ನಮ್ಮ ಗ್ರಾಮ ನಮ್ಮ ಕರ್ತವ್ಯಕ್ಕೆ ಆದ್ಯತೆ : ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಣದ ರಂಗಯ್ಯ.

 


ಮಧುಗಿರಿ : ಗ್ರಾ.ಪಂ. ಸದಸ್ಯರಾದ ನಮಗೆ ನಮ್ಮ ಕರ್ತವ್ಯದ ಅರಿವಿರಬೇಕಿದ್ದು ನಮ್ಮ ಗ್ರಾಮ ನಮ್ಮ ಕರ್ತವ್ಯ ಎಂಬ ಯೋಜನೆಗೆ ಮುಂದಾಗುತ್ತೇನೆ ಎಂದು ಡಿವಿಹಳ್ಳಿ ಗ್ರಾ.ಪಂ.ನ ನೂತನ ಅಧ್ಯಕ್ಷ ಬಾಣದ ರಂಗಯ್ಯ ತಿಳಿಸಿದರು.


ತಾಲೂಕಿನ ಕಸಬಾ ಹೋಬಳಿಯ ಡಿವಿಹಳ್ಳಿ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ನಾನು ಸದಸ್ಯನಾಗಿದ್ದಾಗಲೇ ನಮ್ಮ ಗ್ರಾಮ ನಮ್ಮ ಸ್ವಚ್ಛತೆ ಎಂಬ ಘೋಷಣೆಯೊಂದಿಗೆ ನಾನೇ ಚರಂಡಿ ಸ್ವಚ್ಛಗೊಳಿಸಿದ್ದೆ. ಇಂದು 8 ತಿಂಗಳಿಗೆ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ನಮ್ಮ ಗ್ರಾಮ ನಮ್ಮ ಸ್ವಚ್ಛತೆ, ನಮ್ಮ ಗ್ರಾಮ ನಮ್ಮ ಆರೋಗ್ಯ, ನಮ್ಮ ಗ್ರಾಮ ನಮ್ಮ ಪರಿಸರ, 

ನಮ್ಮ ಗ್ರಾಮ ನಮ್ಮ ಕಾನೂನು ಎಂಬಂತೆ ಎಲ್ಲ ಗ್ರಾಮಗಳಲ್ಲೂ ಕೆಲಸ ಮಾಡಲು ಯೋಜನೆ ಸಿದ್ಧಗೊಂಡಿದೆ. ಎಲ್ಲ ಸದಸ್ಯರ ನೆರವಿನೊಂದಿಗೆ ಈ ಕಾರ್ಯಕ್ರಮಗಳ ಅನುಷ್ಟಾನಗೊಳಿಸುವ ಭರವಸೆಯಿದ್ದು, ನನ್ನ ಆಯ್ಕೆಗೆ ಸಹಕಾರ ನೀಡಿದ ಎಲ್ಲ ಸದಸ್ಯರಿಗೂ ಹಾಗೂ ಮುಖಂಡರಿಗೂ ಧನ್ಯವಾದಗಳನ್ನು ತಿಳಿಸುವುದಾಗಿ ತಿಳಿಸಿದರು. 


 ತಹಶೀಲ್ದಾರ್ ಸುರೇಶಾಚಾರ್, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಶಿವಕುಮಾರ್ ಹಾಗೂ ಸದಸ್ಯರು ಹಾಜರಿದ್ದರು ಇದ್ದರು.



ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು