ಶ್ರೀ ಗಾಳಿ ಅಂಜನೇಯಸ್ವಾಮಿ ಸೇವಾ ಸಮಿತಿಯಿಂದ 10 ನೇ ವರ್ಷದ ವಾರ್ಷಿಕೋತ್ಸವ.

 ಮಧುಗಿರಿ : ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಹಳೇತಿಮ್ಮನಹಳ್ಳಿ ಗ್ರಾಮದ ಶ್ರೀ ಗಾಳಿ ಅಂಜನೇಯಸ್ವಾಮಿ ಸೇವಾ ಸಮಿತಿಯಿಂದ 10 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆ.16 ನೇ ಗುರುವಾರದಂದು ಬೆಳಿಗ್ಗೆ 9.30 ರಿಂದ 10.30 ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀ ಶ್ರೀ ಶ್ರೀ ಡಾ. ಹನುಮಂತನಾಥಸ್ವಾಮೀಜಿ, ಶ್ರೀ ಸ್ವಾಮಿ ರಾಮಾನಂದರವರ ದಿವ್ಯ ಸಾನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಲಾಗಿದ್ದು, ಆಸಕ್ತರು ದಿನಾಂಕ ಜ.31 ರೊಳಗೆ ನೋಂದಾಯಿಸಕೊಳ್ಳಬಹುದಾಗಿದೆ ಎಂದು ಸಮಿತಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನೋಂದಣೆ ಮಾಡುವವರು ವಯಸ್ಸಿನ ದೃಢೀಕರಣ ಪತ್ರ (ಶಾಲಾ ದಾಖಲಾತಿ) ವಧುವಿಗೆ 18, ವರನಿಗೆ 21 ವರ್ಷ ವಯಸ್ಸಾಗಿರಬೇಕು, ಆಧಾರ್ ಕಾರ್ಡ್, ವೋಟರ್ ಐಡಿ, ಇತ್ತೀಚಿನ 1 ಫೋಟೋ, 501 ರೂ. ನಗದು ಕೊಟ್ಟು ಹೆಸರನ್ನು ನೊಂದಾಯಿಸತಕ್ಕದ್ದು. ಜ.31 ರೊಳಗೆ ವಧು ವರರ ಹೆಸರುಗಳನ್ನು ನೊಂದಾಯಿಸತಕ್ಕದ್ದು, ಎರಡನೇ ವಿವಾಹಕ್ಕೆ ಆಧ್ಯತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.  

ದೇವಸ್ಥಾನದ ಸಮಿತಿಯ ವತಿಯಿಂದ ಒಂದು ಜೋಡಿಗೆ ಮಾಂಗಲ್ಯ, ಹೆಣ್ಣಿಗೆ ಜೊತೆ ವಸ್ತ್ರ ಗಂಡಿಗೆ ಒಂದು ಜೊತೆ ವಸ್ತ್ರ ಉಚಿತವಾಗಿ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹೆಚ್.ಶಿವಕುಮಾರ್-9342605949, ಹೆಚ್.ಎ. ಗಂಗಪ್ಪ-9972205047 ಸಂಪರ್ಕಿಸಲು ಶ್ರೀ ಅಂಜನೇಯಸ್ವಾಮಿ ಸೇವಾ ಸಮಿತಿ ಕೋರಿದೆ.


ವರದಿ : ಮಧುಗಿರಿ ಬಾಲುಪಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು