ಭ್ರಾತೃತ್ವದ ಚಿಂತನೆ ಕಟ್ಟಿಕೊಟ್ಟದ್ದು ಭಾರತದ ನೆಲಮೂಲ : ಹರ್ಷ ಅಭಿಮತ

 ಚಿಕ್ಕನಾಯಕನಹಳ್ಳಿ : ವಿದ್ಯಾರ್ಥಿಗಳು ಆಸಕ್ತಿಯಿಂದ ವಿವೇಕಾನಂದರ ಇತಿಹಾಸ ಓದಿದರೆ  ಭಾರತದ ದರ್ಶನವಾಗುತ್ತದೆ, ಭ್ರಾತೃತ್ವದ ಚಿಂತನೆ  ಕಟ್ಟಿಕೊಟ್ಟದ್ದು ಭಾರತದ ನೆಲಮೂಲ ಎಂದು  ತಾಲ್ಲೂಕು ಕ. ಸಾ. ಪ ಕಾರ್ಯ ಕರಣಿ ಸಮಿತಿ ಸದಸ್ಯ, ಸಂಪನ್ಮೂಲ ವ್ಯಕ್ತಿ  ಹರ್ಷ ವಿದ್ಯಾರ್ಥಿಗಳ ಕರೆ ನೀಡಿದರು.

      



ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ  ಹಮ್ಮಿಕೊಂಡಿದ್ದ  ಸ್ವಾಮಿ ವಿವೇಕಾನಂದ ಜಯಂತಿ ಹಾಗು ರಾಷ್ಟ್ರೀಯ ಯುವ ಸಪ್ತಾಹ ದಿನದ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.


ಭಾರತದ ಸನಾತನ ಧರ್ಮದ ಉಳಿವಿಗೆ ಇವರ ಕೊಡುಗೆ ಅಪಾರವಾದದ್ದು. ದೀನ ದಲಿತರ ಸೇವೆ, ಮಹಿಳಾ ಸಮಾನತೆ, ರಾಷ್ಟ್ರೀಯ ಮೌಲ್ಯಗಳನ್ನು  ಪ್ರಪಂಚಕ್ಕೆ ಬಿತ್ತಿರಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ.

     ಜಗತ್ತಿನ ಹಲವು ದಾರ್ಶನಿಕರು ಇವರ ಸಂದೇಶಗಳನ್ನು ಇಂದಿಗೂ ರೂಡಿಸಿಕೊಳ್ಳುವ ಮೂಲಕ  ಹೊಸ ಬದುಕಿನ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ . ರಾಮಕೃಷ್ಣ ಪರಮಹಂಸರ ಪ್ರಭಾವ, ಮತ್ತು ದಾರಿಯಲ್ಲಿ ಸಾಗಿದ ನರೇಂದ್ರ ವಿವೇಕಾನಂದರಾಗಿ ಬೆಳೆದದ್ದು ಭಾರತದ ಹೆಮ್ಮೆ ಎಂದರು.


 ಆಶಯ ನುಡಿಗಳನ್ನಾಡಿದ ಎನ್ಎಸ್ಎಸ್ ಅಧಿಕಾರಿ ಪ್ರೊ. ಸದಾನಂದ ಸ್ವಾಮಿ  ನರೇಂದ್ರನ ಬಾಲ್ಯ  ಧೈರ್ಯ ಮತ್ತು ಏಕಾಗ್ರತೆ ಮೂಲಕ ಹೊಸತನ ಸಾಧಿಸಿದರು ಎಂದರು.


ಚಿಕಾಗೋ ಸಮ್ಮೇಳನದಲ್ಲಿ ಭಾರತದ ಚರಿತ್ರೆಯನ್ನು ಎತ್ತಿಡಿಯುವಲ್ಲಿ ಅವರ ಪಾತ್ರ ಅಪಾರವಾದದ್ದು. ಗುರಿ ಮತ್ತು ಗುರುವಿನ ದಾರಿ ಇದ್ದಲ್ಲಿ ಯಶಸ್ಸು ತನ್ನದಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ಒಳ್ಳೆ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳ ಬೇಕೆಂದು ಹೇಳಿದರು.


 ವಿದ್ಯಾರ್ಥಿನಿ, ಯುವ ಕವಿಯಿತ್ರಿ .ತೇಜಸ್ವಿನಿ  ಮಾತನಾಡಿ ವಿವೇಕಾನಂದರ  ಚಿಕಾಗೋದ  ಸಮಾವೇಶದಲ್ಲಿ ಉಪದೇಶ  ನೀಡಿದ  ಮಾತಿನಲ್ಲಿ  ಅಸ್ಪೃಶ್ಯ,ಬಲ್ಲಿದ,ಬಡವ, ಶ್ರೀಮಂತ ವರ್ಗವನ್ನು ಮೀರಿ  ಅವರ ಚಿಂತನೆ, ವಾಕ್ಚಾತುರ್ಯ  ಎಲ್ಲರ ಹೃದಯವನ್ನು ತಾಕಿತ್ತು.. ಮಾತನಾಡಿದರೆ  ಸ್ವಾಮಿ ವಿವೇಕಾನಂದರ ಮಾತಿನಂತೆ ಎಲ್ಲರಿಗೂ ಮನಮುಟ್ಟುವಂತಿರಬೇಕೆಂದು  ತಿಳಿಸಿದರು.


ವಿದ್ಯಾರ್ಥಿ ರಂಗನಾಥ್,  ಮಾತನಾಡಿ  ವಿವೇಕಾನಂದರು ಉತ್ತಮ  ವಾಗ್ಮಿಗಳು ಆಗಿದ್ದರು. ದೇಶಭಕ್ತಿ ಅಭಿಮಾನ ಹೊಂದಿದವರು, ಮೂರು ಮಕ್ಕಳು ಬಿಲ್ಲು ಬಾಣವನ್ನು ಹಿಡಿದು ಗಾಳಿಯಲ್ಲಿ ತೇಲುತ್ತಿರುವ ಬಲೂನನ್ನು ಹೊಡೆಯಲು ಪ್ರಯತ್ನ ಪಡುತ್ತಿದ್ದರು, ದಾರಿ ಮಧ್ಯೆ ಬಂದಂತಹ ವಿವೇಕಾನಂದರನ್ನ ಮಕ್ಕಳು ಈ ಬಲೂನನ್ನ ಹೊಡೆದು ತೋರಿಸಿ ಎಂಬ ಮಾತಿಗೆ  ನಿಮ್ಮ ಮುಂದೆ ಗುರಿಯಿದೆ  ಅಂದರೆ ನಿಮ್ಮ ದೈಹಿಕ ಶಕ್ತಿ, ನಿಮ್ಮ ಮಾನಸಿಕ ಶಕ್ತಿ, ಆತ್ಮಸ್ಥೈರ್ಯ, ಈ ಮೂರು ಎಕೀಕೃತವಾಗಿ  ಕೆಲಸ ಮಾಡಿದರೆ ಮಾತ್ರ ಗುರಿ ತಲುಪಲು ಸಾಧ್ಯ ಎಂದು ಬಲೂನನ್ನು ಏಕಕಾಲದಲ್ಲಿ ಹೊಡೆದು ತೋರಿಸಿದರು


ಸಮಾರಂಭದ  ಅಧ್ಯಕ್ಷೀಯ  ನುಡಿಯನ್ನು ಆಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಸಿ.ರವಿಕುಮಾರ್ ಮಾತನಾಡಿ  ಸಮಕಾಲೀನ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ವಿವೇಕಾನಂದ ಅತ್ಯಂತ ಅಗತ್ಯ ಆಗಿದ್ದಾರೆ ,ಇಂದು ಸರ್ಕಾರ ಯುವಜನ ಸಬಲೀಕರಣ ಹಾಗೂ  ಕೌಶಲ್ಯಾಭಿವೃದ್ಧಿ  ಇಲಾಖೆ ಮೂಲಕ  ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಿ ಬದುಕಲು  ವಿವೇಕಾನಂದ ಓದು ಅಗತ್ಯ ಎಂದರು.

ತಾವು ತಮ್ಮ ಗುರಿಗಳನ್ನು ಅರಿತು ಒಳ್ಳೆ ಮಾರ್ಗದಲ್ಲಿ ಸಾಗಿದರೆ  ಭವಿಷ್ಯ ಉತ್ತಮವಾಗುತ್ತದೆ ಎಂದರು.



ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥರಾದಪ್ರೊ.ಸತೀಶ್ ಮಾತನಾಡಿ ವಿವೇಕಾನಂದರ ಬದುಕು  ಎಲ್ಲರಿಗೂ ಆದರ್ಶಪ್ರಾಯವಾದುದು ಎಂದರು. ಹಿಂದೂ ಧರ್ಮದ ತತ್ವಗಳು ಜಾಗತಿಕ ಮಟ್ಟದಲ್ಲಿ ಬೆಳೆಯಲು ಅವರ ವಿಚಾರಗಳು ದಾರಿದೀಪವಾಗಿವೆ ಎಂದರು.


 ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ರಮೇಶ್ ಮತ್ತು ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು. ಕುಮಾರಿ ನಿರೂಪಿಸಿ, ರಂಗನಾಥ್ ಸ್ವಾಗತಿಸಿ, ವಂದಿಸಿದರು.


ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು