ಬಾಳಿ ಬದುಕಬೇಕಿದ್ದ ಮೂವರು ಸಹೋದರಿಯರು ಒಂಟಿ ಮನೆಯಲ್ಲಿ ದುರಂತ ಅಂತ್ಯ


  ಚಿಕ್ಕನಾಯಕನಹಳ್ಳಿ : ತಾಲೂಕಿನ ಹುಳಿಯರು ಹೋಬಳಿ ಬರಕನಾಳು ಲಂಬಾಣಿ ತಾಂಡ್ಯ ಗ್ರಾಮದಲ್ಲಿ ಒಂದೇ ಕುಟುಂಬದ ಮೂರು ಜನ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣು. 


ರಂಜಿತಾ ಬಿನ್ ಲೇಟ್ ಜಯಾನಾಯ್ಕ 22 ವರ್ಷ, ಬಿಂದು ಬಿನ್ ಲೇಟ್ ಜಯಾನಾಯ್ಕ 20 ವರ್ಷಷ,ಚಂದನ ಬಿನ್ ಲೇಟ್ ಜಯಾನಾಯ್ಕ 18 ವರ್ಷ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.


ಮೃತ ಹೆಣ್ಣುಮಕ್ಕಳ ತಂದೆ ತಾಯಿ ತೀರಿಕೊಂಡು ಸುಮಾರು 10-12 ವರ್ಷಗಳಾಗಿದ್ದು, ಅವರ ಅಜ್ಜಿ ಚಂದ್ರಿಬಾಯಿ ರವರ ಆಶ್ರಯದಲ್ಲಿ ಬೆಳೆದು,ವಿದ್ಯಾಭ್ಯಾಸ ಮಾಡಿ ಸ್ವಂತ ತಮ್ಮ ಕಾಲ ಮೇಲೆ ನಿಂತು ಕೊಂಡು ರಂಜಿತಾ ಮತ್ತು ಬಿಂದು ಇಬ್ಬರೂ ಕೆ ಬಿ ಕ್ರಾಸ್ ಬಳಿಯ ರಾಜತಾದ್ರಿಪುರ ಮ್ಯಾಫ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾ ಸ್ವಂತ ಸೂರು ಕಟ್ಟಿ ಕೊಂಡಿದ್ದು ತಂಗಿ ಚಂದನ ದ್ವಿತೀಯ ಪಿಯುಸಿ ಮುಗಿಸಿದ್ದು ನರ್ಸಿಂಗ್ ವಿದ್ಯಾಭ್ಯಾಸಕ್ಕೆ ಪ್ರಯತ್ನ ಹಾಗೂ ಮೊದಲ, ಎರಡನೇ ಯವರಿಗೆ ನಿಶ್ಚತಾರ್ಥ ಆಗುವ ಸಂಬಂಧ ಏರ್ಪಡಿಸಲಾಗಿತ್ತು ಎಂದು ಸಂಬಂಧಿಕರುಗಳಿಂದ ತಿಳಿದು ಬಂದಿದೆ.


ಹೆಣ್ಣುಮಕ್ಕಳ ಆಶ್ರಯದಾತೆಯಾಗಿದ್ದ ಅಜ್ಜಿ ಒಂದು ತಿಂಗಳ ಹಿಂದೆ ಸಾವನ್ನಪ್ಪಿದ್ದರು ಮಕ್ಕಳಲ್ಲಿ ಅನಾಥ, ಒಂಟಿ ಭಾವನೆ, ನೋವಲ್ಲಿ ಮನನೊಂದು ಒಂದು ವಾರದ ಹಿಂದೆಯೇ ಸಹೋದರಿಯರು ನೇಣಿಗೆ ಕೊರಳೋಡ್ಡಿ ಅಂತ್ಯ ಕಂಡಿದ್ದಾರೆ.

ಬದಿಯಾನಾಯ್ಕ್ ಮಾತನಾಡಿ ಹೆಣ್ಣು ಮಕ್ಕಳ ಬಗ್ಗೆ ಸಂಬಂಧಿಕರ ಮನೆಯಲ್ಲಿ ವಿಚಾರಿಸಿ ಇಲ್ಲದಾಗ ಫೋನ್ ಕರೆ ಸ್ವೀಕರಿಸದ ಕಾರಣ ಗ್ರಾಮಸ್ಥರು ಸಂಬಂಧಿಕರುಗಳು ಅನುಮಾನ ಬಂದು ಬಾಲದೇವರಹಟ್ಟಿಯಿಂದ ಬರಕನಾಳ್ ತಾಂಡ್ಯ ಕ್ಕೆ ಹೋಗುವ ರಸ್ತೆ ಬದಿಯ ಒಂಟಿ ಮನೆಯಲ್ಲಿ ಮನೆಯ ಕಿಟಕಿ ತೆಗೆದ ಸಂದರ್ಭದಲ್ಲಿ ವಾಸನೆ ಮತ್ತೆ ನೊಣಗಳು ಬಂದ ಕಾರಣ ಮನೆಯ ಹೆಂಚು ತೆಗೆದು ನೋಡಿದಾಗ ಮೂವರು ನೇಣಿಗೆ ಶರಣಾಗಿರುವುದು ಕಂಡುಬಂದಿದೆ.


 ಘಟನಾ ಸ್ಥಳಕ್ಕೆ ತಿಪಟೂರು ಡಿವೈಎಸ್ಪಿ ಸಿದ್ದಾರ್ಥ್ ಗೊಯಲ್, ಚಿಕ್ಕನಾಯಕನಹಳ್ಳಿ ಸಿಪಿಐ ನಿರ್ಮಲಾ , ಹುಳಿಯಾರು ಪಿ ಎಸ್ ಐ ಮೂರ್ತಿ ರವರು ಭೇಟಿ ನೀಡಿ ಗ್ರಾಮಸ್ಥರುಗಳ ಸಮ್ಮುಖದಲ್ಲಿ ಮನೆಯೊಳಗೇ ನೇಣಿಗೆ ಶರಣಾಗಿ ದ್ದ ಮೃತ ದೇಹ ಇಳಿಸಿ ಚಿಕ್ಕನಾಯಕನಹಳ್ಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಶವ ಪರೀಕ್ಷೆ ನಡೆಸಿ ಸಂಬಂಧಿಕರುಗಳಿಗೆ ಮೃತ ದೇಹ ಒಪ್ಪಿಸಿದ್ದು.


ಈ ಸಂಬಂಧ ಮೃತರ ಅಜ್ಜ ರೇವಣ್ಣ ನಾಯ್ಕ ಹುಳಿಯಾರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದ್ದು.ಮುಂದಿನ ತನಿಖೆ ಮುಂದುವರಿದಿದೆ.


ವರದಿ : ಚಿಕ್ಕನಾಯಕನಹಳ್ಳಿ, ಚಂದ್ರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು