ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ಹೊಣೆ ನಮ್ಮೆಲ್ಲರದು ಅಮರ ಜ್ಯೋತಿ ಯುವಕ ಸಂಘದ ರಾಜ್ಯ ಸಂಯೋಜಕ ಕಾರ್ತಿಕ್.

 ಗುಬ್ಬಿ : ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅಮರ ಜ್ಯೋತಿ ಯುವಕ ಸಂಘದ ರಾಜ್ಯ ಸಂಯೋಜಕ  ಕಾರ್ತಿಕ್  ತಿಳಿಸಿದರು.


  ಪಟ್ಟಣದ ಬಿ ಆರ್ ಸಿ ಕಚೇರಿಯಲ್ಲಿ ನಡೆದ ಶಿಕ್ಷಕರ ಹಾಗೂ ಮಕ್ಕಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರೋನ ಅಂತ ಸಂದರ್ಭದಲ್ಲಿ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವು ಮೂಡಿತ್ತು  ಸಮಸ್ಯೆ ಬರುವುದಕ್ಕಿಂತ  ಮುಂಚೆಯೇ  ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರೆ  ಜಾಗೃತಿ ಬಹಳ ಮುಖ್ಯ  ನಮ್ಮ ಸಂಸ್ಥೆಯು  ದೇಶದ ಎಲ್ಲಾ ಭಾಗಗಳಲ್ಲಿಯೂ ಸಹ  ಶಿಕ್ಷಕರಿಗೆ ಜಾಗೃತಿ ಮೂಡಿಸಿ  ಅದರ ಮೂಲಕ ಮಕ್ಕಳಿಗೆ  ಸ್ವಚ್ಛತೆ ಮತ್ತು ನೈರ್ಮಲ್ಯದ ಅರಿವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.


 ಕ್ಷೇತ್ರ ಶಿಕ್ಷಣಾಧಿಕಾರಿ  ಸೋಮಶೇಖರ್ ಮಾತನಾಡಿ  ಸಮಾಜವನ್ನು ಕಟ್ಟುವುದರಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು ವಿದ್ಯಾರ್ಥಿಗಳು ಪೋಷಕರ ಮಾತಿಗಿಂತ  ಶಿಕ್ಷಕರ ಮಾತು ಅವರಿಗೆ ವೇದವಾಕ್ಯ  ಹಾಗಾಗಿ ಶಾಲಾ ಹಂತದಲ್ಲಿ  ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಸಾಯೋಜಕಿ ಪದ್ಮಶ್ರೀ ಮಾತನಾಡಿ ತುಮಕೂರು ಜಿಲ್ಲೆಯಲ್ಲಿ  ಗುಬ್ಬಿ ಹಾಗೂ ತುಮಕೂರು ಗ್ರಾಮಾಂತರ ಭಾಗದ  200 ಆಯ್ದ ಶಿಕ್ಷಕರಿಗೆ  ಜಾಗೃತಿ ಕಾರ್ಯಕ್ರಮ ಏರ್ಪಡಿಸಿದ್ದು  ಇದರ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ  ಸಮಾಜದಲ್ಲಿ ಸ್ವಚ್ಛತೆ ಮತ್ತು ನೈಮಲ್ಯದ  ವಿಚಾರವನ್ನು ತಿಳಿಸುವ ಕೆಲಸ ಮಾಡುತ್ತಿ ದ್ದೇವೆ ಎಂದು ತಿಳಿಸಿದರು.

 ಇದೇ ಸಂದರ್ಭದಲ್ಲಿ ಬಿ ಆರ್ ಸಿ  ಮಧುಸೂದನ್  ತಾಲೂಕು  ಸಂಯೋಜಕ  ವಿಜಯ್ ಸೇರಿದಂತೆ ಗುಬ್ಬಿ ತಾಲೂಕಿನ ಶಿಕ್ಷಕರು ಭಾಗವಹಿಸಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು