ಪಟ್ಟಣಕ್ಕೆ ಬಂದ ಜಾಂಬುವಂತ ಭಯದಲ್ಲಿ ಜನರು ಅಧಿಕಾರಿಗಳಿಗೆ ಮನವಿ ಮಾಡಿದ ಶಶಿಕಿರಣ್.

 ಪಾವಗಡ: ಪಟ್ಟಣಕ್ಕೆ ಬಂದ ಜಾಂಬುವಂತ ಪ್ರತಿ ನಿತ್ಯ ಒಂದಿಲೊಂದು ಏರಿಯಾಗಳಿಗೆ ಬೇಟಿ ನೀಡುತ್ತಿರುವ ಕರಡಿಗಳು ಜನರಲ್ಲಿ ಭೀತಿ ಹುಟ್ಟಿಸಿದೆ.



ಇತ್ತೀಚಿಗೆ ಪಾವಗಡ ಪಟ್ಟಣದ ಹಲವು ಬೀದಿಗಳಲ್ಲಿ ಕರಡಿಗಳು ಪ್ರತ್ಯೇಕ್ಷವಾಗುತ್ತಿದ್ದು ಜನರಲ್ಲಿ ಭೀತಿ ಹುಟ್ಟುವಂತೆ ಮಾಡಿವೆ.

 

ಗುರುವಾರ ರಾತ್ರಿ ಪಟ್ಟಣದ ರೆಡ್ಡಿ ಕಾಲೋನಿಯಲ್ಲಿ ಕರಡಿಗಳು ಮನೆಗಳ ಸಮೀಪ ರಾಜಾರೋಷವಾಗಿ ಸಂಚರಿಸಿ ಕೆಲಹೊತ್ತು ಜನರಿಗೆ ಭಯ ಉಂಟಾಗುವಂತೆ ಮಾಡಿವೆ.


ಕಳೆದ ಹಲವು ತಿಂಗಳುಗಳಿಂದ ಪಟ್ಟಣದ ಹಲವು ಕಡೆ ಕರಡಿಗಳು ಪ್ರತ್ಯೇಕ್ಷವಾಗಿರುವುದು ಇನ್ನಷ್ಟೂ ಆತಂಕಕ್ಕೀಡು ಮಾಡಿದೆ, 

 

ಈ ಸಂಬಂಧ ಹೆಲ್ಪ್ ಸೊಸೈಟಿಯ ಮಾನಂ ಶಶಿಕಿರಣ್ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಪತ್ರ ನೀಡಿ ಕರಡಿಗಳ ಉಪಟಳವನ್ನು ತಪ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ 

ಇನ್ನಾದರೂ ಅರಣ್ಯ ಇಲಾಖೆಯವರು ಎಚ್ಚೆತ್ತು ಸಾರ್ವಜನಿಕರ ಆತಂಕವನ್ನು ದೂರಮಾಡುವರೇ ಕಾದುನೋಡಬೇಕಾಗಿದೆ, 



ವರದಿ :  ಶ್ರೀನಾಥ್ ಪಿ. ಜಿ. ಪಾವಗಡ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು