ಗುಬ್ಬಿ : ತಾಲ್ಲೂಕಿನ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂತಾಪುರ ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ರಾಜೀನಾಮೆ ಪರ್ವ ಇಂದು ಸಹ ಮುಂದು ವರಿಯಿತು ನಲ್ಲರು ಗ್ರಾಮ ಪಂಚಾಯತಿಯ ಸುಮಾರು 300 ಕ್ಕೋ ಹೆಚ್ಚು ಕಾರ್ಯ ಕರ್ತರು ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾತನಾಡಿದರು.
ವಾಸಣ್ಣ ಅಭಿಮಾನಿ ಬಳಗದ ಕೆ ಆರ್ ವೆಂಕಟೇಶ್ ಮಾತನಾಡಿ ಶಾಸಕ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ ಶಶಿ ಕಿರಣ್ ಹಾಗೂ ಹೊನ್ನಗಿರಿ ಗೌಡ ಎಷ್ಟು ಮತಗಳನ್ನು ಹಾಕಿಸಿದ್ದಾರೆ ಎಂದು ಅವರ ಬೂತ್ ಗಳನ್ನು ಒಮ್ಮೆ ನೋಡಿ ಮಾತನಾಡಲಿ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಸದಸ್ಯೆ ವಾತ್ಸಲಾ ಮಾತನಾಡಿ ಶ್ರೀನಿವಾಸ್ ಅವರು ಎಲ್ಲೇ ಯಾವ ಪಕ್ಷಕ್ಕೆ ಹೋದ್ರು ಸಹ ನಾವು ಅಲ್ಲೇ ಹೋಗುತೇವೆ ಇಲ್ಲಿರುವುದು ಸಲ್ಪ ಅವರ ಅಭಿಮಾನಿಗಳು ಮಾತ್ರ ಆದರೆ ಇಡೀ ತಾಲ್ಲೂಕಿನಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳು ಇದ್ದಾರೆ ಎಂದು ತಿಳಿಸಿದ್ರು.
ಮುಖಂಡ ಶಿವಣ್ಣ ಮಾತನಾಡಿ ಶ್ರೀನಿವಾಸ್ ಅವರು ಎಲ್ಲಾ ಸಮುದಾಯದವರ ಜೊತೆಗೆ ಇರುವ ನಾಯಕ ಅವರು ಎಲ್ಲಿ ಹೋದರು ನಾವು ಅಲ್ಲಿ ಹೋಗುತ್ತೇವೆ ಎಂದು ತಿಳಿಸಿದರು.
ಮುಖಂಡ ಕಾಂತ ರಾಜು ಮಾತನಾಡಿ ಜೆ ಡಿ ಎಸ್ ಪಕ್ಷದಲ್ಲಿ ಸಾಕಷ್ಟು ಅನ್ಯಾಯ ಮಾಡಿದ ಹಿನ್ನಲೆಯಲ್ಲಿ ನಾವು ದೊರ ಇದ್ದೇವೆ ಈ ಕಾರ್ಯಕ್ರಮ ಮಾಡುವುದಕ್ಕೆ ಕಾರಣವೇ ಜೆಡಿಎಸ್ ಪಕ್ಷ ಹಾಗೂ ಕುಮಾರ್ ಸ್ವಾಮಿ ಅವರು ಎಂದು ತಿಳಿಸಿದರು.
ಹಿರಿಯ ಮುಖಂಡ ಗುರು ರೇಣುಕಾರಾದ್ಯ ಮಾತನಾಡಿ ವಾಸಣ್ಣ ಆಗಲಿ ನಾವು ಆಗಲಿ ಇದೆ ಪಕ್ಷಕ್ಕೆ ಹೋಗುತ್ತೇವೆ ಎಂದು ಹೇಳಿಲ್ಲ ಅವರು ಮುಂದೆ ಯಾವ ನಿರ್ಧಾರ್ ಮಾಡುತ್ತಾರೆ ಅದರಂತೆ ನಾವು ನಡೆಯುತ್ತೇವೆ ಎಂದು ತಿಳಿಸಿದರು.. ಇದೆಸಂದರ್ಭದಲ್ಲಿ
ಗ್ರಾಪಂ ಅಧ್ಯಕ್ಷ ಸಿದ್ದರಾಜು, ಉಪಾಧ್ಯಕ್ಷರು ರತ್ನಮ್ಮಕುಮಾರ್ ಸದಸ್ಯರು ಗಂಗಣ್ಣ, ಬೊಮ್ಮಣ್ಣ ರಾಜಣ್ಣ, ಪುಟ್ಟಮ್ಮಾ ಲಕ್ಕಣ್ಣ, ಮಲ್ಲೇಶಪ್ಪ ಕರಿಯಮ್ಮ ಹನು ಮಂತ ಯ್ಯ ರೇಣುಕಣ್ಣ ಕಾಂತ್ ರಾಜು ಸೇರಿದಂತೆ ಇನ್ನಿತರರು ಹಾಜರಿದ್ರು.
