ಮಧುಗಿರಿ : ಒಂದು ಶಾಲೆಯಲ್ಲಿ 500 ರಿಂದ 600 ಜನ ವಿದ್ಯಾರ್ಥಿಗಳು ಇರುತ್ತಾರೆ. ಪ್ರತಿಯೊಬ್ಬರು ಒಂದೊಂದು ಸಸಿಯನ್ನು ಇಟ್ಟರೆ ಸಾವಿರಾರು ಮರಗಳಾಗುತ್ತದೆ ಇದರಿಂದ ಪರಿಸರ ಬೆಳೆಸಿದಂತಾಗುತ್ತದೆ ಎಂದು ಕಲ್ಪವೃಕ್ಷ ಯುವ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಪರಮೇಶ್.ಜಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಶಾಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಬೆಂಗಳೂರು ಶ್ರೀ ಕಲ್ಪವೃಕ್ಷ ಯುವ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ಇವರ ಮಧುಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಸಾಕಷ್ಟು ಜನ ಮರವನ್ನು ಕಡಿಯುತ್ತಾರೆ ಅದನ್ನು ತಡೆಗಟ್ಟುವಂತಹ ಕೆಲಸವನ್ನು ಪ್ರತಿಯೊಬ್ಬ ನಾಗರಿಕರು ಮಾಡಬೇಕು. ಕಾಡನ್ನು ಬೆಳೆಸಬೇಕು ಕಾಡನ್ನು ನಾಶ ಮಾಡಬಾರದು. ಕಾಡಿನಲ್ಲಿರುವ ಪ್ರತಿಯೊಂದು ಪ್ರಾಣಿ ಪಕ್ಷಿಗಳನ್ನು ಸಹ ನಾಶ ಮಾಡಬಾರದು. ಪ್ರತಿಯೊಬ್ಬರೂ ಪರಿಸರವನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ವಿ.ರಾಜಣ್ಣ,
ಶಾಲೆಯ ಶಿಕ್ಷಕರಾದ ಹನುಮಂತರಾಯಪ್ಪ, ವನಜ, ಸುಜಾತ, ಜಿಕೆಪಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ವರದಿ : ಮಧುಗಿರಿ ಬಾಲುಪಣಿಂದ್ರ.
