ಕುಡಿತದಿಂದ ಕುಟುಂಬಗಳು ಬೀದಿಗೆ ಬೀಳದಂತೆ ಮಾಡುವ ಉದೇಶ ಧರ್ಮಸ್ಥಳ ಸಂಘದ ಉದ್ದೇಶ ಜಿಲ್ಲಾ ನಿರ್ದೇಶಕಿ ದಯಾಶೀಲಾ

 ಗುಬ್ಬಿ : ಕುಡಿತದಿಂದ  ಸಾವಿರಾರು ಕುಟುಂಬಗಳು  ಬೀದಿಗೆ ಬೀಳುತ್ತಿರುವುದನ್ನ ಕಂಡು ಅವರಿಗೆಲ್ಲ ಮನ ಪರಿ ವರ್ತನೆ ಮಾಡಿ ಒಳ್ಳೆಯದಾರಿಗೆ ತರುವುದು  ಸಂಸ್ಥೆಯ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ತಿಳಿಸಿದರು.

 


    ತಾಲ್ಲೂಕಿನ ಎಂ.ಎನ್ ಕೋಟೆ ಗ್ರಾಮದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ  ಬೆಂಗಳೂರು, ಆಯೋಜನೆ ಮಾಡಿದ್ದ 1638 ನೇ ಮಧ್ಯವರ್ಜನ ಶಿಬಿರ ಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಎಂಟು ದಿನಗಳ ಕಾಲ  ಅವರ ಮನಸ್ಸಿನಲ್ಲಿರುವಂತಹ ಕೆಟ್ಟ ಚಟಗಳನ್ನು ದೂರ ಮಾಡಿ ಸಮಾಜದಲ್ಲಿ ಹೇಗೆ ಬದುಕಬೇಕು ಕುಟುಂಬದ ನಿರ್ವಹಣೆ ಹೇಗೆಲ್ಲ ಮಾಡಬೇಕು ಎಂಬ ಜಾಗೃತಿ ಹಾಗೂ ಮುಂದಿನ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಪ್ರತಿನಿತ್ಯ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಅವರಿಗೆ ಮಾರ್ಗದರ್ಶನವನ್ನು ನೀಡಲಾಗಿದೆ ಸುಮಾರು 60ಕ್ಕೂ ಹೆಚ್ಚು ಮಧ್ಯ ವ್ಯಸನಿಗಳು ಇಲ್ಲಿಗೆ ಆಗಮಿಸಿ ಇನ್ನು ಮುಂದೆ ಮಧ್ಯವನ್ನು ಕುಡಿಯುವುದಿಲ್ಲ ಎಂದು ಶಪಥ ಮಾಡಿದ್ದಾರೆ ಎಂದು ತಿಳಿಸಿದರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಅ. ನಾ ಲಿಂಗಪ್ಪ ಮಾತನಾಡಿ ಜಿಲ್ಲೆಯ ಹಲವು ಭಾಗಗಳಿಂದ  ಮಧ್ಯ ವ್ಯಸನಿಗಳು ಇಲ್ಲಿಗೆ ಆಗಮಿಸಿ ಜಾಗೃತಿಯನ್ನು ಪಡೆದಿದ್ದಾರೆ  ಮುಂದಿನ ದಿನದಲ್ಲಿ ಅವರೆಲ್ಲ ಸಮಾಜಕ್ಕೆ ಒಂದು ದೀಪವಾಗುತ್ತಾರೆ ಎಂದು ತಿಳಿಸಿದರು.

 ಮಧ್ಯವರ್ಜನ ಶಿಬಿರದಲ್ಲಿ ಕುಡಿತದ ದಾಸ್ಯವನ್ನು ಬಿಟ್ಟಂತಹ ಜಗದೀಶ್ ಮಾತನಾಡಿ  ನಮ್ಮ ಜೀವನ ಬಹಳಷ್ಟು ಕೆಟ್ಟದಾಗಿತ್ತು ಬಸ್ ನಿಲ್ದಾಣ  ಮರದ ಕೆಳಗೆ ಎಲ್ಲಂದರಲ್ಲಿ ಅಲ್ಲಿ  ಮಲಗಿ ನಮ್ಮ ಬದುಕನ್ನೇ ಅಪವಿತ್ರತೆ ಮಾಡಿಕೊಂಡಿದ್ದೆವು ಇಲ್ಲಿಗೆ ಬಂದು  ಶಿಬಿರದಲ್ಲಿ ಭಾಗವಹಿಸಿ  ಪವಿತ್ರತೆಯನ್ನು ಕಂಡುಕೊಂಡಿದ್ದೇವೆ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ ಬೆಟ್ಟದಹಳ್ಳಿ ಚಂದ್ರಶೇಖರ ಮಹಾ ಸ್ವಾಮೀಜಿ, ಗ್ರಾಮ ಪಂಚಾಯತಿ ಅಧ್ಯಕ್ಷ ಶಶಿಕಲ ಯೋಗಿಶ್, ಉಪಾಧ್ಯಕ್ಷ ದಿಲೀಪ್ ಕುಮಾರ್, ಎಲ್ಲಾ ಸದಸ್ಯರುತಾಲ್ಲೂಕು ಯೋಜನ ಅಧಿಕಾರಿ ರಾಜೇಶ್, ಜಿಲ್ಲಾ ಯೋಜನಾಧಿಕಾರಿ ಗಣೇಶ್ ಆಚಾರ್ಯ, ವೈದ್ಯಾಧಿಕಾರಿ ಸವಿತಾ, ಶಿವರಾಜು, ಪುಟ್ಟರಾಜು, ಶಿವಕುಮಾರ್, ಕಾಂತರಾಜು, ಮಹದೇವಯ್ಯ,  ಸೇರಿದಂತೆ ಇನ್ನಿತರರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು