ಕುಡಿತ ಬಿಟ್ಟು ದುಡಿಮೆ ಮಾಡುವ ಮೂಲಕ ಸುಖ ಸಂಸ್ಕಾರ ಮಾಡಲು ಮುಂದಾಗಬೇಕು: ತಾಲ್ಲೂಕ್ ಪಂಚಾಯಿತಿ ಮಾಜಿ ಸದಸ್ಯ ಅ.ನ.ಲಿಂಗಪ್ಪ.

 ಗುಬ್ಬಿ : ಮಧ್ಯವರ್ಜನ ಶಿಬಿರ ಸಮಾಜದ ಅನೇಕ ಕುಂಟುಂಬಗಳ ಪಾಲಿಗೆ ಹೊಸ ಬೆಳಕು ಕೊಡುವ ಉತ್ತಮ ಕಾರ್ಯಕ್ರಮ ಆದ್ದರಿಂದ ಕುಡಿತ ಬಿಟ್ಟು ದುಡಿಮೆ ಮಾಡುವ ಮೂಲಕ ಸುಖ ಸಂಸ್ಕಾರ ಮಾಡಲು ಮುಂದಾಗಬೇಕು ಎಂದು ತಾಲ್ಲೂಕ್ ಪಂಚಾಯಿತಿ ಮಾಜಿ ಸದಸ್ಯ ಅ.ನ.ಲಿಂಗಪ್ಪ ತಿಳಿಸಿದರು.



ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ 1638ನೇ ಮಧ್ಯ ವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಧ್ಯ ವರ್ಜನ ಶಿಬಿರವನ್ನು ಮಾಡುವ ಮೂಲಕ ಸಮಾಜದ ಹೆಣ್ಣು ಮಕ್ಕಳ ಕಷ್ಠ ಸುಖಗಳನ್ನು ಬಗೆಹರಿಸುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ  ಮುಂದಾಗಿರುವುದು ಉತ್ತಮ ಕೆಲಸವಾಗಿದೆ ಗ್ರಾಮೀಣ ಭಾಗದಲ್ಲಿ ಸಾಕಷ್ವು ಜನ ಕುಡಿತಕ್ಕೆ ಬಲಿಯಾಗುತ್ತಿರುವುದು ದೊಡ್ಡ ದುರಂತವಾಗಿದೆ.ಕುಡಿತದಿಂದ ಮುಕ್ತಿಗೊಳಿಸಲು ವಿರೇಂದ್ರಹೆಗ್ಗಡೆಯವರು ಮಧ್ಯವರ್ಜನ ಶಿಬಿರ ಮಾಡುವುದರ ಮೂಲಕ ಸಾಕಷ್ವು ಕುಂಟುಂಬಗಳಿಗೆ ದಾರಿದೀಪವಾಗಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ವತಿಯಿಂದ ಮಹಿಳಾ ಸಬಲೀಕರಣ ಮಾಡುವ ಮೂಲಕ ಸಂಘ ಸಂಸ್ಥೆಗಳನ್ನು ಮಾಡಿ ಸಾಲ ಕೊಡುವುದರ ಮೂಲಕ ಆರ್ಥಿಕವಾಗಿ   ಸ್ವಾವಲಂಭಿಗಳಾಗಿ ಬದುಕಲು ದಾರಿದೀಪವಾಗಿದ್ದಾರೆ ಎಂದು ತಿಳಿಸಿದರು.


ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಯೋಗೀಶ್ ಮಾತನಾಡಿ ಮಧ್ಯ ವರ್ಜನ ಶಿಬಿರದಲ್ಲಿ ಮದ್ಯ ವ್ಯಸನಿಗಳನ್ನು ಸೇರಿಸಿದರೆ ಮನ ಪರಿವರ್ತನೆಯಾಗಿ ಪರಿಶುದ್ದರಾಗಿ ಹೋಸ ಜೀವನ ಸಾಗಿಸಲು ಪ್ರಾರಂಭಿಸುತ್ತಾರೆ.ಮದ್ಯ ವರ್ಜನ ಶಿಬಿರಕ್ಕೆ  ಮದ್ಯ ವ್ಯಸನಿಗಳನ್ನು ಹೆಚ್ಚಾಗಿ ಸೇರಿಸಿ ಕುಡಿತ ಬಿಟ್ಟು ಸಮಾಜದಲ್ಲಿ ಉತ್ತಮ ಪ್ರಜೆಯಾಗಬೇಕು ಎಂದ ಅವರು ಸರ್ಕಾರ  ಮಾಡುವ ಕೆಲಸವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ ಸಾಕಷ್ವು ಬಡ ಕುಂಟುಂಬಗಳಲ್ಲಿ ಮಧ್ಯ ಸೇವನೆ ಮಾಡಿ ಹಾಳಾಗುತ್ತಿದ್ದವರನ್ನು ಶಿಬಿರ ಮಾಡಿ ಮದ್ಯ ವ್ಯಸನಿಗಳನ್ನುಬಸೇರಿಸಿ ಅವರಿಗೆ ಮಾರ್ಗದರ್ಶನ ನೀಡಿ ಮತ್ತೆ ಹೊಸ ಜೀವನ ಮಾಡಲು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಹಕಾರಿಯಾಗಿದೆ ಎಂದು ತಿಳಿಸಿದರು. 


ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ ಆರ್ ದೀಲೀಪ್ ಕುಮಾರು , ಗ್ರಾಮ ಪಂಚಾಯಿತಿ ಸದಸ್ಯರಾದ ಎಂ ಎನ್ ಭೀಮಶೆಟ್ಟಿ , ಹೆಚ್ ಎಸ್ ಕಾಂತರಾಜು ,  ತಾಲ್ಲೂಕ್ ಯೋಜನಾಧಿಕಾರಿ ಎಸ್ ರಾಜೇಶ್ , ಗೌರವಧ್ಯಕ್ಷರಾದ ಬಿ.ಎನ್.ಮಾರುತಿ ಕುಮಾರು , ಜಾನ ಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ , ವಲಯ ಮೇಲ್ವಿಚಾರಕ ವಿ.ಸುರೇಂದ್ರ , ಸಮನ್ವಯಾಧಿಕಾರಿ ಪ್ರೇಮಾ , ಒಕ್ಕೂಟದ ಅಧ್ಯಕ್ಷರಾದ ಉಮೇಶ್   ಮುಖಂಡರಾದ ಪುಟ್ಟರಾಜು , ರಂಗಸ್ವಾಮಿ , ಲಕ್ಕಣ್ಣ , ಶಿವರಾಜು  ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು