ಗುಬ್ಬಿ ಸುದ್ದಿ : ನಿಟ್ಟೂರು ಗ್ರಾ. ಪಂ. ಅಧ್ಯಕ್ಷರಾಗಿ ಎನ್.ಸಿ ನರಸಯ್ಯ ಗೆಲುವು.
ತಾಲ್ಲೂಕಿನ ನಿಟ್ಟೂರು ಹೋಬಳಿಯ ನಿಟ್ಟೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆಯ ಪ್ರಕ್ರಿಯೆಯನ್ನು ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ ಆರತಿ ನಡೆಸಿದರು.
ಈ ಹಿಂದೆ ಇದ್ದ ಅಧ್ಯಕ್ಷೆ ಸ್ಥಾನಕ್ಕೆ ಅನ್ನಪೂರ್ಣಮ್ಮ ರಾಜೀನಾಮೆ ನೀಡಿದ ಕಾರಣ, ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ , ಗ್ರಾಂ. ಪ ಯಲ್ಲಿ 21 ಜನ ಸದಸ್ಯರಿದ್ದು, ಅದರಲ್ಲಿ19 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರು ಸ್ಪರ್ಧಿಸಿದ್ದರು 1).ಮಂಗಳ ಗೌರಮ್ಮಗೆ 06 ಮತ, 2).ಎನ್ ಸಿ ನರಸಯ್ಯ 13 ಮತ ಪಡೆದು ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು.
ನೂತನ ಅಧ್ಯಕ್ಷ ಎನ್ ಸಿ ನರಸಯ್ಯ ಸುದ್ದಿಗಾರರೊಂದಿಗೆ ಮಾತನಾಡಿ ನಾನು ಸರ್ವ ಸದಸ್ಯರ ಒಪ್ಪಿಗೆ ಪಡೆದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಚರಂಡಿ, ರಸ್ತೆ, ನೀರಾವರಿ ಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಹಾಗೂ ಮೂಲಭೂತ ಸೌಕರ್ಯಗಳು ಮತ್ತು ಸ್ವಚ್ಛತೆಯ ಕಡೆಗೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಹಾಗೆಯೇ ಈ ಸ್ವತ್ತು ಗೆ ಸಂಬಂಧಪಟ್ಟಂತೆ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು ಕೆಲಸ ಮಾಡುತ್ತೇನೆ, ನಮ್ಮ ಗ್ರಾಮ ಪಂಚಾಯಿತಿಯನ್ನು ಅಭಿವೃದ್ಧಿ ಪಡಿಸಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡಲು ಶ್ರಮಿಸುತ್ತೇನೆ ಎಂದು ತಿಳಿಸಿದರು.
ನಂತರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು, ಮುಖಂಡರುಗಳಾದ ಎನ್ ಸಿ ಪ್ರಕಾಶ್, ಎಸ್ ಡಿ ದಿಲೀಪ್ ಕುಮಾರ್, ಪಿಬಿ ಚಂದ್ರಶೇಖರ ಬಾಬು, ಎಚ್ ಸಿ ಪ್ರಬಣ್ಣ, ಎನ್ ಎಸ್ ಜಗದೀಶ್, ಎನ್ ಸಿ ಗಿರೀಶ್, ಬಿ ಆರ್ ನಾಗರಾಜು, ಎನ್ ಸಿ ರವೀಶ್, ಎನ್ ಮಂಜುನಾಥ್, ಎನ್ ಎಂ ರಮೇಶ್ ಸಿದ್ದಲಿಂಗ ಮೂರ್ತಿ ಹಾಗೂ ಇನ್ನಿತರರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ : ಮಡೇನಹಳ್ಳಿ ಮಂಜು
