ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಾರಂಭಿಸಿದ್ದು ಸದ್ಬಳಕೆ ಮಾಡಿಕೊಳ್ಳಿ : ಸಚಿವ ಜೆಸಿ ಮಾಧುಸ್ವಾಮಿ.

 ಚಿಕ್ಕನಾಯಕನಹಳ್ಳಿ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಾರಂಭಿಸಿದ್ದು ಸದ್ಬಳಕೆ ಮಾಡಿಕೊಳ್ಳಿ ಎಂದು ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದರು.



 ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ 2022-23ನೇ ಸಾಲಿಗೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರ ರಾಗಿ ಖರೀದಿಸಲು ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿ ಖರೀದಿ ಕೇಂದ್ರಕ್ಕೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಮೂಲಕ ಖರೀದಿ ಕೇಂದ್ರಗಳಲ್ಲಿ ಅಗ್ರಿಕಲ್ಚರ್ ಇಲಾಖೆ ಸಿಬ್ಬಂದಿ ಮತ್ತು ಖರೀದಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ನೇರವಾಗಿ ರಾಗಿ ಬೆಳೆದ ರೈತರುಗಳು ದಲ್ಲಾಳಿಗಳಿಗೆ ಒಳಗಾಗದೆ ರೈತ ಸಂಪರ್ಕ ಕೇಂದ್ರದಲ್ಲಿ ತಮ್ಮ ಹೆಸರು ಫ್ರೂಟ್ ಐಡಿ ಸಂಖ್ಯೆ ನೊಂದಣಿ ಮಾಡಿಸಿ ತಮ್ಮ ರಾಗಿ ಖರೀದಿ ದಿನಾಂಕದಂದು ಕೇಂದ್ರಕ್ಕೆ ತರಬೇಕೆಂದು ರೈತರುಗಳಿಗೆ ತಿಳಿಸಿದರು.


  ಆಹಾರ ನಿಗಮದ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ 11ರಾಗಿ ಖರೀದಿ ಕೇಂದ್ರ ಪ್ರಾರಂಭಮಾಡಿದ್ದು ಪೂರ್ಣ ಒಣಗಿಸಿದ ಹಾಗೂ ಸ್ವಚ್ಛಗೊಳಿಸಿದ ಉತ್ತಮ ಗುಣಮಟ್ಟದ ರಾಗಿ ಮಾತ್ರ ಸ್ವೀಕಾರಮಾಡಲಾಗುವುದು.ಗ್ರೇಡರ್ ಗಳಿಂದ ದೃಢೀಕರಿಸಿ ರಾಗಿ ಕಳಪೆ ಗುಣಮಟ್ಟದಿಂದ ಕೂಡಿದರೆ ತಿರಸ್ಕರಿಸುವುದು. ಕೃಷಿ ಇಲಾಖೆಯ ರೈತರ ಫ್ರೂಟ್ ಗುರುತಿನ ಚೀಟಿ ಸಂಖ್ಯೆ ಕಡ್ಡಾಯ.ಪ್ರತಿ ಕ್ವಿಂಟಾಲ್ ಗೆ ಬೆಂಬಲ ಬೆಲೆಯಾಗಿ 3578ರಂತೆ ಖರೀದಿ ಅಧಿಕಾರಿಯಿಂದ ಕಡ್ಡಾಯವಾಗಿ ರೈತರು ಗ್ರೀನ್ ಓಚರ್ ಪಡೆಯುವುದು.ಕಡ್ಡಾಯವಾಗಿ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ, NPCI ಸೀಡಿಂಗ್ ಆಕ್ಟಿವ್ ಮಾಡಿಸಿ.ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಎಕರೆಗೆ ಕನಿಷ್ಠ 10 ಕ್ವಿಂಟಲ್ ನಿಂದ ಗರಿಷ್ಠ 20 ಕ್ವಿಂಟಲ್ ವರೆಗೆ ರಾಗಿ ಖರೀದಿ ದಿನಾಂಕ 31- 3 -2023 ರವರೆಗೆ ರಜಾ ದಿನ ಹೊರತುಪಡಿಸಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಗೆ ಕೆಲಸ ನಿರ್ವಹಿಸುವುದು ಎಂದು ತಿಳಿಸಿದರು.


 ಜಿಲ್ಲೆಯಾದ್ಯಂತ 58681 ಜನ ಈಗಾಗಲೇ ನೋಂದಣಿಯಾಗಿದ್ದು, 8 ಲಕ್ಷದ 54, ಸಾವಿರ 460 ಕ್ವಿಂಟಲ್ ಖರೀದಿಗೆ ನೊಂದಣಿಯಾಗಿ ಚಾಲ್ತಿಯಲ್ಲಿರುತ್ತದೆ.ರೈತರಿಗೆ ರಾಗಿ ಮಾರಾಟದ ಮೊತ್ತವನ್ನು ಫ್ರೂಟ್ ತಂತ್ರಾಂಶದ ಡೆಬಿಟ್ ನೇರವಾಗಿ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು ಇದಕ್ಕಾಗಿ ರೈತರು ಕೃಷಿ ಇಲಾಖೆಯಿಂದ ಫ್ರೂಟ್ಸ್ ಐಡಿ ಪಡೆದು ರಾಗಿ ಖರೀದಿ ಕೇಂದ್ರದಲ್ಲಿ ತಮ್ಮ ಹೆಸರು ನೋಂದಾಯಿಸಬೇಕು ಎಂದು ನಿಗಮ ತಿಳಿಸಿದೆ. ಸದ್ಯಕ್ಕೆ ಸರ್ಕಾರ ಚೀಲಗಳನ್ನು ಸರಬರಾಜು ಮಾಡಿಲ್ಲ. ಚೀಲಗಳು ಬಂದ ಕೂಡಲೇ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಎಪಿಎಂಸಿ ಖರೀದಿ ಅಧಿಕಾರಿ ನಂಜಪ್ಪ ತಿಳಿಸಿದರು.


 ಇದೇ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಶ್ರೀಧರ್, ರಾಗಿ ಖರೀದಿ ಕೇಂದ್ರದ ಅಧಿಕಾರಿ ನಂಜಪ್ಪ, ಉಪ ತಹಶೀಲ್ದಾರ್, ಕೃಷಿ ಇಲಾಖೆ ಅಧಿಕಾರಿಗಳು ಸೇರಿದಂತೆ ರೈತರುಗಳು ಭಾಗಿಯಾಗಿದ್ದರು.



ವರದಿ: ಚಿಕ್ಕನಾಯಕನಹಳ್ಳಿ ಚಂದ್ರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು