ಬನದ ಹುಣ್ಣಿಮೆ ಅಂಗವಾಗಿ ಶ್ರೀ ಬನಶಂಕರಿ ಮತ್ತು ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ಉತ್ಸವ ಅಲಂಕಾರ.

 ಚಿಕ್ಕನಾಯಕನಹಳ್ಳಿ : ಬನದ ಹುಣ್ಣಿಮೆ ಅಂಗವಾಗಿ ಶ್ರೀ ಬನಶಂಕರಿ ಮತ್ತು ಚೌಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜೆ, ಉತ್ಸವ ಅಲಂಕಾರ ಪಟ್ಟಣದ ಬನಶಂಕರಿ ದೇವಾಲಯದಲ್ಲಿ ನಡೆಯಿತು.



       ಪಟ್ಟಣದ ದೇವಾಂಗ ಬೀದಿಯಲ್ಲಿರುವ ಬನಶಂಕರಿ ದೇವಿಗೆ ವಿಶೇಷ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ ಬನಶಂಕರಿ ದೇವಿಯನ್ನು ಕೆರೆ ಬಾವಿಯಿಂದ ಅಮ್ಮನವರ ಕಳಸವನ್ನು ಮಂಗಳವಾದ್ಯದೊಂದಿಗೆ ಕರೆತರಲಾಯಿತು. ಕೆರೆಬಾವಿಯಿಂದ ಅಮ್ಮನವರನ್ನು ಕರೆತಂದ ನಂತರ ದೇವಾಂಗ ಸಂಘದಿಂದ ಭಕ್ತಾಧಿಗಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

       ಅಮ್ಮನವರನ್ನು ದೇವಾಲಯಕ್ಕೆ ಕರೆ ತಂದ ನಂತರ ಅಮ್ಮನವರ ರಥೋತ್ಸವ ನೆರವೇರಿತು.. ನಂತರ ದೇವಾಲಯದಲ್ಲಿ ಉತ್ಸವದ ನಂತರ ಅಮ್ಮನವರ ಉಯ್ಯಾಲೆ ಉತ್ಸವ ನಡೆಯಿತು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ವಿತರಿಸಲಾಯಿತು.

       ಈ ಸಂದರ್ಭದಲ್ಲಿ ದೇವಾಂಗ ಸಂಘದ ಅಧ್ಯಕ್ಷ ಧನರಾಜ್(ಕೆಇಬಿ), ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಧನರಾಜ್ ಚಿಗ್ಗಾವೆ, ನಿರ್ದೇಶಕರುಗಳಾದ ಶಿಕ್ಷಕ ಕುಮಾರಸ್ವಾಮಿ, ಸಿ.ವಿ.ಪ್ರಕಾಶ್, ನಟರಾಜ್, ಬಿ.ಎನ್.ಜಗದೀಶ್, ಸತೀಶ್, ಬನಶಂಕರಯ್ಯ, ಸಿ.ಟಿ.ಪಾಂಡುರಂಗಯ್ಯ, ಮುಖಂಡರುಗಳಾದ ರಮೇಶ್, ಸಿ.ಎಸ್.ಗಿರೀಶ್, ಸಿ.ಎಸ್.ಗೋಪಿನಾಥ್, ರಾಘವೇಂದ್ರ, ಸಿ.ಆರ್.ರಾಘವೇಂದ್ರ, ರಂಗನಾಥ್, ಗೋಪಿ ಮತ್ತಿತರರು ಉಪಸ್ಥಿತರಿದ್ದರು.


ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು