3ಕೋಟಿ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಗುದ್ದಲಿಪೂಜೆ.


ಗುಬ್ಬಿ: ಮೂರು ಕೋಟಿ ರೂಗಳ ರಸ್ತೆ ಅಭಿವೃದ್ದಿ ಕಾಮಗಾರಿಗೆ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಗುದ್ದಲಿಪೂಜೆ ನೆರವೇರಿಸಿದರು.


ತಾಲೂಕಿನ ಸಿ.ಎಸ್.ಪುರ ಹೋಬಳಿಯ ಬೆಳ್ಳಳ್ಳಿ, ಜಾಲಿಪಾಳ್ಯ, ಅವ್ವೇರಹಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ತಾಲ್ಲೂಕಿನ ಸಿ.ಎಸ್.ಪುರ ಹೋಬಳಿಯಲ್ಲಿ ಈಗಾಗಲೇ ನಿರಂತರವಾಗಿ ಅಭಿವೃದ್ದಿ ಕೆಲಸ ನಡೆಯುತ್ತಿದ್ದು, ಸಿಸಿ ರಸ್ತೆ, ಡಾಂಬರೀಕರಣ ರಸ್ತೆ ಹಾಗೂ ಮನೆ ಮನೆಗೆ ನಳ ಸಂಪರ್ಕದ ಜಲ ಜೀವನ್ ಮಿಷನ್ ಯೋಜನೆ ಕೆಲಸಗಳು ಕೋಟ್ಯಂತರ ರೂಗಳಲ್ಲಿ ನಡೆದಿದೆ. ಒಂದು ನೂರು ಕೋಟಿ ರೂಗಳಿಗೂ ಅಧಿಕ ಕೆಲಸ ನಡೆದಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ತಿಳಿಸಿದರು.ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡುವ ಶಾಸಕ ನಾನಲ್ಲ. ಆಯ್ಕೆಯಾದ ಮರು ಕ್ಷಣವೇ ಅಭಿವೃದ್ದಿ ಮರೀಚಿಕೆಯಾಗಿದ್ದ ಗ್ರಾಮಗಳ ಪಟ್ಟಿ ಮಾಡಿಕೊಂಡು ನಿರಂತರ ಕೆಲಸ ಮಾಡಲಾಗಿದೆ.


ಬಿಜೆಪಿ ಸರ್ಕಾರ ಜೊತೆ ಮಾತನಾಡಿ ಅಭಿವೃದ್ದಿ ಕೆಲಸ ತಂದಿದ್ದೇನೆ. ಕೆಲಸ ಮಾಡಿಯೇ ಜನರ ಮುಂದೆ ತೆರಳಿ ಮತಯಾಚನೆ ಮಾಡುತ್ತೇನೆ. ಮತ್ತೇ ಆಶೀರ್ವಾದ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಮುಖಂಡರಾದ ಗೋವಿಂದರಾಜು, ಲೋಕೇಶ್, ಚಂದ್ರೇಗೌಡ, ವಸಂತ್, ಗುತ್ತಿಗೆದಾರರಾದ ರಾಮಲಿಂಗೇಗೌಡ, ದೇವರಾಜ್ ಹಾಗೂ ಇನ್ನಿತರರು ಹಾಜರಿದ್ದರು.



ವರದಿ : ಗುಬ್ಬಿ ಮಂಜುನಾಥ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು