ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯ ಎ.ಎನ್.ಆರ್. ಕಲ್ಯಾಣ ಮಂಟಪದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶನ ಶಿಬಿರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣಕ್ಕೆ ಸರ್ವಸ್ವವನ್ನು ನೀಡುವ ಶಕ್ತಿಯಿದೆ ಎಂದರು.
ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಜತೆಗೆ ಕಠಿಣ ಅಭ್ಯಾಸ ಶಿಕ್ಷಣ ಪಡೆದುಕೊಂಡಾಗ ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ ಇಂತಹ ಶಿಬಿರಗಳು ತಾಲ್ಲೂಕಿನಲ್ಲಿ ಅತ್ಯಾವಶ್ಯಕವಾಗಿವೆ. ಗ್ರಾಮೀಣಾ ಭಾಗದ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ. ಆದರೆ ಸಂಕೋಚ ಪಡುತ್ತಾರೆ. ಇಂದಿನ ಶಿಬಿರದಲ್ಲಿ ಯಾವುದೆ ಸಂಶಯ ಇದ್ದರೂ ಧೈರ್ಯವಾಗಿ ನಿವಾರಣೆ ಮಾಡಿಕೊಂಡು ಪರಿಹಾರ ಕಂಡು ಕೊಳ್ಳಿ ಎಂದರು.
ಗುರಿ ಮತ್ತು ಛಲವಿದ್ದರೆ ಏನುಬೇಕಾದರೂ ಸಾಧನೆ ಮಾಡಬಹುದು ಇದಕ್ಕೆ ಸಹಕಾರ ಅಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ. ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಜೀವನದ ನಿರ್ಣಾಯಕ ಘಟ್ಟವಾಗಿರುವ ಕಾರಣ ವಿದ್ಯಾರ್ಥಿಗಳು ಬಹಳ ಜಾಗ್ರಹತೆವಹಿಸಬೇಕು.
ಈ ಸಂದರ್ಭದಲ್ಲಿ ಆಯೋಜಕರಾದ ಚಾಣುಕ್ಯ, ಮೋಹನ್, ಚಂದ್ರು, ಶ್ರೀನಿವಾಸ್, ಶಶಿಕುಮಾರ್, ಕಿಶೋರ್, ಉಮೇಶ್, ರಾಕೇಶ್, ರಂಗನಾಥ್, ಜಯರಾಮ್ ಪ್ರಾಂಶುಪಾಲ ರಂಗಪ್ಪ, ಉಪನ್ಯಾಸಕರಾದ ಎ. ರಾಮಚಂದ್ರಪ್ಪ, ಮಹಾಲಿಂಗೇಶ್, ಮುಖ್ಯಶಿಕ್ಷಕರಾದ ಪ್ರಕಾಶ್, ಸದಾಶಿವರೆಡ್ಡಿ, ರಂಗಧಾಮಯ್ಯ, ಸಚ್ಚಿದಾನಂದ, ರಂಗಧಾಮಯ್ಯ ನರಸಪ್ಪ ಇದ್ದರು.
ವರದಿ : ಮಧುಗಿರಿ ಬಾಲು ಪಣಿಂದ್ರ.
