ಮಣಿಕಂಠಸ್ವಾಮಿ ಕಲಾ ಸಂಘದ ವತಿಯಿಂದ ನಡೆದ 37ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ.

 




ಗುಬ್ಬಿ : ಮಣಿಕಂಠಸ್ವಾಮಿ ಕಲಾ ಸಂಘದ ವತಿಯಿಂದ ನಡೆದ 37ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ.


ಪಟ್ಟಣದ ಹಳೇ ಸಂತೆ ಮೈದಾನದ ಆವರಣದಲ್ಲಿ ಇರುವ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 37 ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಣಿಕಂಠ ಸ್ವಾಮಿ ಕಲಾಸಂಘದ ವತಿಯಿಂದ ಪುಷ್ಪಾಲಂಕೃತ ಹಂಸರಥೋತ್ಸವವನ್ನು ಆಚರಿಸಲಾಯಿತು.


ಮಣಿಕಂಠ ಕಲಾ ಸಂಘದ ರೇಣುಕಾಪ್ರಸಾದ್ ಗುರುಸ್ವಾಮಿ ಮಾತನಾಡಿ ವಾರ್ಷಿಕೋತ್ಸವ ಕಾರ್ಯಕ್ರಮ ವು ಸುಮಾರು 37 ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿತ್ತು ಈ ವರ್ಷ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಬಂದು ಉತ್ತಮ ರೀತಿಯಲ್ಲಿ ದಾಸೋಹ ಸೇವೆ ಹಾಗೂ ರಥೋತ್ಸವದಲ್ಲಿ ಭಾಗವಹಿಸಿರುವುದು ವಿಶೇಷವಾಗಿ ಕಂಡುಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಮಾತನಾಡಿ ಮೂರು ವರ್ಷಗಳಿಂದ ಕೊರೊನಾ ಇದ್ದ ಕಾರಣ ಮಾಲಾಧಾರಿಗಳ ಸಂಖ್ಯೆ ಇಳಿಮುಖವಾಗಿತ್ತು ಆದರೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಏರಿಕೆಯಾಗಿದ್ದು ಉತ್ತಮ ರೀತಿಯಲ್ಲಿ ದಾಸೋಹ ಹಾಗೂ ಕಲಾತಂಡಗಳ ಜೊತೆ  ಅದ್ದೂರಿ ಮೆರವಣಿಗೆಗೆ ಸಹಕಾರಿಯಾಯಿತು ಮುಂದಿನ ದಿನಗಳಲ್ಲಿ ಇನ್ನೂ ಅದ್ದೂರಿ ಕಾರ್ಯಕ್ರಮ ನಡೆಯಲಿದೆ ಎಂದರು.



ಇದೇ ಸಂದರ್ಭದಲ್ಲಿ ದಾಸೋಹ ವ್ಯವಸ್ಥೆ ಹಾಗೂ ವಾಸವಿ ಮಹಿಳಾ ಸಂಘದ ವತಿಯಿಂದ ಭಜನೆ ಮತ್ತು ಅಯ್ಯಪ್ಪ ಸ್ವಾಮಿಯ ಪದಗಳನ್ನು ಹಾಡಲಾಯಿತು.



ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಮಾಲಾಧಾರಿಗಳು ಹಾಗೂ ಭಕ್ತರು ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು