ಜಾತ್ರೆಯಲ್ಲಿ ಗಲಾಟೆ ಒಟ್ಟು 17 ಜನರ ವಿರುದ್ಧ ಪ್ರಕರಣ ದಾಖಲು

ಮಧುಗಿರಿ:ತಾಲ್ಲೂಕಿನ ಕೊಂಡವಾಡಿಯಲ್ಲಿ ಒಂದೆ ಬುಡಕಟ್ಟಿನ ಏಳು ಅಮವಾಸೆ ಅಣ್ಣ ತಮ್ಮಂದಿರು ಸೇರಿ ಬಂಡಿಗಳ ಸಮೇತ ನಡೆದ ಜಾತ್ರೆಯ ವೇಳೆ ಖರ್ಚು ವೆಚ್ಚದ ವಿಚಾರವಾಗಿ ನಡೆದ ಸಣ್ಣ ಗದ್ದಲದಿಂದ ಎರಡು ಗುಂಪುಗಳ ಮಾರಣಾಂತಿಕ ಹಲ್ಲೇ ನಡೆದಿರುವ ಘಟನೆ ವರದಿಯಾಗಿದೆ.



ತಾಲ್ಲೂಕಿನ ಪುರವರ ಹೋಬಳಿಯ ಚೌಡೇಶ್ವರಿ ದೇವಿಯ ಜಾತ್ರೆಯನ್ನು ಸಂಪ್ರದಾಯದಂತೆ ಜ 7ರಂದು ಚೌಡೇಶ್ವರಿ ದೇವಿಯ ಜಾತ್ರೆಯನ್ನು ಸಂಪ್ರದಾಯದಂತೆ ಹಮ್ಮಿಕೊಂಡಿದ್ದು ಜಾತ್ರೆ ಸಂಬಂಧ ಖರ್ಚು ವೆಚ್ಚಗಳನ್ನು ಪರಿಶೀಲಿಸುತ್ತಿದ್ದ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದ್ದು 9 ಜನ ಸೇರಿಕೊಂಡು ವೈಯಕ್ತಿಕ ದ್ವೇಶಕ್ಕೆ ಮಾರುತೀಶ, ರಂಗನಾಥ್, ಶ್ರೀಧರ ಮಾರಣಾಂತಿಕ ಹಲ್ಲೇ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ. 


ಮತ್ತೊಂದು ಗುಂಪು ವೈಯಕ್ತಿಕ ದ್ವೇಶದಿಂದ ಒಟ್ಟು 8 ಜನ ಸೇರಿಕೊಂಡು ಕಾಂತರಾಜು ಮತ್ತು ಚೌಡಯ್ಯ ಮೇಲೆ ಮಾರಣಾಂತಿಕ ಹಲ್ಲೇ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.


ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಠಾಣೆ ಮೆಟ್ಟಿಲೇರಿದ್ದು ಒಂದೆ ಬುಡಕಟ್ಟಿನ ಎರಡು ಗುಂಪುಗಳ ಘರ್ಷಣೆಗೆ ಕಾರಣವಾಗಿದ್ದು ನಂತರ ದೇವಸ್ಥಾನದ ಖರ್ಚು ವೆಚ್ಚಿನ ಆರ್ಥಿಕ ವಿಚಾರದಲ್ಲಿ ಜಗಳ ನಡೆದಿದ್ದು ಎರಡು ಗುಂಪುಗಳ ನಡುವೆ ಪ್ರತ್ಯೇಕ ದೂರು ದಾಖಲಾಗಿವೆ.


 ನಾಗರಾಜು ಎಂಬುವವರು 9 ಜನರ ವಿರುದ್ಧ ದೂರು ನೀಡಿದ್ದು ಚೌಡಯ್ಯ ಎಂಬುವವರು 8 ಜನರ ವಿರುದ್ಧ ದೂರು ನೀಡಿದ್ದು ಒಟ್ಟು 17 ಜನರ ವಿರುದ್ಧ 323, 324, 504, 506 ಕಾಯ್ದೆಯಡಿ ಕೊಡಿಗೇನಹಳ್ಳಿ ಭಾಷೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.



ವರದಿ : ಮಧುಗಿರಿ ಬಾಲುಪಣಿಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು