ಉತ್ತಮ ಶಿಕ್ಷಣದ ಗುರಿ ನಮ್ಮ ದೇಯ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ.

 ಮಧುಗಿರಿ : ಪಟ್ಟಣದಲ್ಲಿರುವ ಶಾಲೆಗಳು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸಿ ಉನ್ನತ ವ್ಯಾಸಂಗಕ್ಕೆ ಸಹಕಾರ ನೀಡುತ್ತೀವೆ ಎಂದು ವಿಧಾನ ಪರಿಷತ್ತು ಸದಸ್ಯ ರಾಜೇಂದ್ರ ರಾಜಣ್ಣ ಅಭಿಪ್ರಾಯಪಟ್ಟರು.



ಅವರು ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ 2022-23ನೇ ಸಾಲಿನ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಮೌಂಟ್ ವ್ಯೂ ವಿರಾಸತ್ ಹಾಗೂ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ನೂತನ ಕ್ರೀಡೋ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು. ಬರಪೀಡಿತ ತಾಲೂಕಿನಲ್ಲಿನ ಹಾಗೂ ವಿಶೇಷವಾದಂತಹ ಶಿಕ್ಷಣ ಪದ್ಧತಿಗಳ ಮೂಲಕ ಶಿಕ್ಷಣ ಸಂಸ್ಥೆಗಳು , ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮ ವ್ಯಾಸಂಗ ನೀಡುವುದರ ಜತೆಯಲ್ಲಿ ಆ ವಿದ್ಯಾರ್ಥಿಗಳನ್ನು ಉನ್ನತ ವ್ಯಾಸಂಗಕ್ಕೆ ಅವಶ್ಯಕತೆಗೆ ತಕ್ಕಂತೆ ಶ್ರಮವಹಿಸಿದ್ದಾರೆ. ಇಂತಹ ಶಿಕ್ಷಣ ಪದ್ಧತಿಯಲ್ಲಿ ಮೌಂಟ್ ವ್ಯೂ ಶಾಲೆಯು ಒಂದಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕೇವಲ ವಿದ್ಯಾಭ್ಯಾಸಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರಗಳಲ್ಲಿ ಚಟುವಟಿಕೆಗಳಲ್ಲಿ ತೊಡಿಗಿಸಿಕೊಳ್ಳುವಂತೆ ಪ್ರೋತ್ಸಾಹಿಸ ಬೇಕು. ಇಂತಹ ನಗರ ಪ್ರದೇಶದಲ್ಲಿ ವಿನೂತನ ವಾದ ಕ್ರೀಡೋ ತರಗತಿಗಳ ಸದುಪಯೋಗ ಪಡಿಸಿಕೊಳ್ಳಿ ಹಾಗೂ ಶಿಕ್ಷಣದಿಂದ ಎಲ್ಲಾವನ್ನು ಗಳಿಸಲು ಅವಕಾಶ ವಿದೆ ಎಂದರು.


ಮೌಂಟ್ ವ್ಯೂ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳಲ್ಲಿರುವ ವಿದ್ಯಾರ್ಥಿಗಳು

ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಸ್ಪೂರ್ತಿದಾಯಕವಾಗಿದೆ ಎಂದರು.


ಡಿಡಿಪಿಐ ಕೆ.ಜಿ ರಂಗಯ್ಯ ಮಾತನಾಡಿ ಸಮಾಜದಲ್ಲಿ ಯಾವುದೇ ವ್ಯಕ್ತಿ ಅಭಿವೃದ್ಧಿಯಾಗುವಂತೆ ಮಾಡುವ ಶಕ್ತಿ ಶಿಕ್ಷಣಕ್ಕಿದೆ. ಶಿಕ್ಷಕರು ಹಾಗೂ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಜಿ.ಸಿದ್ದಗಂಗಪ್ಪನವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಈ ಶಾಲೆಯು ಅನೇಕ ಸಾಧನೆಗಳನ್ನು ಮಾಡುವುದರ ಮೂಲಕ ತನ್ನದೇ ಆದಂತಹ ಕೊಡುಗೆಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.


ಕ್ರಿಡೋ ಶಾಲೆಯ ವಲಯ ವ್ಯವಸ್ಥಾಪಕ ಮಹೇಶ್ ಮಾತನಾಡಿ ಬೆಂಗಳೂರಿನ ಆಯ್ದ ಪ್ರತಿಷ್ಠಿತ ಶಾಲೆಗಳಲ್ಲಿ ಮಾತ್ರ ಕ್ರಿಡೋ ತರಗತಿಗಳನ್ನು ನಡೆಸಲಾಗುತ್ತಿದ್ದು ಅಲ್ಲಿನ ವಿದ್ಯಾರ್ಥಿಗಳಿಂದ ಉತ್ತಮ ಪರೀಕ್ಷೆ ಫಲಿತಾಂಶ ಬಂದಿದೆ. ಇದೇ ಮೊದಲ ಬಾರಿಗೆ ಪ್ರಥಮವಾಗಿ ಮೌಂಟ್ ವ್ಯೂ ಶಾಲೆಯಲ್ಲಿ ಆರಂಭಿಸಲಾಗಿದೆ. ಇದರಿಂದಾಗಿ ಪೂರ್ವ ಪ್ರಾಥಮಿಕ ತರಗತಿಗಳಿಂದ ಆರಂಭವಾಗುತ್ತಿದೆ. ಕ್ರೀಡೊದಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳಿಗೆ ಮುಂಬರುವ ತರಗತಿಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಕ್ರೀಡೋ ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳ ಬಗ್ಗೆ ವಿಶೇಷವಾಗಿ ಗಮನ ಹರಿಸುವಂತಹ ಪಠ್ಯಕ್ರಮಗಳಿವೆ ಎಂದರು.


ಇದೇ ಸಂಧರ್ಭದಲ್ಲಿ ಮೌಂಟ್ ವ್ಯೂ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿರುವ ಕೆ.ಬಿ.ಚೈತ್ರ , ಭ್ರಮರಾಂಬಿಕಾ , ಎಸ್.ಜಿ.ಗೌರವ್ , ರಾಘವೇಂದ್ರ , ನಿತಿನ್ , ಚರಣ್ ಎಂ.ಎಸ್. ವಿದ್ಯಾರ್ಥಿ ಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಉತ್ತಮವಾದ ನೃತ್ಯ ಪ್ರದರ್ಶನಗಳು ಮೂಡಿಬಂದವು.


ಕಾರ್ಯಕ್ರಮದಲ್ಲಿ ಮಂಜುನಾಥ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ಜಿ.ಸಿದ್ದಗಂಗಪ್ಪ , ಖಾಸಗಿ ಶಾಲೆಗಳ ಒಕ್ಕೂಟದ ಎಂ.ಎಸ್.ಶಂಕರನಾರಾಯಣ , ಕಸಾಪ ಅಧ್ಯಕ್ಷೆ ಸಹನ ನಾಗೇಶ್ , ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎನ್.ಮಹಾಲಿಂಗೇಶ್ , ವಕೀಲ ಪಿ.ದತ್ತಾತ್ರೇಯ , ಪುರಸಭಾ ಸದಸ್ಯ ನಾರಾಯಣ್ , ಮುಖಂಡ ಎಂ.ಜಿ.ಮಂಜುನಾಥ್ , ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್.ಜಗದೀಶ್ ಕುಮಾರ್ ಚಿರೆಕ್ ಶಾಲೆಯ ಭಾಸ್ಕರ್ ರೆಡ್ಡಿ , ಎಸ್ ಎಂ ಆಂಗ್ಲಶಾಲೆಯ ವಾಸೀಮ್ ಅಹಮದ್ , 

ಶಿಕ್ಷಣ ಇಲಾಖೆಯ ಪ್ರಾಣೇಶ್ , ತಿಮ್ಮರಾಜು ಮತ್ತು ಭೋಧಕ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಇದ್ದರು.



ವರದಿ : ಮದುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು