ಮಧುಗಿರಿ : ಪಟ್ಟಣದ ಪುರಸಭಾ ಆವರಣದಲ್ಲಿರುವ ಪಾರ್ಕ್‌ನಲ್ಲಿ ರೋಡ್ ರೋಮಿಯೋಗಳಿಗೆ ವಿದ್ಯಾರ್ಥಿನಿಯರು ಚಪ್ಪಲಿ ಸೇವೆ ಮಾಡಿ ಥಳಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಪಟ್ಟಣದ ಗೌತಮ್ ಬುದ್ಧ ಕಾಲೇಜಿನ ವಿದ್ಯಾರ್ಥಿನಿಯರು ವಡೇರಹಳ್ಳಿ ಗ್ರಾಮದ ಯುವಕರಿಬ್ಬರಿಗೆ ತಕ್ಕ ಶಾಸ್ತಿ ಮಾಡಿದ್ದಾರೆ. ಯುವಕರು ಪ್ರತಿನಿತ್ಯ ವಿದ್ಯಾರ್ಥಿನಿಯರಿಗೆ ಕೆಟ್ಟ ಸಂದೇಶಗಳನ್ನು ಕಳಿಸುವುದರ ಜೊತೆಗೆ ಪ್ರೇಮಿಸುವಂತೆ ಪೀಡಿಸಿದ್ದಾರೆ.
ವಿದ್ಯಾರ್ಥಿನಿಯರು ಈ ವಿಷಯವನ್ನು ಅವರ ಸಹೋದರರಿಗೆ ತಿಳಿಸಿದಾಗ,ಕಾಲೇಜಿನ ಅವಧಿ ಮುಗಿದ ನಂತರ ಟೌನ್ ಹಾಲ್ ರಸ್ತೆಯಲ್ಲಿ ನಡೆದು ಬರುತ್ತಿದ್ದಾಗ ವಿದ್ಯಾರ್ಥಿನಿಯರು ಬುದ್ಧಿವಂತಿಕೆ ಉಪಯೋಗಿಸಿ ಯುವಕರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆಗ ಪುರಸಭೆಯ ಆವರಣದಲ್ಲಿರುವ ಪಾರ್ಕ್ ನಲ್ಲಿ ಇದ್ದೇವೆ ಎಂದು ಯುವಕರು
ತಿಳಿಸಿದ್ದಾರೆ. ವಿದ್ಯಾರ್ಥಿನಿಯರ ಸಹೋದರರು ಯುವಕ ರನ್ನು ಭೇಟಿ ಮಾಡಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವ ಬಗ್ಗೆ ತಿಳಿದುಕೊಂಡಿದ್ದಾರೆ. ಕೇವಲ ಮೊಬೈಲ್ ನಲ್ಲೇ ಇವರ ಮಾತುಕತೆಗಳು ನಡೆಯುತ್ತಿದ್ದು ಮುಖತವಾಗಿ ಒಬ್ಬರನ್ನೊಬ್ಬರು ಯಾರು ನೋಡಿರಲಿಲ್ಲ. ವಿದ್ಯಾರ್ಥಿನಿಯರನ್ನು ಇವರೇ ಚುಡಾಯಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡ ಥಳಿಸಿದ್ದಾರೆ. ನಂತರ ಸಹೋದರರು
ಐದು ವಿದ್ಯಾರ್ಥಿನಿಯರು ಒಗ್ಗೂಡಿ ಚುಡಾಯಿ ಸುತ್ತಿದ್ದ ವಿದ್ಯಾರ್ಥಿಗಳಿಗೆ ಚಪ್ಪಲಿ ಸೇವೆ ಮಾಡಿದ್ದಾರೆ. ಆಗ ಜನಜಂಗುಳಿ ಹೆಚ್ಚಾಗಿದೆ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಯುವಕರನ್ನು ಠಾಣೆಗೆ ಕರೆದುಕೊಂಡು ಹೋದರು. ವಿದ್ಯಾರ್ಥಿನಿಯರು ನೀಡಿದ ದೂರಿನನ್ವಯ ಮಧುಗಿರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವರದಿ : ಮದುಗಿರಿ ಬಾಲು ಪಣಿಂದ್ರ.
