ಸಂವಿಧಾನ ನಮ್ಮೆಲ್ಲರಿಗೂ ಒಂದೇ ವೇದಿಕೆ ಹಂಚಿಕೊಳ್ಳುವ ಅವಕಾಶ ಕೊಟ್ಟಿದೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ.

 ಗುಬ್ಬಿ : ಸಂವಿಧಾನದ ರಚನೆಯಿಂದಾಗಿ ನಾವೆಲ್ಲರೂ ಸಹ ಇಂದು ಈ ವೇದಿಕೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ ತಿಳಿಸಿದರು.


 ಪಟ್ಟಣದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಪಟ್ಟಣ ಪಂಚಾಯಿತಿ ಗಣರಾಜ್ಯೋತ್ಸವ ಆಚರಣೆ ಸಮಿತಿಯಿಂದ 74ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ದೇಶ ಕಾಯುತ್ತಿರುವ ಅಂತಹ ಸೈನಿಕರಿಗೆ ನಾವು ಸದಾ ಕಾಲ ಚಿರಋಣಿಯಾಗಿರಬೇಕು ಸಂವಿಧಾನದ ರಚನೆಯಿಂದಾಗಿ ಭಾರತ ದೇಶವು ಹರಿದು ಹಂಚಿ ಹೋಗಿದ್ದಂತಹ ಪ್ರದೇಶಗಳನ್ನು ಒಂದುಗೂಡಿಸಿ ಭವ್ಯ ಭಾರತವನ್ನು ಸೃಷ್ಟಿಸಿದ್ದು ಈ ಸುದಿನವಾಗಿದೆ ಇಂತಹ ದಿನವನ್ನು ಪ್ರತಿಯೊಬ್ಬ ಭಾರತೀಯರು ಸಹ ಗೌರವಿಸಬೇಕು ಎಂದು ತಿಳಿಸಿದರು.

 ತಹಶೀಲ್ದಾರ್ ಬಿ ಆರತಿ ಮಾತನಾಡಿ ಇಡೀ ದೇಶವು ಒಂದೇ ಮಾತರಂ ಎನ್ನುವ ಮೂಲಕ ಪ್ರತಿದ್ವನಿಸುತ್ತಿದೆ ಸಮಾನತೆ, ಶಿಕ್ಷಣ,ಮೂಲಭೂತ ಸೌಲಭ್ಯ ಗಳನ್ನು ಜಾರಿಗೆ ತಂದ ದಿನವಾಗಿದೆ ಸ್ವಾತಂತ್ರ್ಯ ಸರ್ವ ಸಂದರ್ಭದಲ್ಲಿ ನೂರಾರು ವೀರ ಯೋಧರು ನಮಗಾಗಿ ಪ್ರಾಣವನ್ನು ಬಿಟ್ಟಿದ್ದರೆ ನಂತರ ಇಡೀ ದೇಶವನ್ನ ಒಂದುಗೂಡಿಸಿರುವುದು ಈ ಗಣರಾಜ್ಯೋತ್ಸವದ ದಿನವಾಗಿದೆ ಇದರಲ್ಲಿ ಪ್ರತಿ ಯುಬ್ಬರು ಭಾಗವಹಿಸಬೇಕು ಎಂದು ತಿಳಿಸಿದರು.

 ಮುಖ್ಯ ಭಾಷಣವನ್ನು ಡಾ ರಮ್ಯಾ ಕೆ ಆರ್ ಮಾತನಾಡಿಬಹಳ ದೊಡ್ಡ ಇತಿಹಾಸವಿರುವ ನಮ್ಮ ದೇಶಕ್ಕೆ ನೂರಾರು ಪರಕಿಯರು ದಾಳಿ ಮಾಡಿದ್ದಾರೆ ಆದರೂ ಸಹ ನಮ್ಮ ವೀರಯೋಧರು, ವೀರ ಸ್ವತಂತ್ರರು ಅವರನ್ನೆಲ್ಲ ಓಡಿಸಿ ನಮ್ಮ ದೇಶವನ್ನು ಕಟ್ಟಿದ್ದಾರೆ ಬೆಳೆಸಿದ್ದಾರೆ ಉಳಿಸಿದ್ದಾರೆ ಅಂತಹ ಮಹಾನ್ ದಿನ ಗಣರಾಜ್ಯೋತ್ಸವವಾಗಿದ್ದು ಇಂದಿನ ವಿದ್ಯಾರ್ಥಿಗಳಿಗೆ ಅದರ ಹೆಚ್ಚಿನ ಪರೀವು ಅವಶ್ಯಕತೆ ಇದೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮಹಾಲಕ್ಷ್ಮಿ, ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು