ಚಿಕ್ಕನಾಯಕನಹಳ್ಳಿ : ಹಲವು ಗೋಷ್ಠಿಗಳ ವಿಷಯ ಚರ್ಚೆ,ಪದಗಳು ನಿಘಂಟಿಗೆ ಸೇರಬೇಕಾದ ಸಮ್ಮೇಳನ ಹಿರಿಯ ಸಾಹಿತಿ ರಾಜಪ್ಪ ದಳವಾಯಿ.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಎರಡು ದಿನಗಳ ಕಾಲ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಮಾರೋಪ ಸಮಾರಂಭದಲ್ಲಿ ಕಾರ್ಯಕ್ರಮದ ಪೂರ್ಣ ಅವಲೋಕನ ದಲ್ಲಿ ಭಾಗವಹಿಸಿ ವಿಶೇಷ ಚರ್ಚಾಗೋಷ್ಠಿಗಳಾದ ಸಾಮರಸ್ಯದ ನೆಲೆಗಳು, ಮಹಿಳಾ -ಸಂವೇದನೆ, ಕಾವ್ಯ- ಚಿಂತನೆ- ವಾಚನ , ಕೃಷಿ- ಮಾರುಕಟ್ಟೆ, ರೈತ- ದಲಿತ ಚಳುವಳಿ, ಚರ್ಚೆ ತಾಲೂಕಿನ ಶೈಕ್ಷಣಿಕ ಬೆಳವಣಿಗೆ, ಹಾಗೂ ಸಮ್ಮೇಳನಾಧ್ಯಕ್ಷರ ಜೊತೆಯ ಸಂವಾದಗಳು ಜಗತ್ತಿನ , ಕಣ್ಣನ್ನ ತೆರೆಸುವ ತಿಳಿಯುವ ಸಮ್ಮೇಳವಾಗಿದೆ ಎಂದು ರಾಜ್ಯದ ಹಿರಿಯ ಸಾಹಿತಿ ರಾಜಪ್ಪ ದಳವಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಮರಸ್ಯದ ವಿಷಯ ಚರ್ಚೆ ಬಹಳ ಮುಖ್ಯ, ಅನೇಕ ಸಾಹಿತಿಗಳು ಬರಹಗಾರರು ಬರೆದಿರುವ, ವೇದಿಕೆಯಲ್ಲಿ ಹಾಡಿರುವ ಮಾತು, ಸ್ಥಳೀಯ ಚರಿತ್ರೆ ಜನ ವಿಷಯಗಳನ್ನು ಕೇಳೋದು ಮುಖ್ಯ, ಅನೇಕ ವಿಷಯಗಳ ಚರ್ಚೆ ಇಟ್ಟು ಜನರನ್ನು ಸಹಬಾಳ್ವೆಯಿಂದ ಬದುಕಿ ಎಂದು ಹೇಳುವ ಜನ ಸಾಹಿತ್ಯದ ಪಾಠದ ಸಮ್ಮೇಳನವಾಗಿದೆ ಎಂದರು
ಹಲವು ಕೃತಿಗಳನ್ನು ಬಿಡುಗಡೆ ಮಾಡಿದ ಮಾಜಿ ಶಾಸಕ ಸಿ ಬಿ ಸುರೇಶ್ ಬಾಬು ಮಾತನಾಡಿ
ಸಮ್ಮೇಳನಗಳಲ್ಲಿ ಮಂಡಣೆಯಾಗುವ ವಿಷಯಗಳನ್ನು ಕಾರ್ಯರೂಪಕ್ಕೆ ತರಲು ನಮ್ಮ ಸಹಕಾರವಿರುತದೆ ಎಂದು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ೧೦ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿ ತಾಲ್ಲೂಕಿನ ಪ್ರೇಕ್ಷಣಿಯ ಸ್ಥಳಗಳನ್ನು ಗುರುತಿಸಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಬಯಕೆಯೂ ಇದೆ ಎಂದ ಅವರು, ನಿಷ್ಪಕ್ಷಪಾತದಿಂದ ಕನ್ನಡ ಕಟ್ಟುವ ಕೆಲಸ ಆಗಬೇಕು. ನಾಡಿನ ಎಲ್ಲರೂ ಕನ್ನಡ, ಕನ್ನಡ ಸಂಸ್ಕೃತಿ ಉಳಿಸಿಕೊಂಡು ಹೋಗಲು ಪ್ರಯತ್ನಿಸೋಣ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಸಾಹಿತ್ಯ ಪರಿಷತ್ತನ್ನು ಜನ ಪರಿಷತ್ತನ್ನಾಗಿ ರೂಪಿಸುವ ಕಡೆ ಹೆಜ್ಜೆ ಇಡಬೇಕಾಗಿದೆ ಎಂದರಲ್ಲದೆ, ತಿಮ್ಮನಹಳ್ಳಿ ನನ್ನ ಜನ್ಮಭೂಮಿಯಾದರೂ, ಶಿರಾ ಕರ್ಮಭೂಮಿಯಾಗಿತ್ತು. ಚಿಕ್ಕನಾಯಕನಹಳ್ಳಿ ತಾಲೂಕಿನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದ ಗೌರವ ನೀಡಿ ಇಷ್ಟೊಂದು ವಾತ್ಸಲ್ಯ ತೋರಸಿದ್ದೀರಿ. ಈಗ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಮ್ಮೇಳನದಲ್ಲಿ ಚರ್ಚೆಗೆ ಗ್ರಾಸವಾದ ತಾಲೂಕು ಎದುರಿಸುತ್ತಿರುವ ಕೊರತೆಗಳನ್ನು ಪರಿಷತ್ತಿನ ಮುಖೇನವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡೋಣ ಎಂದರು.
ಹಿರಿಯ ಸಾಹಿತಿ ಎಂ.ವಿ. ನಾಗರಾಜರಾವ್ ಮಾತನಾಡಿ, ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಹೋಬಳಿ ಮಟ್ಟದಲ್ಲೂ ಸಮ್ಮೇಳನಗಳನ್ನು ನಡೆಸಲಾಗಿದೆ. ರಾಜ್ಯದಲ್ಲೇ ಇದು ವಿಶೇಷ. ಸಾಹಿತ್ಯ ಪರಿಷತ್ತನ್ನು ಜನ ಪರಿಷತ್ತನ್ನಾಗಿ ಮಾಡಲೇಬೇಕು. ಡಾ. ತಿಮ್ಮನಹಳ್ಳಿ ವೇಣುಗೋಪಾಲ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ತಮಗೆ ಸಂತಸ ತಂದಿದೆ ಎಂದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಎಂ.ಎಸ್.ರವಿಕುಮಾರ್ ಕಟ್ಟೆಮನೆ ಮಾತನಾಡಿ, ಸಾಹಿತ್ಯ ಪರಿಷತ್ತನ್ನು ಚಳವಳಿ ರೂಪದಲ್ಲಿ ತೆಗೆದುಕೊಂಡು ಹೋಗುತ್ತಿದ್ದೇವೆ. ಗುಣಾತ್ಮಕ ಸಮ್ಮೇಳನ ಮಾಡಿದ ಆತ್ಮ ಸಂತೋಷವಿದೆ. ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಪರಿಷತ್ ಕ್ರಿಯಾಶೀಲವಾಗಿರಲಿದೆ. ಮುಂದಿನ ದಿನಗಳಲ್ಲೂ ಸಮ್ಮೇಳನಗಳನ್ನು ಗುಣಾತ್ಮಕವಾಗಿ ಕಟ್ಟಲು ಪ್ರಯತ್ನಿಸುತ್ತೇವೆ ಎಂದರು.
ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದೇನೆ. ಸಮ್ಮೇಳನದ ಲೆಕ್ಕಪತ್ರಗಳನ್ನು ನೀಡುತ್ತೇವೆ.
ಮುಂದಿನ ವರ್ಷದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹುಳಿಯಾರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಘೋಷಿಸಿದರು.
ಇದೇ ವೇಳೆ ಡಾ. ಎಂ.ವಿ. ನಾಗರಾಜರಾವ್ ಅವರ ನದಿಯ ದಡದ ಮೆಟ್ಟಿಲು, ಹುಳಿಯಾರು ಷಬ್ಬೀರ್ ಅವರ ಗುಜರಿ, ಜೆ. ಪ್ರವೀಣ್ ಅವರ ಜೆ.ಪಿ. ಡಬ್ಬ ಕೃತಿಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಸಿ.ಟಿ.ಮುದ್ದುಕುಮಾರ್ ಬಿಡುಗಡೆ ಮಾಡಿದರು.
ಈ ವೇಳೆ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಎಂ.ಎನ್. ಶೇಖರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಅಪರ ನಿರ್ದೇಶಕ ಸಿ.ಟಿ.ಮುದ್ದುಕುಮಾರ್, ಸಮ್ಮೇಳನಾಧ್ಯಕ್ಷ ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಎಂ.ಎಸ್.ರವಿಕುಮಾರ್, ಪರಶಿವಮೂರ್ತಿ, ವರಮಹಾಲಕ್ಷ್ಮೀ, ಯೋಗೀಶ್, ಗಂಗಾಧರ್ ಮಗ್ಗದ ಮನೆ, ಡಾ.ಸಿ ರವಿಕುಮಾರ್, ಚಂದ್ರಶೇಖರ್ ಚಿಕ್ಕ ರಾಂಪುರ, ಮತ್ತಿತರರು ಉಪಸ್ಥಿತರಿದ್ದರು.
ವರದಿ : ಚಿಕ್ಕನಾಯಕನಹಳ್ಳಿ ಚಂದ್ರು.

