ಕರ್ನಾಟಕದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಕನ್ನಡ ಮಾಯ.

 ಪಾವಗಡ: ಕೆನರಾ ಬ್ಯಾಂಕ್ ನಲ್ಲಿ ಕನ್ನಡ ಭಾಷೆಯ ನಿರ್ಲಕ್ಷ್ಯ


 

ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ನಲ್ಲಿ ಕನ್ನಡ ಭಾಷೆಯ ಚಲನ್ ಗಳು ಸಿಗುತ್ತಿಲ್ಲ ತೆಲುಗು ಮಿಶ್ರಿತ ಇಂಗ್ಲಿಷ್ ಹಿಂದಿ ಚಲನ್ ಗಳನ್ನು ಬ್ಯಾಂಕ್ ಸಿಬ್ಬಂದಿ ನೀಡುತ್ತಿದ್ದಾರೆ ತಮ್ಮ ಖಾತೆಗೆ ಹಣ ಕಟ್ಟಲು ಚಲನ್ ಕೇಳಿದರೆ ಪರ ಭಾಷೆಯ ಚಲನ್ ಗಳು ಸಿಗುತ್ತಿವೆ.

ಪಾವಗಡ ತಾಲ್ಲೂಕು ಕರ್ನಾಟಕ ರಾಜ್ಯ , ತುಮಕೂರು ಜಿಲ್ಲೆಗೊಳಪಟ್ಟಿದ್ದರೂ ಸಹ ಕೆನರಾ ಬ್ಯಾಂಕ್ ನಲ್ಲಿ ಅಡಳಿತ ಭಾಷೆ ತೆಲುಗು ಆಗಿದೆ ತೆಲುಗು, ಇಂಗ್ಲಿಷ್ ಬಾರದ ಗ್ರಾಹಕರು ಕೆನಾರಾ ಬ್ಯಾಂಕ್ ಗೆ ಹೋದರೆ ಪೇಚುಮೊರೆ ಹಾಕಿಕೊಂಡು ಹಿಂತಿರುಗುವುದು ಗ್ಯಾರಂಟಿ ರಶೀದಿ ಚಲನ್ ಗಳು ಎಲ್ಲವೂ ತೆಲುಗುಮಯ.



ಈ ಸಂಬಂಧ ಶಾಖೆಯ ವ್ಯವಸ್ಥಾಪಕರನ್ನು ಕೇಳಿದರೆ ಪ್ರತಿಕ್ರಿಯೆ ನೀಡಲೂ ನಯವಾಗಿ ತಿರಸ್ಕರಿಸಿರುತ್ತಾರೆ ಗಡಿನಾಡು ಪಾವಗಡದಲ್ಲಿ ಬಹುತೇಕ ಹಲವು ಬ್ಯಾಂಕ್ ಗಳಲ್ಲಿ ಆಂದ್ರ ಮೂಲದ ಸಿಬ್ಬಂದಿ ಕೆಲಸ ಮಾಡುತ್ತಿದ್ದು ಇವರಿಗೆ ಕನ್ನಡ ಭಾಷೆಯ ಗಂಧ ಗಾಳಿಯೂ ಗೊತ್ತಿಲ್ಲ ಇದರಿಂದಾಗಿ ಬ್ಯಾಂಕ್ ಸಿಬ್ಬಂದಿ ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಅಪಚಾರ ಎಸಗುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.


ವರದಿ : ಪಾವಗಡ ಶ್ರೀನಾಥ್.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು