ಮಧುಗಿರಿ : ಮಧ್ಯಪಾನ ಮಾಡಿ ಶಾಲೆಗೆ ಹಾಜರಾಗಿದ್ದ ಇಬ್ಬರು ಶಿಕ್ಷಕರು, ಅನಾಧಿಕೃತವಾಗಿ ಗೈರು ಹಾಜರಾಗಿದ್ದ ಒಬ್ಬಶಿಕ್ಷಕನನ್ನು ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಕೆ.ಜಿ.ರಂಗಯ್ಯ ಅಮಾನತ್ತು ಮಾಡಿದ್ದಾರೆ.ತಾಲೂಕಿನ ಗಾಳಿ ಹಳ್ಳಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಎಸ್. ಸಿದ್ದೇಶ್ವರ ಹಾಗೂ ಇದೇ ತಾಲೂಕಿನ ಭೈರಾಪುರ ಶಾಲೆಯ ಶಿಕ್ಷಕ ನಾಗರಾಜು ಮಧ್ಯಪಾನ ಶಾಲೆಗೆ ಹಾಜರಾಗಿದ್ದರು, ಚೌಳಹಳ್ಳಿಯ ಸಹ ಶಿಕ್ಷಕ ಜಗದೀಶ್ ರವರುಗಳನ್ನು ಕರ್ತವ್ಯಲೋಪ ಹಾಗೂ ಅನಾಧಿಕೃತವಾಗಿ ಗೈರು ಹಾಜರಾಗಿದ್ದ ಹಿನ್ನೆಲೆಯಲ್ಲಿ ಎಸ್ ಡಿಎಂಸಿ ಸದಸ್ಯರು ಮೇಲಾಧಿಕಾರಿಗಳು ಸಲ್ಲಿಸಿದ ದೂರಿನ ಅನ್ವಯ ಡಿಡಿಪಿಐ ಮೂವರು ಶಿಕ್ಷಕರನ್ನು ಸೇವೆಯಿಂದ ಅಮಾನತ್ತು ಮಾಡಿ ಆದೇಶಿಸಿದ್ದಾರೆ.
ವರದಿ : ಮದುಗಿರಿ ಬಾಲುಪಣಿಂದ್ರ
