ಜಲ ಜೀವನ್ ಮಿಷನ್ ಯೋಜನೆಯಡಿ 9 ಹಳ್ಳಿಗಳಿಗೆ ಸುಮಾರು 8 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ವೀರಭದ್ರಯ್ಯ ಚಾಲನೆ.

 ಮಧುಗಿರಿ : ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ನೀಡುವ ಕಾರ್ಯಕ್ರಮದಡಿ ತಾಲೂಕಿನ 9 ಹಳ್ಳಿಗಳಿಗೆ ಸುಮಾರು 8 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು. 


ತಾಲೂಕಿನ ದೊಡ್ಡೇರಿ ಹೋಬಳಿಯ ಕಿತ್ತಗಳಿ, ತಿಪ್ಪನಹಳ್ಳಿ, ಆವಿನಮಡುಗು, ದಂಡಿನದಿಬ್ಬ, ತಿಮ್ಮಲಾಪುರ, ಆರ್.ಎನ್.ರೊಪ್ಪ, ಜಡೇಗೊಂಡನಹಳ್ಳಿ, ಮರುವೇಕೆರೆ ಹಾಗೂ ಭಕ್ತರಹಳ್ಳಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಭೀಕರ ಬರಗಾಲದ ಸಮಯದಲ್ಲಿ ಕುಡಿಯುವ ನೀರಿಗೂ ಹಾಗೂ ಜಾನುವಾರುಗಳ ಮೇವಿಗೂ ತಾತ್ವಾರವಿತ್ತು. ಅದರಂತೆ 6 ಕೋಟಿ ವೆಚ್ಚದಲ್ಲಿ ಮೇವನ್ನು ಮನೆ ಮನೆಗೆ ಹಂಚಿದ ತೃಪ್ತಿಯಿದ್ದು, 300 ಕೊಳವೆಬಾವಿ ಕೊರೆಸಲಾಗಿತ್ತು. ಕುಮಾರಸ್ವಾಮಿ ಸರ್ಕಾರ ಹೋದ ನಂತರ ಬಂದ ಬಿಜೆಪಿ ಸರ್ಕಾರ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಾಗ ತಾರತಮ್ಯ ಮಾಡಿದ್ದು ಅಭಿವೃದ್ಧಿಗೆ ಕೊಂಚ ಹಿನ್ನಡೆಯಾಗಿತ್ತು. ಆದರೂ ಹಿಂದಿಗಿಂತ ಅತಿ ಹೆಚ್ಚು ಅನುದಾನವನ್ನು ತಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.

ಪಂಚರತ್ನವನ್ನು ಬೆಂಬಲಿಸಿ : 

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಡಿನ ಬಡವರ ಅಭಿವೃದ್ಧಿಗಾಗಿ ಪಂಚರತ್ನ ಯೋಜನೆ ಜಾರಿಗೆ ಮುಂದಾಗಿದ್ದು ಸಂಪೂರ್ಣ ಬಹುಮತವನ್ನು ಬಯಸಿದ್ದಾರೆ. ಇದೊಂದು ಬಾರಿ ನನಗೆ ಅ„ಕಾರ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ, ಗ್ರಾ.ಪಂ. ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆಯೊಂದಿಗೆ ಎಲ್ಲರಿಗೂ ಉಚಿತ ಆರೋಗ್ಯ, ರೈತ ಚೈತನ್ಯ ಯೋಜನೆಯಡಿ ಪ್ರತಿ ಎಕರೆಗೆ 10 ಸಾವಿರ, ಪ್ರತಿಯೊಂದು ಕುಟುಂಬಕ್ಕೆ ಮನೆ, ಸೀ ಶಕ್ತಿ ಸಾಲ ಮನ್ನಾ, ವೃದ್ಧರಿಗೆ 5 ಸಾವಿರ ವಿಧವೆಯರಿಗೆ 2500 ಹಾಗೂ ದುಡಿಯುವ ಕೈಗೆ ಉದ್ಯೋಗವನ್ನು ನೀಡುವ ಯೋಜನೆ ತಯಾರಿಸಿದ್ದಾರೆ. ಅದಕ್ಕೆ ಪೂರಕವೆಂಬಂತೆ ಕುಮಾರಸ್ವಾಮಿ ಮಧುಗಿರಿಯಲ್ಲಿ ಈಗಾಗಲೇ ಕೈಗಾರಿಕಾ ವಲಯ ನೀಡಿದ್ದಾರೆ. ಅದಕ್ಕಾಗಿ ಎಲ್ಲರೂ ಈ ಬಾರಿ ಜೆಡಿಎಸ್ ಬೆಂಬಲಿಸಬೇಕು. ಇದರೊಂದಿಗೆ ಮತ್ತೊಮ್ಮೆ ನಿಮ್ಮ ಸೇವೆ ಮಾಡಲು ಹಾಗೂ ಮಧುಗಿರಿಯ ಶಾಶ್ವತ ಸಮಸ್ಯೆಗಳ ಪರಿಹಾರಕ್ಕಾಗಿ ನನಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಸಾಲಮನ್ನಾ ದಾಖಲೆ :  

ಮಗುವಿನ ಮನಸ್ಸಿನ ಕುಮಾರಸ್ವಾಮಿ ನುಡಿದಂತೆ ಸಂಪೂರ್ಣ ಸಾಲಮನ್ನಾಗೆ ಮುಂದಾಗಿದ್ದರು. ಆದರೆ ಕಾಂಗ್ರೆಸ್‍ನವರ ಅಸಹಕಾರವಿದ್ದರೂ 25 ಸಾವಿರ ಕೋಟಿ ಸಾಲಮನ್ನಾ ಮಾಡಿ ದೇಶದಲ್ಲಿ ದಾಖಲೆ ಬರೆದರು. ಇಂತಹ ಕುಮಾರಸ್ವಾಮಿ ಮತ್ತೆ ಸಿಎಂ ಆದರೆ ಪಂಚರತ್ನ ಸಂಪೂರ್ಣ ಅನುಷ್ಠಾನವಾಗಲಿದ್ದು ನಾಡು ಬಡತನ ಮುಕ್ತವಾಗಲಿದೆ ಎಂದರು. 

ಈ ಸಂದರ್ಭದಲ್ಲಿ ಜೆಡಿಎಸ್ ಅಧ್ಯಕ್ಷ ಬಸವರಾಜು, ಎಸ್ಸಿ ಘಟಕದ ಅಧ್ಯಕ್ಷ ಶಿವಣ್ಣ, ಮುಖಂಡರಾದ ತುಂಗೋಟಿ ರಾಮಣ್ಣ, ರಾಧಮ್ಮ, ಬಾವಿಮನೆ ಕಾಂತಣ್ಣ, ಬಿಜವರ ಶ್ರೀನಿವಾಸ್, ನಾಗಭೂಷಣ್, ಹನುಮಪ್ಪ, ತಿಮ್ಮಯ್ಯ, ಸತೀಶ್, ಗೋವಿಂದರಾಜು, ಸಿದ್ದೇಶ್, ಎಇಇ ರಾಮದಾಸು, ಗುತ್ತಿಗೆದಾರ ಆನಂದ್, ಗ್ರಾ.ಪಂ. ಅಧ್ಯಕ್ಷರುಗಳಾದ ಜ್ಯೋತಿ, ಸುಮ, ಬಾಣದ ರಂಗಯ್ಯ, ಪಿಡಿಓಗಳಾದ ಶಿಲ್ಪಾ, ಜುಂಜೇಗೌಡ, ಶಿವಕುಮಾರ್, ಪ್ರಶಾಂತ್, ಸದಸ್ಯ ವಿಜಯಪ್ರಕಾಶ್, ಚೌಡಪ್ಪ, ಕಾಮರಾಜ್ ಇತರರಿದ್ದರು. 


ವರದಿ : ಮಧುಗಿರಿ ಬಾಲು ಪಣೀಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು