ಚಿಕ್ಕನಾಯಕನಹಳ್ಳಿ : ನೋಂದಣಿಯಾದ ರೈತರಿಗೆ ರಾಗಿ ತುಂಬಿ ತರಲು ಸರ್ಕಾರ ನೀಡಿರುವ ಚೀಲವನ್ನು ಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ ರೈತರು.
ಪಟ್ಟಣದ ಎಪಿಎಂಸಿ ಆವರಣದಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ 2022-23ನೇ ಸಾಲಿಗೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ 3578ರಂತೆ ಪಡೆಯುತ್ತಿರುವ ಖರೀದಿ ಕೇಂದ್ರದಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆದಿದೆ.
ಕಾರಣ ಸರ್ಕಾರದ ಸಿಲ್ ಹೊಂದಿರುವ ಖರೀದಿ ಕೇಂದ್ರದ ಚೀಲಕ್ಕೆ, ರೈತರ ಚೀಲದಿಂದ ರಾಗಿ ಬದಲಾಯಿಸಿಕೊಳ್ಳುವ ಕಾರಣ ರಾಗಿಯಲ್ಲಿನ ತೂಕ ವ್ಯತ್ಯಾಸ, ಸಮಯ ವ್ಯರ್ಥ, ಚೀಲಕ್ಕೆ ವ್ಯಸಿದ ಹಣವೂ ನಷ್ಟ, ಟ್ರ್ಯಾಕ್ಟರ್ ಮತ್ತು ಲಗೇಜ್ ವಾಹನದ ಬಾಡಿಗೆಯ ಹೊರೆ ನಮ್ಮ ಮೇಲೆ ಬೀಳುತ್ತಿದೆ ಎಂದು ರೈತ ಸಾವಶೆಟ್ಟಿಹಳ್ಳಿ ಸಿದ್ದೇಶ್ ತಿಳಿಸಿದರು.
ಈ ಖರೀದಿ ಕೇಂದ್ರಕ್ಕೆ ರಾಗಿ ಬಿಟ್ಟು ಹೋಗಲು ದಿನಗಟ್ಟಲೆ ಕಾಯುವ ಪರಿಸ್ಥಿತಿ ಉದ್ಭವಿಸಿದೆ.ಆದ್ದರಿಂದ
ರಾಗಿ ತುಂಬಿ ಖರೀದಿ ಕೇಂದ್ರಕ್ಕೆ ತರಲು ಸರ್ಕಾರದ ಸೀಲ್ ಹೊಂದಿರುವ ಚೀಲವನ್ನು ರೈತರಿಗೆ ನೇರವಾಗಿ ನೀಡಿದರೆ, ನೇರವಾಗಿ ರಾಗಿ ತಂದು ಬಿಡುತ್ತೇವೆ ಎಂದು ರೈತರುಗಳು ಒತ್ತಾಯಿಸಿದರು.
ರಾಗಿ ಖರೀದಿ ಅಧಿಕಾರಿ ಮಾತನಾಡಿ ತಾಲೂಕಿನಾದ್ಯಂತ ಸುಮಾರು 6419 ರೈತರು ನೋಂದಣಿಯಾಗಿದ್ದಾರೆ.
ದಿನಾಂಕ 23-01-23ರಿಂದ ಟೋಕನ್ ನೀಡಿದ್ದು
ದಿನಾಂಕ 31- 3 -2023 ರವರೆಗೆ ರಜಾ ದಿನ ಹೊರತುಪಡಿಸಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಗೆ ಕೆಲಸ ನಿರ್ವಹಿಸುತ್ತೇವೆ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಕರೆಗೆ ಕನಿಷ್ಠ 10 ಕ್ವಿಂಟಲ್ ನಿಂದ ಗರಿಷ್ಠ 20 ಕ್ವಿಂಟಲ್ ವರೆಗೆ ರಾಗಿ ಮಾರಾಟ ಅವಕಾಶ ವಿದ್ದು ಇಂದಿನಿಂದ ರಾಗಿ ಖರೀದಿಯನ್ನ ಮಾಡುತ್ತಿದ್ದು
ಪ್ರತಿ ದಿನಕ್ಕೆ 30 ರೈತರಿಗೆ ಟೋಕನ್ ನೀಡಿ ಕ್ರಮವಾಗಿ ರಾಗಿ ಖರೀದಿ ಮಾಡುತ್ತಿದ್ದು
ನಮ್ಮ ಅಧಿಕಾರಿಗಳಿಂದ ಪೂರ್ಣ ಒಣಗಿಸಿದ ಹಾಗೂ ಸ್ವಚ್ಛಗೊಳಿಸಿದ ಉತ್ತಮ ಗುಣಮಟ್ಟದ ರಾಗಿಯನ್ನ ಗ್ರೇಡರ್ ಗಳಿಂದ ತೂಕ ಮಾಡಿ ದೃಢೀಕರಿಸಿ ರಾಗಿ ಕೊಳ್ಳುತ್ತಿದ್ದೇವೆ.
ಜಿಲ್ಲೆಯಲ್ಲಿ ಎಲ್ಲಿಯೂ ರಾಗಿ ಚೀಲ ತುಂಬಿ ತರಲು ಮನೆಗೆ ರೈತರಿಗೆ ಚೀಲ ಕೊಡಲು ಆದೇಶವಿಲ್ಲ, ಸರ್ಕಾರ ಆದೇಶ ಮಾಡಿದರೆ ಕೊಡುತ್ತೇವೆ ಎಂದು ತಿಳಿಸಿದ ರಾಗಿ ಖರೀದಿ ಅಧಿಕಾರಿ ನಂಜಪ್ಪ.
ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಬಿಟ್ಟ ರೈತರಿಗೆ ತೂಕ ಹಾಗೂ ಹೆಸರಿನ ಗ್ರೈನ್ ವೋಚರ್ ನೀಡಲು ಸರ್ವರ್ ಸಮಸ್ಯೆಯಿಂದ ಲಾಗಿನ್ ಐಡಿ ಓಪನ್ ಆಗದೆ ಬೆಳಗಿನಿಂದ ಕಾದು ಕುಳಿತ ಹೈರಾಣಾದ ರೈತರು.
ಜೆ. ಸಿ. ಪುರ ರೈತ ಪೂರ್ಣ ಮಾತನಾಡಿ ನೇರವಾಗಿ ಸರ್ಕಾರವೇ ನೊಂದಣಿಯಾದ ರೈತರುಗಳಿಗೆ ಚೀಲಕ್ಕೆ ಹಣ ಕಟ್ಟಿಸಿ ಕೊಂಡು ನೀಡಿದರೇ, ಸಮಯ ಉಳಿಯುತ್ತೆ ಇಲ್ಲವಾದರೆ ದಿನವೆಲ್ಲ ಕಾಯುವ ಪರಿಸ್ಥಿತಿ ಉಂಟಾಗುತ್ತೆ ಇತ್ತ ಕಡೆ ಜಿಲ್ಲಾಧಿಕಾರಿ ಗಮನವಹಿಸಿ ಸಮಸ್ಯೆ ಬಗೆಹರಿಸಿ ಎಂದರು.



