ಕಾಂಗ್ರೆಸ್ ಪಕ್ಷದಿಂದ ಆಯೋಜನೆ ಮಾಡಿದ ಕಾಂಗ್ರೆಸ್ ಮತಗಟ್ಟೆಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆ

 ಗುಬ್ಬಿ : ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ನಾಯಿ ಬಂದರೂ ಗೆಲ್ಲುತ್ತೆ ಎಂಬ ಮಾತಿತ್ತು ನಾಯಿಗೆ ಖಂಡಿತವಾಗಿಯೂ ನಿಯತ್ತು ಇದೆ ಆದರೆ ಕೆಲವು ನರಿಗಳು ಬಂದಿರುವುದರಿಂದ ಅವುಗಳಿಗೆ ಅವಕಾಶವಿಲ್ಲ ಎಂದು ಕಾಂಗ್ರೆಸ್ ಮುಖಂಡ ಜಿಎಸ್ ಪ್ರಸನ್ನ ಕುಮಾರ್ ತಿಳಿಸಿದರು.


 ಪಟ್ಟಣದ ಎಸ್ಎಂ ಪ್ಯಾಲೇಸ್ ನಲ್ಲಿ ಕಾಂಗ್ರೆಸ್ ಪಕ್ಷದಿಂದ ಆ ಯೋಜನೆ ಮಾಡಿದ ಕಾಂಗ್ರೆಸ್ ಮತಗಟ್ಟೆಯ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ಅವರು ಕಾಂಗ್ರೆಸ್ ಪಕ್ಷದಲ್ಲಿ ಬುದ್ದಿವಂತರು ವಿಚಾರವಂತರು ಸಾಕಷ್ಟು ಜನರಿದ್ದು ಪಕ್ಷವನ್ನು ಕಟ್ಟಿರುವಂತಹ ದೊಡ್ಡ ದೊಡ್ಡ ವ್ಯಕ್ತಿಗಳು ನಮ್ಮ ಜೊತೆಯಾಗಿದ್ದಾರೆ ಹಾಗಾಗಿ ನಾವು ಯಾರು ಸಹ ಆತಂಕ ಪಡುವ ಅವಶ್ಯಕತೆ ಇಲ್ಲ ಡಾ. ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ರಾಜ್ಯ ಮುಂದುವರಿಯುತ್ತದೆ 20 ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತರನ್ನ ದೂರವಿಟ್ಟಿರುವಂತಹ ಅವರಿಗೆ ಮಣೆ ಹಾಕುವ ಅವಶ್ಯಕತೆ ಇಲ್ಲ ಹಾಗಾಗಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಖಂಡಿತವಾಗಿಯೂ ಒಳಿತಾಗುತ್ತದೆ ಹಾಗಾಗಿ ಮುಖಂಡ ಹೊನ್ನಗಿರಿ ಗೌಡ್ರು ಹಿಂದೆ ಸರಿಯುವುದು ಬೇಕಿಲ್ಲ ಎಂದು ತಿಳಿಸಿದರು.

ಮಾಜಿ ಜಿಲ್ಲಾ ಅಧ್ಯಕ್ಷ ರಾಮಕೃಷ್ಣ ಮಾತನಾಡಿ ಪಕ್ಷಕ್ಕಾಗಿ ದುಡಿದವರಿಗೆ ಯಾರಿಗೆ ಟಿಕೆಟ್ ನೀಡಿದರೂ ಸಹ ನಾವೆಲ್ಲರೂ ಸೇರಿ ಅವರನ್ನು ಗೆಲ್ಲಿಸೋಣ ಒಟ್ಟಾಗಿ ಇರೋಣ ಎಂದು ತಿಳಿಸಿದರು.

ಇದೆ ಸಂದರ್ಭದಲ್ಲಿ 

 ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಮುರುಳಿದ ಹಾಲಪ್ಪ ಹೊನ್ನಗಿರಿ ಗೌಡ, ತಾಲೂಕು ಅಧ್ಯಕ್ಷ ನರಸಿಂಹಯ್ಯ,ಕೆಪಿಸಿಸಿ ಸದಸ್ಯ ತಾತಯ್ಯ, ಮುಖಂಡರಾದ ಎಂ.ವಿ.ಶ್ರೀನಿವಾಸ್, ಶಶಿಕಿರಣ್, ಪುಟ್ಟೇಗೌಡ, ಲಿಂಗರಾಜ್, ನರಸಿಂಹಯ್ಯ, ಸೌಭಾಗ್ಯಮ್ಮ, ಮಹಮ್ಮದ್ ಸಾಧಿಕ್, ಜಿ.ವಿ.ಮಂಜುನಾಥ್, ಜಿ.ಎಂ.ಶಿವಾನಂದ್, ಶಿವಣ್ಣ ಜಿ.ಎಸ್.ಮಂಜುನಾಥ್, ರಂಗನಾಥ್, ಹೇಮಂತ್, ಸಿದ್ದೇಶ್, ಪಣಿಂದ್ರ, ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು