಾಡಿದ ಮಧ್ಯವರ್ತಿಗಳನ್ನು ಈಗಾಗಲೇ ಜೈಲಿಗೆ ಕಳುಹಿಸಿದ್ದು, ಹೊಸ ಭೂ ಹಗರಣದಿಂದ 50ರಿಂದ 60 ರಾಜಕಾರಣಿಗಳು ಜೈಲು ಸೇರುವ ಸಂಭವವಿದೆ ಎಂದು ತಿಳಿಸಿದರು.

   ಪಟ್ಟಣ ಪಂಚಾಯಿತಿ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದರು ಸಹ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಖೈರು ಹಾಜರಾತಿ ಹಿನ್ನೆಲೆ ಎಂಟು ತಿಂಗಳಿನಿಂದ ಯಾವುದೇ ಸಭೆ ನಡೆಯದೇ ಪಟ್ಟಣ ಪಂಚಾಯಿತಿಯ ಅಭಿವೃದ್ದಿ ಕುಂಠಿತವಾಗಿದೆ ಎಂದ ಅವರು ಭರತ್ ಜೋಡೋ ಯಾತ್ರೆಗೆ ನನ್ನ ಬೆಂಬಲವಿದ್ದು, ರಾಷ್ಟ್ರೀಯ ಪಕ್ಷದ ನಾಯಕ ಜಿಲ್ಲೆಗೆ ಬರುತ್ತಾ ಇದ್ದು ಗೌರವ ನೀಡುವುದು ಕರ್ತವ್ಯ. ಹಾಗಾಗಿ ಅವರನ್ನು ಮಾಯಸಂದ್ರ ಗ್ರಾಮದಲ್ಲಿ ಸ್ವಾಗತಿಸುವುದಾಗಿ ತಿಳಿಸಿದರು.

 ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರೇಣುಕಾ ಪ್ರಸಾದ್, ಶಶಿ, ಚಿದಾನಂದ, ಗಂಗಾಧರ್, ರಾಜಣ್ಣ, ರಮೇಶ್ ಉಪಸ್ಥಿತರಿದ್ದರು



ವರದಿ:ಸಂಜಯ್ ಕೊಪ್ಪ 

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು