ಶ್ರೀ ಬನಶಂಕರಿ ದೇವಿಯ ಜಾತ್ರ ಮಹೋತ್ಸವ ಹಾಗೂ ಅದ್ದೂರಿ ಸಿಡಿ ಉತ್ಸವ.

 ಮಧುಗಿರಿ : ತಾಲೂಕಿನ ಪುರವರ ಹೋಬಳಿಯ ಕೊಂಡವಾಡಿ ಗ್ರಾಮದಲ್ಲಿ ಶಕ್ತಿ ದೇವತೆ ಶ್ರೀ ಬನಶಂಕರಿ ದೇವಿಯ ಜಾತ್ರ ಮಹೋತ್ಸವ ಹಾಗೂ ಸಿಡಿ ಉತ್ಸವು ಕಳೆದ ಐದು ವರ್ಷಗಳ ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.



ಶ್ರೀ ಕೊಂಡವಾಡಿ ಮಹಾ ಸಂಸ್ಥಾನಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದ್ದು ಕುಂಚಿಟಿಗ ಜನಾಂಗದ ಬಡವನವರ ಕುಲದ ಆರಾಧ್ಯ ದೇವತೆಯಾಗಿ ಶ್ರೀ ಬನಶಂಕರಿ ದೇವಿಯು ನೆಲೆಸಿದ್ದಾಳೆ ಇಲ್ಲಿ ಶುಕ್ರವಾರ ಜಾತ್ರ ಮಹೋತ್ಸವವನ್ನು ಏರ್ಪಡಿಸಿದ್ದು ಐತಿಹಾಸಿಕ ಕಾರ್ಯಕ್ರಮ ವಾದ ಸಿಡಿ ಉತ್ಸವವು ಭಕ್ತರ ಆಕರ್ಷಣೆ ಯಾಗಿತ್ತು. ಇಬ್ಬರು ಕುರುಬ ಸಮುದಾಯದ ದೇವಿ ಆರಾಧಕರು ಸಿಡಿ ಉತ್ಸವದಲ್ಲಿ ಸೊಂಟಕ್ಕೆ ಹಗ್ಗವನ್ನು ಸಿಡಿ ಮರಕ್ಕೆ ಕಟ್ಟಿಕೊಂಡು ಕತ್ತಿಯನ್ನು ಹಿಡಿದ ದೇವಿ ಸ್ತುತಿ ಯನ್ನು ಹೇಳುತ್ತಾ ಮೂರು ಬಾರಿ ಪ್ರದಕ್ಷಣೆಯನ್ನು ಹಾಕುವುದು ಸಂಪ್ರದಾಯ ವಾಗಿದ್ದು ಅದರಂತೆ ನಡೆದ ಸಿಡಿ ಉತ್ಸವವು ಭಕ್ತರ ಆಕರ್ಷಣೆಯಾಗಿತ್ತು. ಕುಂಚಿಟಿಗ ಜನಾಂಗದ ಈ ಕಾರ್ಯಕ್ರಮದಲ್ಲಿ ಸಿಡಿ ಏರುವುದು ಕುರುಬ ಸಮುದಾಯದವರಾಗಿದ್ದು ಎರಡು ಸಮುದಾಯದ ಅವಿನಾಭಾವ ಸಂಭಂಧಕ್ಕೆ ಸಾಕ್ಷಿ ಯಾಗಿದೆ.


ಕಾರ್ಯಕ್ರಮದಲ್ಲಿ ತಮಿಳು ನಾಡಿನ ಸದನದ ಉಪ ಸಭಾಪತಿ ಹಾಗೂ ದಿಂಡಗಲ್ ಕ್ಷೇತ್ರದ ಹಾಲಿ ಶಾಸಕ ತಮಿಳು ನಾಡು ನೀರಾವರಿ ನಿಗಮದ ಅಧ್ಯಕ್ಷ ಗಾಂಧಿರಾಜ್ ಮಾತನಾಡಿ ಎರಡು ರಾಜ್ಯಗಳಲ್ಲಿನ ಕಾವೇರಿ ನೀರಿನ ವಿವಾದವು ಮುಗಿದ ಅಧ್ಯಾಯವಾಗಿದ್ದು ವರುಣನ ಕೃಪೆಯಿಂದ ಸಾಕಾಷ್ಟು ನೀರು ಲಭ್ಯವಾಗಿದೆ. ಎರಡು ರಾಜ್ಯದ ಜನತೆ ಸಹೋದರತೆಯಿಂದ ಬಾಳುತ್ತಿದ್ದು ಯಾವುದೇ ಗಂಭೀರ ಸಮಸ್ಯೆಗಳಿಲ್ಲವಾಗಿವೆ.


 ನಮಗೂ ಕೊಂಡವಾಡಿ ಸಂಸ್ಥಾನಕ್ಕೂ 400ವರ್ಷಗಳ ಸಂಬಂಧವಿದೆ ನಮ್ಮ ಪೂರ್ವಜರು ಇಲ್ಲಿಂದಲೇ ವಲಸೆ ಹೋಗಿದ್ದು ತಮಿಳುನಾಡಿನ 4 ಕ್ಷೇತ್ರಗಳಲ್ಲಿ ನಮ್ಮ ಸಮಾಜದ ಶಾಸಕರಿದ್ದಾರೆ. ಈಗಲೂ ಕುಂಚಿಟಿಗ ಸಮುದಾಯದ ಪರಂಪರೆಯನ್ನು ಪಾಲಿಸುತ್ತಿದ್ದು ಈ ಬಾರಿ ಮೂಲ ದೇವಸ್ಥಾನಕ್ಕೆ ಬಂದು ಕುಲ ದೇವಿಯ ದರ್ಶನ ಪಡೆದಿರುವುದು ಸಂತೋಷ ವಾಗಿದೆ.


ಮಾಜಿಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಹನುಮಂತ ನಾಥ ಸ್ವಾಮೀಜಿ ಮಾತನಾಡಿ ಕಯಂಚಿಟಿಗರ ಪರಂಪರೆ ಶ್ರೀಮಂತಿಕೆಯಿಂದ ಕೂಡಿದೆ. ಮೂರು ರಾಜ್ಯದಲ್ಲಿ ಕುಂಚಿಟಿಗರ ಕುರುಹಿದ್ದು ಇಂದು ತಮಿಳುನಾಡು ರಾಜ್ಯದ ಹಿರಿಯ ಮಾಜಿ ಸಚಿವರು ಬಂದಿದ್ದಾರೆ. ರಾಜ್ಯದಲ್ಲಿಯೂ ಕುಂಚಿಟಿಗರು ಕನಿಷ್ಟ 10 ಶಾಸಕರು ಆಯ್ಕೆಯಾಗುವಷ್ಟು ಶಕ್ತಿವಂತರಾಗಿದ್ದು ಅದು ನೆರವೇರಲು ಎಲ್ಲರೂ ಒಗ್ಗಾಟಾಗಿ ಎಂದರು.


ಮಾಜಿ ಸಚಿವ ಟಿ ಬಿ ಜಯಚಂದ್ರ ಮಾತನಾಡಿ ಕುಂಚಿಟಿಗ ಜನಾಂಗದ ಸಂಪ್ರದಾಯದಂತೆ ಈ ಕಾರ್ಯಕ್ರಮ ನಡೆಯುತ್ತಿದ್ದು, ನೂರಾರು ವರ್ಷದ ಇತಿಹಾಸವಿದೆ ಎಂದರು.


ಶಾಸಕರಾದ ಎಂ.ವಿ.ವೀರಭದ್ರಯ್ಯ ಮಾತನಾಡಿ ಕುಂಚಿಟಿಗ ಸಮಾಜದ ಸಂಪ್ರದಾಯ ಹಾಗೂ ವೈಶಿಷ್ಟ್ಯಗಳನ್ನು ಈ ಜಾತ್ರೆ ಹಾಗೂ ಸಿಡಿ ಉತ್ಸವದಲ್ಲಿ ನೋಡಬಹುದು. ಈ ದೇವಿಯು ಶಕ್ತಿದೇವತೆಯಾಗಿದ್ದು ಇಡೀ ಸಮಾಜದ ಒಳಿತಿಗೆ ಪ್ರಾರ್ಥಿಸಿದ್ದಾಗಿ ತಿಳಿಸಿದರು.


ಉತ್ಸವದ ಮೇಲುಸ್ತುವಾರಿ ತುಮುಲ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ ಈ ಜಾತ್ರಾ ಮಹೋತ್ಸವಕ್ಕೆ 400 ವರ್ಷಗಳ ಇತಿಹಾಸವಿದೆ. ಸಂಪ್ರದಾಯ ಹಾಗೂ ಪರಂಪರೆಯನ್ನು ಸದಾ ಉಳಿಸಿಕೊಳ್ಳುವಲ್ಲಿ ಹಿರಿಯರು ನಮಗೆ ಆದರ್ಶವಾಗಿದ್ದು ಗುರುಗಳ ಸಮ್ಮುಖದಲ್ಲಿ ಉತ್ಸವ ಸಂಪೂರ್ಣವಾಗಿದೆ. ಕುಲದ ಎಲ್ಲ ಬುಡಕಟ್ಟುಗಳ ಅಭಿವೃದ್ಧಿ ಹಾಗೂ ಸರ್ವರ ಹಿತ ಕಾಯಲು ಕುಲಸ್ಥರು ಸಮಾಜಮುಖಿಯಾಗಿ ಕೆಲಸ ಮಾಡೋಣ ಎಂದರು.


ಕಾರ್ಯಕ್ರಮದಲ್ಲಿ ದೇಗುಲ ಗೌರವ ಕಾರ್ಯದರ್ಶಿ ರವಿಕುಮಾರ್, ಉಪಾದ್ಯಕ್ಷ ಬಿಜವರ ಶ್ರೀನಿವಾಸ್, ಸದಸ್ಯರು ಹಾಗೂ ಇತರರು ಸಾವಿರಾರು ಭಕ್ತರು ಮತ್ತು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಎಸ್. ಆರ್. ಗೌಡ, ಕೌಶಲ್ಯಾಭಿವೃದ್ಧಿ ನಿಮಗದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ. ಇತರರು ಇದ್ದರು ಭಾಗವಹಿಸಿದ್ದರು.


ವರದಿ : ಮಧುಗಿರಿ ಬಾಲುಪಣಿಂದ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು