ಕೆ.ಎಸ್.ಆರ್.ಟಿ.ಸಿ ಡಿಪೋ ನಿರ್ಮಾಣಕ್ಕೆ ಜ.26ರಂದು ಶಂಕುಸ್ಥಾಪನೆ ಸಚಿವ ಜೆ.ಸಿ.ಮಾಧುಸ್ವಾಮಿ .

 ಚಿಕ್ಕನಾಯಕನಹಳ್ಳಿ : ಬಹುವರ್ಷಗಳ ಕನಸು ನನಸಾಗುವ ಕಾಲ ಬಂದಿದೆ ಕೆ.ಎಸ್.ಆರ್.ಟಿ.ಸಿ ಡಿಪೋ ನಿರ್ಮಾಣಕ್ಕೆ ಜ.26ರಂದು ಶಂಕುಸ್ಥಾಪನೆ ಮಾಡಲಾಗುವುದು ಎಂದು ಸಣ್ಣನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ


ತಿಳಿಸಿದರು.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ತಾಲ್ಲೂಕಿಗೊಂದು ಕೆ.ಎಸ್.ಆರ್.ಟಿ.ಸಿ ಡಿಪೋ ಸ್ಧಾಪನೆಯಾಗಬೇಕೆಂದು ಜನರ ಒತ್ತಾಯವಾಗಿತ್ತು. ಸಂಬಂದ ಪಟ್ಟ ಇಲಾಖೆಗೆ ಹಾಗು ಅಧಿಕಾರಿಗಳಿಗೆ ಒತ್ತಡ ಹೇರಿ ಮಂಜೂರು ಮಾಡಿಸಿದೆ.


ನಂತರ ಆ ಸ್ಥಳಕ್ಕೆ ಹೋಗಲು ನಿಗದಿತ ರಸ್ತೆಯ ಸಮಸ್ಯೆ ಉಂಟಾಗಿತ್ತು. ಇದರಿಂದ ಘಟಕ ಸ್ಥಾಪನೆಗೆ ತೊಡಕುಂಟಾಯಿತ್ತು.


ಈ ವಿಚಾರವಾಗಿ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನೆಡೆಸಿ ಸಮಸ್ಯೆಯನ್ನ ಬಗೆಹರಿಸಲಾಯಿತು.


ಡಿಪೋ ಪ್ರಾರಂಭವಾದರೆ ಬಸ್ಸುಗಳ ಸೇವೆ ಸುಲಭವಾಗಲಿದ್ದು ಜನರ ಪ್ರಯಾಣ ಸಂಚಾರಕ್ಕೆ ಸುವ್ಯೆವಸ್ಥೆಯ ಕಾಯಕಲ್ಪ ದೊರೆಯುವುದು ಎಂದ ಅವರು 


ಪಟ್ಟಣದಲ್ಲಿ ಗಣರಾಜ್ಯೋತ್ಸವ ದಿನಾಚಾರಣೆಯನ್ನು ಆಚರಿಸಿ ಬಳಿಕ ಪಟ್ಟಣದ ಪುರಸಭಾ ವ್ಯಾಪ್ತಿಯ ಕಾಡೇನಹಳ್ಳಿ ಹತ್ತಿರ ಸ್ಥಳದಲ್ಲಿ ಬಸ್ ಡಿಪೋ ಸ್ಥಾಪನೆ ಕಾಮಗಾರಿಗೆ ಚಾಲನೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.


ವರದಿ: ಚಿಕ್ಕನಾಯಕನಹಳ್ಳಿ ಚಂದ್ರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು